ವಿಶೇಷ

ಡ್ರೋನ್ ಬಳಸಿ ಆಕಾಶಮಾರ್ಗದಲ್ಲಿ ಔಷಧಿ ತಲುಪಿಸುವ ಯೋಜನೆ ಪ್ರಾತ್ಯಕ್ಷಿಕೆ ಯಶಸ್ವಿ

Harshavardhan M

ಹೈದರಾಬಾದ್: ಟಿ ವರ್ಕ್ಸ್ ಸಂಸ್ಥೆ, ಹೈದರಾಬಾದ್ ಮೂಲದ ಏರ್ ಸರ್ವ್ ಸಂಸ್ಥೆ ಸಹಯೋಗದಲ್ಲಿ ಜಾರಿಯಾಗುತ್ತಿರುವ ತೆಲಂಗಾಣ ಸರ್ಕಾರದ 'ಮೆಡಿಸಿನ್ ಫ್ರಂ ಸ್ಕೈ' ಯೋಜನೆಯ ಡ್ರೋನ್ ಪ್ರಾತ್ಯಕ್ಷಿಕೆ ಪ್ರಾತ್ಯಕ್ಷಿಕೆ ಯಶಸ್ವಿಯಾಗಿದೆ.

ಔಷಧದ ಪ್ಯಾಕೇಜನ್ನು ಹೊತ್ತುಕೊಂಡು ಹಾರುವ ಡ್ರೋನ್ ತಲುಪಬೇಕಾದ ವಿಳಾಸ ತಲುಪಿ ಅಲ್ಲಿ ಔಷಧದ ಪ್ಯಾಕೇಜನ್ನು ಡ್ರಾಪ್ ಮಾಡಿ ಮತ್ತೆ ಸ್ವಸ್ಥಾನಕ್ಕೆ ಹಿಂದಿರುಗುತ್ತದೆ. ಇವಿಷ್ಟೂ ಕೆಲಸ ಮನುಷ್ಯರ ನೆರವಿಲ್ಲದೆ ನಡೆಯುತ್ತದೆ. ಈ ಡ್ರೋನ್ ಅನ್ನು ಏರ್ ಸರ್ವ್ ಸಂಸ್ಥೆ ಅಭಿವೃದ್ಧಿಪಡಿಸಿತ್ತು.

ಆದರೆ ಈ ಹಿಂದೆ ಪ್ರಾಜೆಕ್ಟ್ ನಲ್ಲಿ ಹಲವು ಸಮಸ್ಯೆಗಳು ಎದುರಾಗಿದ್ದವು. ನೂತನ ಅಪ್ ಗ್ರೇಡ್ ನಂತರ ಡ್ರೋನ್ ಅಂದುಕೊಂಡಂತೆಯೇ ಕಾರ್ಯನಿರ್ವಹಿಸುತ್ತಿದೆ. ಬುಧವಾರ ಡ್ರೋನ್ ಪ್ರಾತ್ಯಕ್ಷಿಕೆ ನಡೆಸಲಾಗಿದ್ದು, ಪ್ರಯೋಗ ಯಶಸ್ವಿಯಾಗಿದೆ. 

ಡ್ರೋನ್ ಔಷಧ ಹೊತ್ತುಕೊಂಡು 6.2 ಕಿ.ಮೀ ದೂರದ ವಿಳಾಸ ತಲುಪಿ ಸುರಕ್ಷಿತವಾಗಿ ಹಿಂದಿರುಗಿದೆ. ಡ್ರೋನ್ ಅನ್ನು ಮನುಷ್ಯರು ಆಪರೇಟ್ ಮಾಡಬಹುದಾದರೂ, ಇದರಿಂದ ಡ್ರೋನ್ ಗೆ ಹಾನಿ ತಗುಲುವ ಸಾಧ್ಯತೆ ಇರುತ್ತದೆ. ಹೀಗಾಗಿ ಸ್ವಯಂಚಾಲಿತ ಡ್ರೋನ್ ಗಳನ್ನು ಸಂಸ್ಥೆ ಅಭಿವೃದ್ಧಿಪಡಿಸಿದೆ. ಅವು ಸುರಕ್ಷಿತವಾಗಿ ಯಾವುದೇ ತೊಂದರೆಯಾಗದಂತೆ ಕೆಲಸ ನಿರ್ವಹಿಸುತ್ತದೆ

SCROLL FOR NEXT