ವಿಶೇಷ

ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯಿಂದ ಹಲವು ಮಂದಿಗೆ ಜೀವದಾನ: ಅಂತಿಮ ಕ್ಷಣದ ಆಪದ್ಬಾಂಧವ

Harshavardhan M

ಕೊಚ್ಚಿ: ಅಪಘಾತಕ್ಕೀಡಾಗಿದ್ದ ಇಡುಕ್ಕಿ ನಗರದ 46 ವರ್ಷದ ವ್ಯಕ್ತಿಯನ್ನು ಆಸ್ಪತ್ರೆಗೆ ತರುವಾಗಲೇ ಮೆದುಳು ನಿಷ್ಕ್ರಿಯಗೊಂಡಿದ್ದಾಗಿ ವೈದ್ಯರು ಹೇಳಿದ್ದರು. ಭಾರ ಹೊರುವ ಕೂಲಿ ಕೆಲಸ ಮಾಡಿಕೊಂಡಿದ್ದ ಪಿ.ಎಂ. ಸುರೇಶ್ ಆ ದುರ್ದೈವಿ. 

ವೈದ್ಯರ ಯಾವುದೇ ಚಿಕಿತ್ಸೆಗೂ ಸುರೇಶ್ ಸ್ಪಂದಿಸುತ್ತಿರಲಿಲ್ಲ. ಅವರನು ಉಳಿಸಿಕೊಳ್ಳುವುದು ಅಸಾಧ್ಯ ಎನ್ನುವುದನ್ನು ಅರಿತ ಸುರೇಶ್ ಕುಟುಂಬ ವರ್ಗ ಆ ಕಠಿಣ ಸಮಯದಲ್ಲೂ ಧೃತಿಗೆಡದೆ ಸುರೇಶ್ ಅಂಗಗಳನ್ನು ದಾನ ಮಾಡಲು ಮುಂದಾದರು.

ಅಂಗ ದಾನ ಯೋಜನೆ 'ಮೃತ ಸಂಜೀವನಿ' ಅಡಿ ಸುರೇಶ್ ಅವರ ಕಣ್ಣುಗಳು, ಕಿಡ್ನಿ, ಯಕೃತ್ತು ಭಾಗಗಳನ್ನು ಅಗತ್ಯ ಇರುವ ರೋಗಿಗಳಿಗೆ ನೀಡಿ ಅವರಿಗೆ ಮರುಜನ್ಮ ನೀಡಲಾಗಿದೆ. 

ಸುರೇಶ್ ಕುಟುಂಬದ ಕಾರ್ಯವನ್ನು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶ್ಲಾಘಿಸಿದ್ದಾರೆ. ಸುರೇಶ್ ಅವರ ಅಂಗಗಳನ್ನು ಕಸಿ ಮಾಡಲ್ಪಟ್ಟ ರೋಗಿಗಳು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

ಕುಟುಂಬ ಸದಸ್ಯನ ಅಗಲಿಕೆ ದುಃಖವನ್ನು ಭರಿಸುವ ಸಮಯದಲ್ಲಿ ಬೇರೊಬ್ಬರ ಜೀವ ಉಳಿಸುವ ಕಾರ್ಯಕ್ಕೆ ಮುಂದಾದ ಸುರೇಶ್ ಕುಟುಂಬಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. 

SCROLL FOR NEXT