ಪೇಜ್‌ವರ್ಲ್ಡ್ ಇಂಡಿಯಾ ಮತ್ತು ಅಕ್ಷರದಾಹ ಬೆಂಗಳೂರು ಜಂಟಿಯಾಗಿ 'ಜಯಂತ್ ಕಾಯ್ಕಿಣಿಯವರ ಜತೆ ಒಂದು ಸಂಜೆ' ಕಾರ್ಯಕ್ರಮವನ್ನು ಆಯೋಜಿಸಿವೆ. ಹೆಸರಾಂತ ಗೀತ ಸಾಹಿತಿ ಹಾಗೂ ಕವಿ ಜಯಂತ್ ಕಾಯ್ಕಿಣಿ ಅಂದು ಸಂಜೆ ನಮ್ಮೊಂದಿಗಿರುತ್ತಾರೆ. ಜತೆ ಯಲ್ಲಿ ಐಶ್ವರ್ಯಾ ಮಹೇಶ್ ಅವರ ಸಂಗೀತ ಕಾರ್ಯಕ್ರಮವಿದೆ.
ಇದೇ ಸಂಸ್ಥೆಗಳು ಏಪ್ರಿಲ್ ಆರ್ಟ್ ಆ್ಯಂಡ್ ಕ್ರಾಫ್ಟ್ ಮೇಳ (6 ಮತ್ತು 7) ಕೂಡ ಏರ್ಪಡಿಸಿವೆ. ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಚಿತ್ರ ಬಿಡಿಸುವ ಸ್ಪರ್ಧೆಯೂ ಉಂಟು. ದಿನಾಂಕ: 6.4.2013
ಸ್ಥಳ: ಪೇಜ್‌ವರ್ಲ್ಡ್ ಇಂಡಿಯಾ, 9, 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಸಂತೃಪ್ತಿನಗರ, ಕೊತ್ತನೂರುದಿನ್ನೆ ಮುಖ್ಯ ರಸ್ತೆ, ಜೆ.ಪಿ. ನಗರ 7ನೇ ಹಂತ, (ಕಾಕಲ್ ಕೈರುಚಿ ಹಿಂಭಾಗ, ಬಿಗ್ ಬಜಾರ್ ಎದುರು)
ಹೆಚ್ಚಿನ ಮಾಹಿತಿಗೆ: 080-26852222/ 96866 97491.