ವಿಶೇಷ

ಭಾರತೀಯ ಮೂಲದ ಬಾಲಕಿಗೆ ಬ್ರಿಟನ್ ಪ್ರಧಾನಿ ಪ್ರಶಸ್ತಿ: ಹವಾಮಾನ ಬದಲಾವಣೆ ಜಾಗೃತಿಗೆ ಸಂದ ಗೌರವ

Harshavardhan M

ಲಂಡನ್: ಭಾರತೀಯ ಮೂಲದ 6 ವರ್ಷದ ಬಾಲಕಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಕೊಡಮಾಡುವ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾಳೆ. ಅಲೀಶಾ ಗದಿಯಾ ಹವಾಮಾನ ಬದಲಾವಣೆ ಜಾಗೃತಿ ಕಾರ್ಯಕ್ರಮಗಳಲ್ಲಿ ಸಕ್ರಿಯಳಾಗಿದ್ದಾಳೆ. 

ಜಾಗತಿಕ ತಾಪಮಾನ ಏರಿಕೆ, ಅರಣ್ಯ ನಾಶ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತವಾಗಿರುವ ಎನ್ ಜಿ ಒ ಕೂಲ್ ಅರ್ತ್ ನಲ್ಲಿ ಆಕೆ ಸದಸ್ಯೆಯಾಗಿದ್ದಾಳೆ.

ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡ ಅಲೀಶ 3 ಲಕ್ಷ ರೂ.ಗಳಷ್ಟು ದೇಣಿಗೆ ಸಂಗ್ರಹಿಸಿದ್ದಳು. ಕಾರ್ಖಾನೆಗಳು ಯಾವ ರೀತಿ ಜಗತಿನಾದ್ಯಂತ ಲಾಬಿ ಮಾಡಿ ಪರಿಸರಕ್ಕೆ ಹಾನಿಯುಂಟು ಮಾಡುತ್ತಿವೆ ಎಂಬುದರ ಕುರಿತಾಗಿ ಅಲೀಶಾ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾಳೆ.  

ಈ ಹಿಂದೆ ಅರಣ್ಯನಾಶ ಕುರಿತಾಗಿ ಗಮನ ಸೆಳೆಯಲು 80 ಕಿ.ಮೀ ಸೈಕಲ್ ರೈಡ್ ಜಾಥಾ ಹಮ್ಮಿಕೊಂಡಿದ್ದಳು. ಬ್ರಿಟನ್ ರಾಣಿ ಮತ್ತು ಜಗತ್ಪ್ರಸಿದ್ಧ ಸಿನಿಮಾ ನಿರ್ದೇಶಕ ಡೇವಿಡ್ ಅಟೆನ್ ಬರೊ ಅದಕ್ಕೆ ಬೆಂಬಲ ಸೂಚಿಸಿದ್ದರು ಎನ್ನುವುದು ವಿಶೇಷ. 

SCROLL FOR NEXT