ನಾನು ಪ್ರೀತಿಸುತ್ತಿರುವವಳು ಮತ್ತೊಬ್ಬನ ಜತೆ ದೈಹಿಕ ಸಂಬಂಧ ಹೊಂದಿರುವ ವಿಷಯ ಆತನಿಂದಲೇ ತಿಳಿಯಿತು. ಈಗ ತಾನು ಅವನ ಸಂಪರ್ಕ ತೊರೆದಿರುವುದಾಗಿ ಹೇಳಿದಳು. ಅವಳ ಮೊಬೈಲ್ ಚೆಕ್ ಮಾಡಿದಾಗ ಅವನಿಂದ ಎಸ್‌ಎಂಎಸ್, ಕರೆಗಳು ಬಂದಿರುವುದು ಗೊತ್ತಾಯಿತು. 'ಆತ ಮೆಸೇಜ್ ಕಳಿಸುತ್ತಾನೆ, ಕಾಲ್ ಮಾಡುತ್ತಾನೆ. ನಾನದಕ್ಕೆ ಪ್ರತಿಕ್ರಿಯಿಸುತ್ತಿಲ್ಲ' ಎಂದಳು. ನನಗೀಗ ಅನುಮಾನ ಶುರುವಾಗಿದೆ. ಅವಳನ್ನು ನಂಬಲೆ?
- ಪ್ರೇಮ್ ಎನ್.ಎಂ, ಮೈಸೂರು
ದಾಂಪತ್ಯದಲ್ಲಿ ದೈಹಿಕ ಸುಖಕ್ಕಿಂತ ನಂಬಿಕೆ, ವಿಶ್ವಾಸ ಮುಖ್ಯ. ನಿಮಗೆ ಅವಳ ವರ್ತನೆ, ಮಾತಿನ ಬಗ್ಗೆ ಅನುಮಾನಗಳಿದ್ದರೆ ಅವಳಿಗೆ ನೋವಾಗದಂತೆ ಮಾತನಾಡಿ ದೃಢಪಡಿಸಿಕೊಳ್ಳಿ. ಆದರೂ ವಿಶ್ವಾಸ ಮೂಡದಿದ್ದರೆ ಸಂಬಂಧ ಕಡಿದುಕೊಳ್ಳುವುದೇ ಒಳ್ಳೆಯದು. ಮದುವೆಯಾದ ಮೇಲೆ ಅನು ಮಾನದಿಂದ ಬಾಳು ಹಾಳು ಮಾಡಿಕೊಳ್ಳುವುದಕ್ಕಿಂತ ಇದು ಉತ್ತಮ.
-ಡಾ. ಸ್ಯಾಟಲೈಟ್
anekaby2@gmail.com
ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...