ಬೈಟುಕಾಫಿ

ದೇಸಿ ದಿಸೆ

ಎಕ್ಸಾಂ ಮುಗೀತು. ಬೇಸಿಗೆಯ ಬಿಸಿಯೊಂದಿಗೆ 'ಮುಂದೆ ಯಾವ ಕೋರ್ಸ್?' ಅನ್ನೋ ಪ್ರಶ್ನೆ ತಲೆಯನ್ನು ಕಾವೇರಿಸುತ್ತದೆ.

ಎಕ್ಸಾಂ ಮುಗೀತು. ಬೇಸಿಗೆಯ ಬಿಸಿಯೊಂದಿಗೆ 'ಮುಂದೆ ಯಾವ ಕೋರ್ಸ್?' ಅನ್ನೋ ಪ್ರಶ್ನೆ ತಲೆಯನ್ನು ಕಾವೇರಿಸುತ್ತದೆ. ಅದರಲ್ಲೂ ಎಸ್ಸೆಸ್ಸೆಲ್ಸಿ, ಪಿಯುಸಿ ಆದವರಿಗೆ ಗೊಂದಲ ಹೆಚ್ಚು. ಆಯ್ಕೆಗಳೂ ಅದೇ ಹಳೇ ಸಂಗತಿಗಳೇ. ಆಟ್ಸು, ಸೈನ್ಸು, ಕಾಮರ್ಸು. ಹೊಸತಕ್ಕೆ ಜಾಗ ಎಲ್ಲಿ?
ಇದೆ... ಹಂಸಲೇಖ ದೇಸಿ ಸಂಸ್ಥೆಯಲ್ಲಿ! ಕಲೆ, ನೃತ್ಯ, ಸಂಗೀತ ಕ್ಷೇತ್ರಗಳಲ್ಲಿ ಪದವಿ ಪಡೆದು ಅವುಗಳ ಸೊಬಗಲ್ಲಿ ಜೀವನ ಅರಳಿಸಿಕೊಳ್ಳ ಬಯಸುವ ವಿದ್ಯಾರ್ಥಿಗಳಿಗೆ ಇದು ಹೊಸ ಮಾರ್ಗ. ಇಲ್ಲಿ ದೇಸಿ ಕಲೆಗಳನ್ನು ಶಾಸ್ತ್ರೀಯವಾಗಿ ಕಲಿಸ್ತಾರೆ. ಅದೂ ವಿಭಿನ ರೀತಿಯಲ್ಲಿ. ಹಂಸಲೇಖ ಹಾಡಿನಂತೆ ಅವರ ಪರಿಕಲ್ಪನೆ ಕೂಡ ಅತಿಮಧುರ.

ಶುರು ಆಗಿದೆ ಸಾರ್...
'ಬ್ಯಾಚುಲರ್ ಆಫ್ ಪರ್ಫಾಮನ್ಸ್ ಆರ್ಟ್ಸ್‌' ಹಾಗೂ 'ಬ್ಯಾಚುಲರ್ ಆಫ್ ದೇಸಿ ಮ್ಯೂಸಿಕ್‌' ಎಂಬ ಎರಡು ಪದವಿ ಕೋರ್ಸ್‌ಗಳಿಗೆ 2013-14ನೇ ಸಾಲಿಗೆ ಪ್ರವೇಶ ಪ್ರಕ್ರಿಯೆಗಳು ಆರಂಭಗೊಂಡಿವೆ. 2012-13ನೇ ಸಾಲಿನಲ್ಲಿ ಈ ಕೋರ್ಸ್‌ಗಳ ಮೊದಲ ಬ್ಯಾಚ್ ಆರಂಭವಾಗಿತ್ತು. ಇದೀಗ, ಎರಡನೇ ಬ್ಯಾಚ್‌ಗಾಗಿ ದಾಖಲಾತಿ ಪ್ರಕ್ರಿಯೆಗಳು ಶುರುವಾಗಿವೆ. ಹೀಗೆ, ಪ್ರದರ್ಶನ ಕಲೆಗಳಲ್ಲಿ ಸಾತಕ ಪದವಿಗಳನ್ನು ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಪ್ರಾರಂಭಿಸಿದ ಕೀರ್ತಿ ಈ ಸಂಸೆಯದ್ದು. ಕಲೆಯಲ್ಲಿ ಆಸಕ್ತಿಯುಳ್ಳ ಪ್ರತಿಭೆಗಳನು ಹುಡುಕಿ ತಂದು, ಇಲ್ಲಿ ಬೆಳೆಸಲು ನಿಶ್ಚಯಿಸಿದ್ದಾರೆ ಹಂಸಲೇಖ. ಜಿಲ್ಲಾ ಕೇಂದ್ರಗಳಲ್ಲಿ ಆಸಕ್ತ ವಿದ್ಯಾರ್ಥಿಗಳ ಸಂದರ್ಶನ ನಡೆಸಿ, ಸೂಕ್ತ ವಿದ್ಯಾರ್ಥಿಗಳನು ಆಯ್ಕೆ ಮಾಡಿಕೊಂಡು ಅವರನ್ನು ಈ ಕಲಾ ಸಂಕುಲದಲ್ಲಿ ಒಗ್ಗೂಡಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ.

