ಬೇಸಿಗೆ ರಜೆ ಬಂದಿದೆ. ನಿಮ್ಮ ಮಗುವಿಗೆ ಚಿತ್ರಕಲೆ, ಛಾಯಾಚಿತ್ರ ಕಲೆ ಬಗ್ಗೆ ಆಸಕ್ತಿ ಇದ್ದರೆ ಆ ಕುರಿತು ನಡೆಯುವ ಕಾರ್ಯಾಗಾರಕ್ಕೆ ಸೇರಿಸಬಹುದು. ವಿಷುಯಲ್ ಆರ್ಟ್ ವರ್ಕ್‌ಶಾಪ್ ಹಾಗೂ ಅನನ್ಯ ದೃಶ್ಯ ಸಂಸ್ಥೆಗಳು ಬೆಂಗಳೂರಿನಲ್ಲಿ ಸೃಜನಶೀಲ ಚಿತ್ರಕಲೆ ಮತ್ತು ಛಾಯಾಚಿತ್ರ ಕಲೆ ಕುರಿತ ಒಂದು ತಿಂಗಳ ಕಾರ್ಯಾಗಾರ ಏರ್ಪಡಿಸಿವೆ. ಕಲಾವಿದರೇ ನಡೆಸುತ್ತಿರುವ ಈ ಕಾರ್ಯಾಗಾರ ಏ.15ರಿಂದ ಮೇ 15ರವರೆಗೆ ನಡೆಯಲಿದೆ.
6ರಿಂದ 16 ವರ್ಷ ವಯಸ್ಸಿನ ಮಕ್ಕಳು ಭಾಗವಹಿಸಬಹುದು. ವಿದ್ಯಾರ್ಥಿಗಳು ಪ್ರಸ್ತುತದ ವಿಷಯವೊಂದನ್ನು ಆರಿಸಿಕೊಂಡು ಅದಕ್ಕೆ ತಮ್ಮದೇ ಆದ ಪ್ರತಿಕ್ರಿಯೆಯನ್ನು ಚಿತ್ರಕಲೆ ಮತ್ತು ಛಾಯಾಚಿತ್ರಗಳ ಮೂಲಕ ಅಭಿವ್ಯಕ್ತಿಸುವ ತರಬೇತಿ ನೀಡಲಾಗುತ್ತದೆ. ಹೀಗೆ ರಚಿಸಿದ ಕೃತಿಗಳ ಪ್ರದರ್ಶನವನ್ನೂ ಆಯೋಜಿಸಲಾಗುತ್ತದೆ.
ಸ್ಥಳ: ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಬುಲ್ ಟೆಂಪಲ್ ರಸ್ತೆ, ಎನ್.ಆರ್. ಕಾಲೊನಿ, ಬೆಂಗಳೂರು- 560019
ಮಾಹಿತಿಗೆ: (080) 26890006/ 9480451524.