ಬೈಟುಕಾಫಿ

ತಿನ್ನುವ ಪದಾರ್ಥದಲ್ಲಿದೆ ಆರೋಗ್ಯದ ಕೀಲಿಕೈ

ಬಹಳಷ್ಟು ಜನರ ನಂಬಿಕೆ ಎಂದರೆ ನಮಗೆ ಅನಾರೋಗ್ಯವಾದಾಗ ಔಷಧಗಳು ಮ್ಯಾಜಿಕ್ ಮಾಡುತ್ತವೆ ಎಂಬುದು. ಬೇಸರದ ಸಂಗತಿ ಏನೆಂದರೆ ನಾವು ಸೇವಿಸುವ ಆಹಾರ ಎಂಥ ಜಾದೂ ಮಾಡಬಲ್ಲದು ಎನ್ನುವುದು ನಮಗೆ ಗೊತ್ತೇ ಇಲ್ಲ. ಪ್ರಮುಖವಾಗಿ ಸೃಷ್ಟಿಯಲ್ಲಿನ ಗಿಡಮೂಲಿಕಗಳಿಂದಲೇ ಎಷ್ಟೋ ಮದ್ದುಗಳು ಸಿಗುತ್ತವೆ. ಪ್ರಯೋಗಾಲಯದಲ್ಲಿ ಸಿದ್ಧವಾದದ್ದು ಎಂದುಕೊಂಡು ನಾವು ಖರೀದಿಸಿ, ಸೇವಿಸುವ ಈಗಿನ ಶೇ 25ಕ್ಕೂ ಅಧಿಕ ಔಷಧಗಳು ಸಸ್ಯಜನ್ಯವಾದದ್ದು ಎನ್ನುವುದು ಅಧಿಕೃತ ಮಾಹಿತಿ. ನಮ್ಮ ದೇಹದಲ್ಲಿರುವ ಕಣಗಳ ಮೇಲೆ ನಿರಂತರವಾಗಿ ಕೆಲಸ ಮಾಡುತ್ತಿರುವ ಆಹಾರ, ನಮ್ಮ ಅರಿವಿಗೆ ಬಾರದಂತೆ ಆರೋಗ್ಯದ ಕೀಲಿಕೈ ಆಗಿಯೂ ವ್ಯವಹರಿಸುತ್ತಿರುತ್ತದೆ.
ನಾವು ಸೇವಿಸುವ ಸಸ್ಯಜನ್ಯಯುಕ್ತ ಪದಾರ್ಥಗಳು ನಮ್ಮನ್ನು ಆರೋಗ್ಯಕರವಾಗಿ ಇಡಬಲ್ಲವು ಎಂಬುದಕ್ಕೆ ವೈಜ್ಞಾನಿಕವಾಗಿ ನಿರೂಪಿತವಾಗಿರುವ ಸಾಕಷ್ಟು ಉದಾಹರಣೆಗಳನ್ನು ನೀಡಬಲ್ಲೆ. ಕತ್ತಿನ ಕ್ಯಾನ್ಸರ್‌ಗೆ ಕಾರಣವಾಗುವ ವೈರಸ್‌ಗಳನ್ನು ಎದುರಿಸುವ ಸಾಮರ್ಥ್ಯ ಬೆಳ್ಳುಳ್ಳಿಯಲ್ಲಿದೆ ಎನ್ನುವುದು ಎಷ್ಟು ಜನರಿಗೆ ಗೊತ್ತು? ಕಲುಷಿತ ವಾತಾವರಣದಲ್ಲಿ ಜೀವಿಸುತ್ತಿರುವ ನಮ್ಮ ದೇಹದೊಳಕ್ಕೆ ಅದೆಷ್ಟೋ ವಿಷಕಾರಕ ಪದಾರ್ಥಗಳು ನಿತ್ಯವೂ ಸೇರಿಕೊಳ್ಳುತ್ತಲೇ ಇರುತ್ತವೆ. ಅವುಗಳನ್ನು ಹೊರಹಾಕುವ ತಾಕತ್ತು ಇರುವುದು ಕ್ಯಾಬೇಜ್‌ಗೆ. ನಮ್ಮ ದೇಹಕ್ಕೆ ಒಗ್ಗದ ಪದಾರ್ಥಗಳನ್ನು