ವಿಶೇಷ

ಭೂಮಿಯಡಿ ಸಿಲುಕಿದ ಗಣಿಕಾರ್ಮಿಕರು: 22 ಗಂಟೆಗಳ ಕಾಲ ಮಣ್ಣು ಅಗೆದು ಸ್ವಪ್ರಯತ್ನದಿಂದ ಸಮಾಧಿಯಿಂದ ಮೇಲೆದ್ದು ಬಂದರು

Harshavardhan M

ರಾಂಚಿ: ಬೊಕೆರೊದಲ್ಲಿನ ಕಲ್ಲಿದ್ದಲು ಗಣಿಯಲ್ಲಿ ಕುಸಿತ ಸಂಭವಿಸಿ ನಾಲ್ವರು ಕಾರ್ಮಿಕರು ಭೂಮಿಯಡಿ ಸಿಲುಕಿಕೊಂಡಿದ್ದರು. ಅವರು ಸತ್ತರೆಂದೇ ಎಲ್ಲರೂ ತಿಳಿದಿದ್ದರು. ಆದರೆ 22 ಗಂಟೆಗಳ ನಂತರ ಭೂಮಿಯಡಿ ಸಿಲುಕಿಕೊಂಡಿದ್ದ ನಾಲ್ವರೂ ಸುರಕ್ಷಿತವಾಗಿ ಹೊರಬಂದಿದ್ದಾರೆ. 

ಅಚ್ಚರಿ ಮೂಡಿಸುವ ಸಂಗತಿ ಎಂದರೆ ಅವರು ಜೀವಂತವಾಗಿ ಭೂಮಿಯಡಿಯಿಂದ ಮೇಲೆದ್ದು ಬರಲು ಕಾರಣವಾಗಿದ್ದು ರಕ್ಷಣಾ ತಂಡದ ಕಾರ್ಯಾಚರಣೆಯಿಂದಲ್ಲ. ಸ್ವಪ್ರಯತ್ನದಿಂದ. 

ಭೂಮಿಯಡಿ ಸಿಲುಕಿದ್ದ ನಾಲ್ವರೂ ಸುಮ್ಮನೆ ಕೈಕಟ್ಟಿ ಕೂರಲಿಲ್ಲ. ತಮ್ಮ ಬಳಿಯಿದ್ದ ಉಪಕರಣ ಬಳಸಿ ಒಳಗಿನಿಂದಲೇ ಮಣ್ಣನ್ನು ಅಗಿಯುತ್ತಾ ಬಂದರು.ಅದರ ಫಲವಾಗಿ ಅವರಿಂದು ಜೀವಂತವಾಗಿ ಮರಳಿದ್ದಾರೆ. 

ಇದಕ್ಕೂ ಮುನ್ನ ಅವರ ರಕ್ಲ್ಷಣೆಗೆ ಎನ್ ಡಿ ಆರ್ ಎಫ್ ತಂಡ ಧಾವಿಸಿತ್ತು. ಆದರೆ ಕಾರ್ಮಿಕರು ಗಣಿಯ ಯಾವ ಭಾಗದಲ್ಲಿದ್ದಾರೆ ಎನ್ನುವುದು ತಿಳಿಯದ ಕಾರಣ ರಕ್ಷಣಾ ತಂಡದ ಕಾರ್ಯಾಚರಣೆ ಫಲ ನೀಡಿರಲಿಲ್ಲ. 

ಭೂಮಿಯಡಿ ಸಿಲುಕಿಕೊಂಡಿದ್ದ ನಾಲ್ವರೂ ಅಕ್ರಮ ಗಣಿಗಾರಿಕೆ ಮಾಡಲು ಗಣಿಯೊಳಗೆ ಇಳಿದಿದ್ದರು ಎಂದು ತಿಳಿದುಬಂದಿದೆ. ಕೆಲಸ ಇಲ್ಲದ ಕಾರನ ತಾವು ಈ ಕೆಲಸಕ್ಕೆ ಇಳಿದಿದ್ದಾಗಿ ನಾಲ್ವರಲ್ಲೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

SCROLL FOR NEXT