ಫ್ಯಾಷನ್ ಶೋನಲ್ಲಿ ರಾಂಪ್ ವಾಕ್ ಮಾಡಿದ ಆದಿವಾಸಿ ಹುಡುಗಿ: ಪ್ರತಿಸ್ಪರ್ಧಿಗಳ ಮೆಚ್ಚುಗೆ
ಕೇರಳ ರಾಜ್ಯದ ಪ್ರತಿಷ್ಟಿತ ಮಿಸ್ ಕೇರಳ ಫ್ಯಾಷನ್ ಶೋಗೆ ದೇಶಾದ್ಯಂತ 500 ಮಂದಿ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ ಅನುಪ್ರಸೋಬಿನಿಯೂ ಒಬ್ಬಳಾಗಿದ್ದಳು.
ಪಾಲಕ್ಕಾಡ್: ಅನುಪ್ರಸೋಬಿನಿ, ಆದಿವಾಸಿ ಜನಾಂಗಕ್ಕೆ ಸೇರಿದ ಹುಡುಗಿ. ಪಾಲಕ್ಕಾಡ್ ನ ಚೊರಿಯಾನೂರ್ ಎಂಬಲ್ಲಿ ಆಕೆಯ ಕುಟುಂಬ ನೆಲೆಸಿದೆ. ಆಕೆ ಫ್ಯಾಷನ್ ಶೋ ನಲ್ಲಿ ರಾಂಪ್ ವಾಕ್ ಮಾಡಿದ್ದು, ಈ ಸಾಧನೆ ಮಾಡಿದ ಮೊದಲ ಆದಿವಾಸಿ ಹೆಣ್ಣುಮಗಳು ಎನ್ನುವ ಹೆಸರಿಗೆ ಅನುಪ್ರಸೋಬಿನಿ ಪಾತ್ರಳಾಗಿದ್ದಾಳೆ.
17 ವರ್ಷದ ಆಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ಕೇರಳ ರಾಜ್ಯದ ಪ್ರತಿಷ್ಟಿತ ಮಿಸ್ ಕೇರಳ ಫ್ಯಾಷನ್ ಶೋಗೆ ದೇಶಾದ್ಯಂತ 500 ಮಂದಿ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ ಅನುಪ್ರಸೋಬಿನಿಯೂ ಒಬ್ಬಳಾಗಿದ್ದಳು.
ಫ್ಯಾಷನ್ ಶೋ ನ ವಿವಿಧ ಹಂತಗಳ ನಂತರ, ಅಂತಿಮ ಸುತ್ತಿನಲ್ಲಿ 33 ಪ್ರತಿಸ್ಪರ್ಧಿಗಳು ಆಯ್ಕೆಯಾಗಿದ್ದಾರೆ. ಅವರಲ್ಲಿ ಈಕೆಯೂ ಒಬ್ಬಳು. ಆಕೆಗೆ ಪ್ರತಿಸ್ಪರ್ಧಿಗಳ ಪ್ರೋತ್ಸಾಹ ಮತ್ತು ಪ್ರೀತಿ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾಳೆ.
Related Article
ದೇಶಿ ಕಾಳುಮೆಣಸು ಬೆಳೆ ಸಂರಕ್ಷಣೆಗಾಗಿ ಕೊಡಗಿನ ರೈತನಿಗೆ ಪ್ರಶಸ್ತಿ
ಅಜೀಂ ಪ್ರೇಮ್ ಜಿ ಯುನಿವರ್ಸಿಟಿ ಯಿಂದ ಹಳೆಯ ಪಠ್ಯಪುಸ್ತಕಗಳ ಸಂಗ್ರಹ ಲೋಕಾರ್ಪಣೆ
ಪ್ರಖ್ಯಾತ ಶಾಸ್ತ್ರೀಯ ಸಂಗೀತಗಾರ ಕುಟುಂಬದ ಮೂರನೇ ತಲೆಮಾರಿನ ಮಹತಿ ಸುಬ್ರಮಣಿಯಂ ಮ್ಯೂಸಿಕ್ ವಿಡಿಯೊ ಬಿಡುಗಡೆ
ಪ್ರವಾಹದಿಂದ ರಕ್ಷಿಸಲ್ಪಟ್ಟ ಹೆಣ್ಣುಮಗುವಿನ ಹುಟ್ಟುಹಬ್ಬ ಅಚರಿಸಿದ ಚೆನ್ನೈ ಪೊಲೀಸರು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.