ದೇಶ

ಡ್ರಗ್ ಪೆಡ್ಲರ್ ಗಳಿಗೆ ಸುಲಭ ತುತ್ತಾಗುತ್ತಿರುವ ಐಟಿ ಉದ್ಯೋಗಿಗಳು: ಕೇರಳ ಪೊಲೀಸರ ಕಾರ್ಯಾಚರಣೆ

Harshavardhan M

ಕೊಚ್ಚಿ: ಕೇರಳದ ಕುಖ್ಯಾತ ಡ್ರಗ್ ಮಾರಾಟ ತಂಡವಾದ 'ತಿರಿಕ್ಕಕರ ಗ್ಯಾಂಗ್' ಸದಸ್ಯರ ಮುಖ್ಯ ಟಾರ್ಗೆಟ್ ಐಟಿ ಉದ್ಯೋಗಿಗಳು ಎನ್ನುವ ಆತಂಕಕಾರಿ ಸಂಗತಿ ಪೊಲೀಸ್ ತನಿಖೆಯಿಂದ ದೃಢಪಟ್ಟಿದೆ. ಇದರಿಂದಾಗಿ ಟೆಕ್ಕಿ ಗಳಲ್ಲಿ ಮಾದಕ ವ್ಯಸನ ಹೆಚ್ಚುತ್ತಿರುವ ಕುರುಹು ದೊರೆತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಕೊಚ್ಚಿಯ ತಿರಿಕ್ಕಕರ ಪ್ರದೇಶದಲ್ಲಿ ಅಪಾರ್ಟ್ ಮೆಂಟ್ ಒಂದರ ಮೇಲೆ ದಾಳಿ ನಡೆಸಿದ್ದ ಪೊಲೀಸರು ಮೂವರು ಟೆಕ್ಕಿಗಳನ್ನು ಬಂಧಿಸಿದ್ದರು. ಬಂಧಿತರಲ್ಲಿ ಓರ್ವ ಮಹಿಳೆಯೂ ಸೇರಿದ್ದಳು. ಮೂವರೂ ಕೊಚ್ಚಿಯ ದೊಡ್ಡ ಐಟಿ ಸಂಸ್ಥೆಯ ಉದ್ಯೋಗಿಗಳು.

ಬಂಧಿತ ಆರೋಪಿಗಳು ಐಟಿ ಉದ್ಯೋಗಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಅವರ ಬಳಿ ಎಂಡಿಎಂಎ, ಎಸ್ ಎಸ್ ಡಿ, ಹಶಿಶ್ ದೊರೆತಿದ್ದವು.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸರು ಮುಂದಿನ ದಿನಗಳಲ್ಲಿ ಬಂಧಿತ ಆರೋಪಿಗಳಿಂದ ಅವರ ಗ್ರಾಹಕರ ಮಾಹಿತಿ ಪಡೆದು ಅವರಿಗೆ ಸಮನ್ಸ್ ಕಳುಹಿಸುವುದಾಗಿ ತಿಳಿಸಿದ್ದಾರೆ.

SCROLL FOR NEXT