ನಾಶಗೊಳಿಸುವ ಶಕ್ತಿ ಧಾನ್ಯಗಳು, ತರಕಾರಿ, ಹಣ್ಣುಗಳಲ್ಲಿ ಅಡಕವಾಗಿದೆ. ಸೂಕ್ತ ಆಹಾರ ಸೇವನೆ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನೂ ತಡೆಯಬಲ್ಲದು; ಹಾನಿಕಾರಕ ಕೊಲೆಸ್ಟರಾಲ್ ಮಟ್ಟ ಮಿತಿ ಮೀರದಂತೆ ತಡೆಯಬಲ್ಲದು.
ಹಸಿವಾಗುತ್ತದೆ, ತಿನ್ನುತ್ತೇವೆ, ಹೊಟ್ಟೆ ತುಂಬುತ್ತದೆ. ಆಹಾರ ಎಂದರೆ ಇಷ್ಟೇ ಅಲ್ಲ. ನಮ್ಮ ದೃಷ್ಟಿಯಲ್ಲಿ ಆಹಾರ ಎಂದರೆ ನೆನಪಿಗೆ ಬರುವುದು ಹಸಿವು, ಹೊಟ್ಟೆ ಅಷ್ಟೆ. ಬಹುಶಃ ದೇಹದ ಮೇಲೆ ಆಹಾರ ಯಾವ ರೀತಿ ಕೆಲಸ ಮಾಡುತ್ತದೆ ಎನ್ನುವುದು ಅರಿತುಕೊಂಡರೆ ಆಹಾರ ಮಹತ್ವ ತಿಳಿಯಲು ನೆರವಾದೀತು. ಮಾನವ ದೇಹದಲ್ಲಿ 60 ಟ್ರಿಲಿಯನ್ (ಒಂದರ ಮುಂದೆ 12 ಸೊನ್ನೆ!) ಕೋಶಗಳಿರುತ್ತವೆ. ಇನ್ನೂ ಆಶ್ಚರ್ಯವಾದೀತು, ಪ್ರತಿ ಕೋಶವೂ ಪ್ರತಿ ನಿಮಿಷ ಬಿಲಿಯನ್‌ಗಟ್ಟಳೆ ರಾಸಾಯನಿಕ ಪ್ರಕ್ರಿಯೆಗಳನ್ನು ನಡೆಸುತ್ತಿರುತ್ತವೆ. ಈ ರೀತಿಯ ದಣಿವರಿಯದ ನಿರಂತರ ಚಟುವಟಿಕೆಗಳಿಗೆ ಅವುಗಳಿಗೆ ಸ್ಫೂರ್ತಿಯಾದರೂ ಎಲ್ಲಿಂದ ಸಿಗಬೇಕು? ಬಲವಾದರೂ ಎಲ್ಲಿಂದ ಬರಬೇಕು? ನಾವು ಏನು ಕೊಡುತ್ತೇವೆಯೊ ಅದೇ ಶಕ್ತಿ. ಅಂದರೆ ನಮ್ಮ ಆಹಾರವೇ ನೂರಾರು ಕೋಶಗಳಿಗೆ ಶಕ್ತಿ ಮೂಲ!

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್

ಒಂದು ಕ್ಷಣದ ನಿರ್ಲಕ್ಷ್ಯ, ವಿಚಿತ್ರ ರನೌಟ್‌ಗೆ ತಿಲಕ್ ವರ್ಮಾ ಬಲಿ; ಗಂಭೀರ್ ಫುಲ್ ಗರಂ! ಆಗಿದ್ದೇನು? Video

3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು