ಪ್ರಪಂಚ ಹಲವು ಧರ್ಮಗಳಿಂದ ಕೂಡಿದೆ. ಎಲ್ಲ ಧರ್ಮಗಳೂ ಶ್ರೇಷ್ಠ. ಸ್ಥಳ ಮತ್ತು ಕಾಲಗಳ ಅಂತರದಿಂದ ಧರ್ಮಗಳು ಬೇರೆ ಬೇರೆ ನಾಮಗಳಿಂದ ವಿಭಿನ ಆಚರಣೆಗಳಿಂದ ಕೂಡಿದ್ದರೂ ಅವುಗಳ ಮೂಲ ಒಂದೇ ಆಗಿದೆ. ಅಂತಹ ವಿಶ್ವಧರ್ಮದ ಮಹಾಬೇರುಗಳನು ಎಲ್ಲ ಧರ್ಮಗಳಲ್ಲಿ ಹುಡುಕಿದರೆ ಅವುಗಳು ಆಳದಲ್ಲಿ ಹಿಂದೂ ಧರ್ಮವನು ಆಶ್ರಯಿಸಿರುವುದು ಕಂಡುಬರುತ್ತದೆ. ಅಪೌರುಷೇಯವೆನಿಸಿದ ಹಿಂದೂ ಧರ್ಮ ಬೃಹದ್ಬೋಧಿವೃಕ್ಷದಂತೆ ವಿಶ್ವದಾದ್ಯಂತ ಹರಡಿ ಬಿಳಲುಬಿಟ್ಟ ಕಡೆಯೇ ಹೊಸ ವೃಕ್ಷದಂತೆ ಬೆಳೆದು ಸ್ವತಂತ್ರ ಅಸ್ತಿತ್ವವನೇ ಪಡೆದಿದೆ. ಹಾಗಾಗಿ ಹಿಂದೂ ಧರ್ಮ 'ವಿಶ್ವಧರ್ಮ'ವಾಗಿ ಸತ್ವಸಾರವನು ಹೊಂದಿದೆ.
ಸಿಂಧೂ ನದಿಯ ಬಲಭಾಗದಲ್ಲಿದ್ದವರನೆಲ್ಲ ಪುರಾತನ ಪರ್ಶಿಯನರು 'ಹಿಂದೂಗಳು' ಎಂದರು. ಗ್ರೀಕರು ಹಿಂದೂಗಳನು ಇಂಡಿಯಾದವರು ಎಂದು ಕರೆದರು. ಹಿಂದೂ ಧರ್ಮವೆಂಬುದು ಹಲವಾರು ಧರ್ಮಗಳ ಹಲವಾರು ಭಾವನೆಗಳ, ಹಲವಾರು ತತ್ತ್ವಶಾಸ್ತ್ರ-ಸಂಪ್ರದಾಯ-ಆಚರಣೆಗಳ ಸಮ್ಮಿಶ್ರಣ. ಇವೆಲ್ಲಕ್ಕೂ ಸಾಮಾನ್ಯವಾದ ಯಾವುದೇ ಧಾರ್ಮಿಕ ಚೌಕಟ್ಟು, ಅಧಿಪತ್ಯ ಇಲ್ಲ. ಆದರೆ ಇವೆಲ್ಲವೂ ಅಧೀನವಾಗಿರುವುದು ವೇದಗಳ ಜ್ಞಾನಕಾಂಡಕ್ಕೆ. ಈ ಎಲ್ಲ ವಿಭಿನ ಮತಗಳೂ ಉಪನಿಷತ್ತುಗಳು ಹಾಗೂ ವೇದಾಂತವನೊಳಗೊಂಡ ಜ್ಞಾನಕಾಂಡವೇ ಅತ್ಯು ನತ ಪ್ರಮಾಣವೆಂದು ಅಂಗೀಕರಿಸುತ್ತೇವೆ. ದ್ವೈತ-ವಿಶಿಷ್ಟಾದ್ವೈತ-ಅದ್ವೈತಗಳೆಲ್ಲಕ್ಕೂ ವೇದಾಂತವೇ ಪ್ರಮಾಣ.
- ಆನಂದ ಎಸ್.ಎನ್.