ಯಾವಾಗಲೂ ಸೂರ್ಯನಿಗೆ ಅಭಿಮುಖವಾಗಿ ಕಾಮನ ಬಿಲ್ಲು ಮೂಡುತ್ತದೆ. ಮಳೆಯ ನೀರಿನಹನಿಗಳು ಪಟ್ಟಕದಂತೆ ವರ್ತಿಸುವುದರಿಂದ ಬಿಳಿಯ ಬೆಳಕಿನ ಕಿರಣ 'ಪೃಥಕರಣ' ಹೊಂದಿ ಬಣ್ಣದ ಕಾಮನಬಿಲ್ಲು ಮೂಡುತ್ತದೆ.
ಆದರೆ ಕೆಲವೊಂದು ಸಲ ಎರಡು ಕಾಮನಬಿಲ್ಲುಗಳನು ಒಂದರಮೇಲೊಂದನು ಕಾಣುತ್ತೇವೆ. ಮೇಲಿನ ಕಾಮನಬಿಟ್ಟು ಕೆಳಗಿನದಕ್ಕಿಂತ ಸ್ವಲ್ಪ ಮಸುಕಾಗಿರುತ್ತದೆ. ಇದನು 'ಗೌಣ' ಕಾಮನಬಿಲ್ಲು ಎನುತ್ತೇವೆ. ಬೆಳಕಿನ ಕಿರಣವು ಕೆಲವೊಮ್ಮೆ ನೀರಿನ ಹನಿಯಲ್ಲಿ ಎರಡು ಸಲ ಆಂತರಿಕ ಪ್ರತಿಫಲನ ಹೊಂದುತ್ತದೆ. ಇಲ್ಲಿ ಪ್ರತಿಫಲನ ಹೊಂದಿದ ಕೆಂಪು ಕಿರಣವು ನೀರಿನ ಹನಿಯಿಂದ 51 ಡಿಗ್ರಿ ಕೋಲದಲ್ಲಿ ನಮ್ಮ ಕಣ್ಣನು ಸೇರುತ್ತದೆ. ಆದರೆ ನೇರಳೆ ಬಣ್ಣದ ಕಿರಣವು 54 ಡಿಗ್ರಿ ಕೋಲದಲ್ಲಿ ಹೊರಬರುತ್ತದೆ. ಈ ಕಾರಣದಿಂದ ಗೌಣ ಕಾಮನಬಿಲ್ಲು ಮೂಡುತ್ತದೆ. ಗೌಣ ಕಾಮನಬಿಲ್ಲಿನ ಮೇಲ್ಪಟ್ಟಿಯು ನೇರಳೆ ಬಣ್ಣದ್ದಾಗಿರುತ್ತದೆ. ಕೆಳಗಿನ ಪಟ್ಟಿಯು ಕೆಂಪಾಗಿರುತ್ತದೆ. ಬೆಳಕು ಎರಡು ಸಲ ಪ್ರತಿಫಲನ ಹೊಂದುವುದರಿಂದ ತೀವ್ರತೆಯನು ಕೆಳೆದುಕೊಳ್ಳುತ್ತದೆ. ಇದರಿಂದಾಗಿ ಗೌಣ ಕಾಮನಬಿಲ್ಲು ಮಸುಕಾಗಿ ಕಾಣುವುದು.