ಮುಕ್ತ ವಿವಿಯ ಬೆಂಬಲ
ಹಂಸಲೇಖ ದೇಸಿ ಕಾಲೇಜಿನ ಎಲ್ಲಾ ಪದವಿ ಕೋರ್ಸ್‌ಗಳಿಗೆ ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ಮಾನ್ಯತೆ ಸಿಕ್ಕಿದೆ. ಪದವಿ ಮುಗಿಸುವ ವಿದ್ಯಾರ್ಥಿಗಳಿಗೆ ರಾಜ್ಯ ಮುಕ್ತ ವಿವಿ ಪದವಿ ಪ್ರಮಾಣಪತ್ರ ನೀಡುತ್ತದೆ. ಈ ಮೊದಲು ದ್ರಾವಿಡಿಯನ್ ವಿವಿಯೊಂದಿಗೆ ಹಂಸಲೇಖ ದೇಸಿ ವಿದ್ಯಾಸಂಸ್ಥೆ ಗುರುತಿಸಿಕೊಂಡಿತ್ತು.

ಒಟ್ಟು ಎಷ್ಟು ಕೋರ್ಸ್?
ಇಲ್ಲಿ ಒಟ್ಟು ಬ್ಯಾಚುಲರ್ ಆಫ್ ಪರ್ಫಾಮಿಂಗ್ ಆರ್ಟ್ಸ್(ಬಿಪಿಎ), ಬ್ಯಾಚುಲರ್ ಆಫ್ ದೇಸಿ ಮ್ಯೂಸಿಕ್(ಬಿಡಿಎಂ) - ಇವೇ ಪ್ರಮುಖವಾದ ಎರಡು ಪದವಿ ಕೋರ್ಸ್‌ಗಳಿವೆ. ಇವಲ್ಲದೇ, ನಾಲ್ಕು ಪ್ರಮುಖ ಡಿಪ್ಲೊಮಾ ಕೋರ್ಸ್‌ಗಳೂ ಇಲ್ಲಿವೆ. ಅವೆಂದರೆ, ಡಿಪ್ಲೊಮಾ ಇನ್ ಮ್ಯೂಸಿಕ್, ಡಿಪ್ಲೊಮಾ ಇನ್ ಡ್ಯಾನ್ಸ್, ಡಿಪ್ಲೊಮಾ ಇನ್ ಥಿಯೇಟರ್ (ರಂಗಭೂಮಿ) ಹಾಗೂ ಡಿಪ್ಲೊಮಾ ಇನ್ ಸಿನಿಮಾ.

ಡಿಪ್ಲೊಮಾ ಇನ್ ಮ್ಯೂಸಿಕ್‌ನಲ್ಲಿ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಸಂಗೀತ, ಪಾಶ್ಚಿಮಾತ್ಯ ಸಂಗೀತ ಹಾಗೂ ದೇಸಿ ಸಂಗೀತ ಎಂಬ ನಾಲ್ಕು ವಿಷಯಗಳಲ್ಲಿ ಕಲಿಕೆಯಿರುತ್ತದೆ. ಡಿಪ್ಲೊಮಾ ಇನ್ ಡ್ಯಾನ್ಸ್‌ನಲ್ಲಿ ಜಾನಪದ ಹಾಗೂ ಕ್ಲಾಸಿಕಲ್ ನೃತ್ಯಗಳನು ಕಲಿಯಬಹುದು. ಇನ್ನು ಡಿಪ್ಲೊಮಾ ಇನ್ ಸಿನಿಮಾದಲ್ಲಿ ಸೌಂಡ್ ಎಂಜಿನಿಯರಿಂಗ್, ಎಡಿಟಿಂಗ್ (ಸಂಕಲನ) ಹಾಗೂ ಸಿನಿಮಾಟೋಗ್ರಫಿಗಳಿಗೆ ಅವಕಾಶವಿದೆ. ಪದವಿ ಕೋರ್ಸ್‌ಗಳಿಗೆ ಪಿಯುಸಿ ಹಾಗೂ ಡಿಪ್ಲೊಮಾ ಕೋರ್ಸ್‌ಗಳಿಗೆ ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು.

ವಿಶೇಷ ಕೋರ್ಸ್
ಪಿಯುಸಿಯಲ್ಲಿ ಅನುತೀರ್ಣರಾದ ವಿದ್ಯಾರ್ಥಿಗಳಿಗಾಗಿಯೇ ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್ ಅನು ಹೊಸದಾಗಿ ಆರಂಭಿಸಲಾಗಿದೆ. ಅದೇ ಬ್ಯಾಚುಲರ್ ಆಫ್ ಪ್ರಿಪರೇಟರಿ ಪ್ರೋಗ್ರಾಮ್ (ಬಿಪಿಪಿ). ಇದು, ಒಂದು ವರ್ಷ ಅವಧಿಯ ಕೋರ್ಸ್ ಆಗಿದ್ದು, ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಇದರ ಲಾಭ ಪಡೆಯಬಹುದು. ಅಷ್ಟೇ ಅಲ್ಲ, ಬ್ಯಾಚುಲರ್ ಆಫ್ ದೇಸಿ ಮ್ಯೂಸಿಕ್ (ಬಿಡಿಎಂ) ಕೋರ್ಸ್ ಸೇರಬಯಸುವ ವಿದ್ಯಾರ್ಥಿಗಳಿಗೆ ಬಿಪಿಪಿ ಹೆಚ್ಚು ಸಹಕಾರಿ. ಬಿಪಿಪಿ ಜೊತೆಯಲ್ಲೇ ಬಿಡಿಎಂ ಅನ್ನೂ ಕಲಿಯಲು ಅನುಕೂಲವಾಗುವ ನಿಟ್ಟಿನಲ್ಲಿ ಈ ಕೋರ್ಸ್ ಆರಂಭಿಸಲಾಗಿದೆ.

ಕ್ಲಾಸ್ ಹೇಗಿರುತ್ತೆ?
ಈ ಕೋರ್ಸ್‌ಗಳಿಗಾಗಿಯೇ ನುರಿತ ತಜ್ಞರಿಂದ ವಿಶೇಷ ರೀತಿಯ ಸಿಲೆಬಸ್ ತಯಾರಿಸಲಾಗಿದೆ. ಮಕ್ಕಳಿಗೆ ಪಠ್ಯವನು ಬಲವಂತವಾಗಿ ತುರುಕುವಂತಾಗದೇ, ನಲಿಯುತ್ತಾ ಅವರ ಕಲಿಕೆ ಸಾಗುವಂತೆ ರೂಪಿಸಿರುವುದು ಇದರ ವಿಶೇಷ. ಬರೀ ತರಗತಿಗಳಲ್ಲಿ ಪಾಠ ಕೇಳುವುದಷ್ಟೇ ಅಲ್ಲ, ದೇಸಿ ಕಲೆಗಳಲ್ಲಿ ತಮ್ಮನು ಸಂಪೂರ್ಣವಾಗಿ ಸ್ವಯಂ ಆಸಕ್ತಿಯಿಂದ ತೊಡಗಿಸಿಕೊಳ್ಳಲು ಅನುಕೂಲ ಕಲ್ಪಿಸಲಾಗುತ್ತದೆ. ಗುಂಪು ಚರ್ಚೆ, ಪ್ರಾತ್ಯಕ್ಷಿಕೆ ಇನಿತರ ವಿಧಾನಗಳಿಂದ ವಿದ್ಯಾರ್ಥಿಗಳು ದೇಸಿ ಕಲೆಗಳನು ತಮ್ಮ ಆಂತರ್ಯದಲ್ಲಿ ತುಂಬಿಕೊಳ್ಳುವ ರೀತಿಯಲ್ಲಿ ಇಲ್ಲಿ ತರಗತಿಗಳು ನಡೆಯುತ್ತವೆ. ಅಷ್ಟೇ ಅಲ್ಲ, ಇಲ್ಲಿನ ಬೋಧಕ ಸಿಬ್ಬಂದಿಯಲ್ಲೊಬ್ಬರಾಗಿರುವ ಹಂಸಲೇಖ ಅವರೇ ಎಲ್ಲರ 'ಸ್ಟಾರ್ ಅಟ್ರ್ಯಾಕ್ಷನ್‌'.

ಕೆಲ್ಸ ಸಿಗುತ್ತಾ?
ಇಲ್ಲಿ ಪದವಿ ಗಳಿಸಿದ ಮೇಲೆ ಮುಂದೇನು ಎನ್ನುವ ಚಿಂತೆ ಇಲ್ಲಿನ ವಿದ್ಯಾರ್ಥಿಗಳನ್ನು ಕಾಡಿಲ್ಲ. ಕಾಡುವುದೂ ಇಲ್ಲ. ಈಗಾಗಲೇ ಅನಿಮೇಶನ್, ತ್ರೀಡಿ ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಇಲ್ಲಿಂದ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅವಕಾಶಗಳುಂಟು. ಅಷ್ಟೇ ಅಲ್ಲ, ದೇಸಿ ಪ್ರದರ್ಶನ ಕಲೆಗಳಲ್ಲಿ ಪದವಿ ಪಡೆದ ಪ್ರತಿಭಾನ್ವಿತರಿಗೆ ಸರ್ಕಾರಿ ವಲಯದ ಶಿಕ್ಷಣ ಕ್ಷೇತ್ರದಲ್ಲೇ 50 ಸಾವಿರ ಹುದ್ದೆಗಳಿವೆ. ಇನು ಖಾಸಗಿ ಕ್ಷೇತ್ರಗಳಾದ ಸಿನಿಮಾ, ಟೆಲಿವಿಷನ್, ಸೌಂಡ್ ರೆಕಾರ್ಡಿಂಗ್ ಮುಂತಾದ ಕ್ಷೇತ್ರಗಳಲ್ಲಿ ಅವಕಾಶಗಳಿವೆ.

- ಚೇತನ್ ಓ.ಆರ್./ ರುದ್ರಗೌಡ ಮುರಾಳ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