ಇಷ್ಟ ಇಲ್ಲದಿದ್ರೂ ಲವ್ ಪ್ರಪೋಸಲ್ ಒಪ್ಪಿಕೊಂಡೆ. ಒಲ್ಲದ ಮನಸ್ಸಿನಿಂದ ಸೆಕ್ಸ್‌ಗೂ ಒಪ್ಪಿಕೊಂಡೆ. ಆದರೆ ಅವನ ವರ್ತನೆ ಕಿರಿಕಿರಿ ಅನ್ನಿಸತೊಡಗಿದಾಗ, 'ನಾವು ಕೇವಲ ಫ್ರೆಂಡ್ಸ್ ಆಗಿರೋಣ' ಎಂದು ವಿನಂತಿಸಿದೆ. ಈಗ ಅವನು ಎಲ್ಲವನ್ನು 'ಪಬ್ಲಿಕ್' ಮಾಡುವುದಾಗಿ ಹೆದರಿಸುತ್ತಿದ್ದಾನೆ. ಏನು ಮಾಡಲಿ?
- ವೀಣಾ ಮಂಜು (ಇ-ಮೇಲ್)
ಇದನ್ನು ನಿಮ್ಮ ಇಚ್ಛಾ ಪ್ರಾರಬ್ಧ ಎನ್ನದೆ ಮತ್ತೇನು ಹೇಳುವುದು? ಮನಸ್ಸಿಲ್ಲ ಎಂದ ಮೇಲೆ ಲವ್ ಪ್ರಪೋಸಲ್ ಒಪ್ಪಿಕೊಂಡಿದ್ದು ಮೊದಲ ತಪ್ಪು. ಮದುವೆಗೆ ಮೊದಲೇ ದೇಹ ಸುಖ ನೀಡಿದ್ದು ಇನ್ನೂ ದೊಡ್ಡ ತಪ್ಪು. ಕಾಲ ಮಿಂಚಿಲ್ಲ. ಮನೆಯವರೊಡನೆ ಎಲ್ಲವನ್ನೂ ಹೇಳಿಕೊಳ್ಳಿ. ಅವರಿಗೂ ಆಘಾತವಾಗಬಹುದು, ನಿಮ್ಮನ್ನೊಂದಷ್ಟು ಬಯ್ಯಬಹುದು. ಆಮೇಲೆ ನಿಮ್ಮ ನೆರವಿಗೆ ಬರುತ್ತಾರೆ. ಪ್ರೀತಿಯ ಅಮಲಿನಲ್ಲಿ ಮೈಮರೆಯುವ ಯುವತಿಯರಿಗೆ ನಿಮ್ಮ ಪ್ರಕರಣ ಪಾಠವಾಗಲಿ.
-ಡಾ. ಸ್ಯಾಟಲೈಟ್
anekaby2@gmail.com