ಬೈಟುಕಾಫಿ

ಟೇಸ್ಟಿ ಟೇಸ್ಟಿಹಲಸಿನ ಹಣ್ಣಿನ ಕಡುಬು..

ಹಲಸಿನ ಕಾಯಿಯ ಬಗ್ಗೆ ಎಷ್ಟು ಹೇಳಿದರೂ ಸಾಲದು ಎನಿಸುತ್ತದೆ. ಅಷ್ಟೊಂದು ವೈವಿಧ್ಯವನ್ನೊಳಗೊಂಡಿದೆ ಹಲಸು. ಇಷ್ಟೆಲ್ಲ ಹೇಳಿ ಹಲಸಿನ ಕಾಯಿಯ ಪಾಯಸದ ಬಗ್ಗೆ ಹೇಳದಿದ್ದರೆ ಹೇಗೆ? ಎಷ್ಟೊಂದು ರುಚಿಯ, ಹಿಂದಿನವರಿಗೆ ವರ್ಷಕ್ಕೊಮ್ಮೆಯಾದರೂ, ಅದೂ ಅಳಿಯನ ಅಮಾವಾಸ್ಯೆಹಬ್ಬಕ್ಕೆ ಹಲಸಿನಕಾಯಿಯ ಕೊನೆಯ ಸಿಹಿ ಅಡುಗೆಯಾದ ಪಾಯಸ (ಸೀಚಕ್ಕೆ) ಮಾಡಲೇಬೇಕು. ಹಲಸಿನಕಾಯಿ ಹಾಗೂ ಬೀಜ ಎರಡನ್ನೂ ಉಪಯೋಗಿಸಿ ಮಾಡುವ ಪಾಯಸ ಇದು.
'ಹಸಿದ ಹಲಸು, ಉಂಡ ಮಾವು' ಗಾದೆಯನ್ನು ನೀವು ಕೇಳಿರುತ್ತೀರಿ. ಹಸಿದವನ ಹೊಟ್ಟೆ ತುಂಬಿಸುತ್ತದೆ ಹಲಸಿನಹಣ್ಣು. ಪೋಷಕಾಂಶಗಳ ಖನಿಯೇ ಆಗಿರುವ ಹಲಸಿನ ಹಣ್ಣು ತಿಂದವನ ದೇಹಕ್ಕೆ ಅಧಿಕ ಪೋಷಕಾಂಶಗಳನ್ನು ನೀಡುತ್ತವೆ. ಇಷ್ಟೇ ಅಲ್ಲಿ ಇದರ ಪರಿಮಳ ಹಸಿವನ್ನು ಹೆಚ್ಚು ಮಾಡುತ್ತದೆ. ಒಂದೇ ಒಂದು ಹಲಸಿನ ತೊಳೆಯಿದ್ದರೂ, ಸಾಕು ಇಡೀ ಮನೆಯೆಲ್ಲ ಸುವಾಸನೆಯಿಂದ ತುಂಬಿಹೋಗುತ್ತದೆ. ಹಾಗಾಗಿ ಮುಚ್ಚಿಟ್ಟು ತಿನ್ನಲು ಸಾಧ್ಯವೇ ಇಲ್ಲ.
ಹಲಸಿನ ಸೀಜನ್ ಶುರುವಾಗುವುದೇ ಮೇ  ಮಧ್ಯಭಾಗದಿಂದ. ಒಂದೆರಡು ಮಳೆ ಬಿದ್ದ ಮೇಲೆ ಇದರ ರುಚಿ ಹೆಚ್ಚು. ಮಳೆ ಜೋರಾಗುತ್ತಿದ್ದಂತೆ ಈ ಹಣ್ಣು ಮರದಿಂದ ತಂತಾನೇ ಬಿದ್ದು ಕೊಳೆತುಹೋಗುತ್ತದೆ. ಹಾಗಾಗಿ ಒಂದೆರಡು ದಿನಗಳಲ್ಲಿ ಹಣ್ಣಾಗುವಂತಹ ಕಾಯಿಗಳನ್ನು ಮೊದಲೇ ಕೊಯ್ದುಬಿಡುತ್ತಾರೆ. ಇನ್ನು ಹಲಸಿನ ಹಣ್ಣಿನ ವಿಷಯಕ್ಕೆ ಬಂದಾಗ ಇಲ್ಲಿ ಹಲವಾರು ಬಗೆಯ ಹಲಸುಗಳನ್ನು ಹೇಳಲೇಬೇಕು. ಬಕ್ಕೆ ಹಣ್ಣು, ಚಂದ್ರಬಕ್ಕೆ, ಅಂಬಲಿ ಹಣ್ಣು, ಗಡ್ಡೆ ಹಲಸು. ಬಕ್ಕೆಹಣ್ಣನ್ನು ಸಾಮಾನ್ಯವಾಗಿ ಎಲ್ಲರೂ ತಿಂದೇ ಇರುತ್ತಾರೆ. ನಗರಗಳಲ್ಲೂ ಇವುಗಳ ಮಾರಾಟ ಜೋರಾಗೇ ಇರುತ್ತದೆ. ನಗರಗಳ ಜನ ಇವುಗಳನ್ನು ತೊಳೆಗಳನ್ನು ಮಾತ್ರ ತಿನ್ನುತ್ತಾರೆ ಹೊರತು ಬೇರೆ ರೀತಿಯ ಸಿಹಿ ತಿಂಡಿ ಮಾಡುವುದು ಕಡಿಮೆ ಎಂದೇ ಹೇಳಬಹುದು. ಬಕ್ಕೆಯಲ್ಲಿ ಚಂದ್ರಬಕ್ಕೆ ವಿಶೇಷವಾದುದು. ಇದು ಕೆಂಪು ಬಣ್ಣ, ವಿಶೇಷ ರುಚಿ ಹೊಂದಿರುತ್ತದೆ. ಅಂಬಲಿ ಹಣ್ಣನ್ನು ಗ್ರಾಮೀಣ ಪ್ರದೇಶಗಳಲ್ಲಿ ತಿನ್ನಲು ಹಾಗೂ ವಿಶೇಷ ಸಿಹಿ ತಿಂಡಿ ಕಡುಬು, ಮುಳಕ, ದೋಸೆ, ಸುಟ್ಟೇವು, ಸಿಹಿ ಹಪ್ಪಳ ಮಾಡಲು ಬಳಸುತ್ತಾರೆ. ಇದರ ತೊಳೆ ತುಂಬಾ ಮೃದುವಾಗಿದ್ದು, ರಸ(ಪಲ್ಪ್) ಹೆಚ್ಚಿರುತ್ತದೆ. ತೊಳೆಯನ್ನು ಗಾಳಿಸಿದರೆ ಸ್ವಲ್ಪ ನಾರಿನ ಭಾಗ ವೇಸ್ಟ್ ಆಗುತ್ತದೆ ಅಷ್ಟೆ. ಉಳಿದಂತೆ ರಸವೇ ಹೆಚ್ಚು. ಹಾಗಾಗಿ ಅಂಬಲಿ ಹಲಸು ಕಡುಬಿಗೆ ಹೇಳಿ ಮಾಡಿಸಿದಂತಿದೆ. ಕಡುಬಿಗೆ ಒಂದು ಅಳತೆಯ ಹಲಸಿನ ಹಣ್ಣಿನ ರಸ (ಅಂಬಲಿ ಹಣ್ಣಿನ ರಸ)ಕ್ಕೆ ಕಾಲುಭಾಗ ಇಡ್ಲಿ ತರಿ, ಬೆಲ್ಲ, ಏಲಕ್ಕಿಪುಡಿ, ಅರ್ಧ ಬಟ್ಟಲು ಕಾಯಿತುರಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಇಡ್ಲಿ ಬಟ್ಟಲಿನಲ್ಲಿ ಅಥವಾ ಕಡಬು ದಳ್ಳೆಯಲ್ಲಿ ಬಾಳೆಎಲೆ ಕೊಟ್ಟೆ, ಹಲಸಿನ ಎಲೆ ಕೊಟ್ಟೆಯಲ್ಲಿ ಹಾಕಿ, ಉಗಿಯಲ್ಲಿ ಬೇಯಿಸಬೇಕು. ಬೆಂದ ಕಡುಬಿಗೆ ತುಪ್ಪ ಹಾಕಿ ತಿಂದರೆ ಆಹಾ... ರುಚಿ ವರ್ಣಿಸಲು ಸಾಧ್ಯವಿಲ್ಲ, ತಿಂದೇ ರುಚಿ ಅನುಭವಿಸಬೇಕು.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!

"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ

ಸುಪ್ರೀಂಕೋರ್ಟ್​ಗೆ ನನ್ನ ಬಗ್ಗೆ ತಪ್ಪು ಮಾಹಿತಿ: ಸರ್ಕಾರದ ವಿರುದ್ಧ ಡಿಜಿಪಿ ಅಲೋಕ್ ಕುಮಾರ್ ಅಸಮಾಧಾನ!