ಬೈಟುಕಾಫಿ

ಬಾಲ್ಯದ ಪರಿಣಾಮ ವೃದ್ಧಾಪ್ಯದಲ್ಲಿ!

ಪ್ರದೀಪ ನಮ್ಮ ಪಕ್ಕದ ಮನೆ ಹುಡುಗ. ಆತನ ಒಂದು ವರ್ಷದ ಮಗ ಸಿಕ್ಕಾಪಟ್ಟೆ ತುಂಟ. ಒಂದು ದಿನ, 'ಅಂಕಲ್, ನನ್ನ ಮಗ ಸರಿಯಾಗಿ ಊಟ ಮಾಡಲ್ಲ. ಮ್ಯಾಗಿ, ನ್ಯೂಡಲ್ಸ್ ಮಾಡಿದ್ರೆ ಖುಷಿಯಿಂದ ತಿನ್ತಾನೆ. ಹಠ ಮಾಡಿ ಹಾಕಿಸ್ಕೊಂಡು ತಿನ್ತಾನೆ' ಎಂದ. 'ತಪ್ಪು ಮಾಡ್ತಿದ್ದೀರಿ. ಕೆಲದಿನ ರಗಳೆ ಮಾಡಬಹುದು. ಇಂತಹ ಆಹಾರ ಕೊಡೋದನ್ನ ನಿಲ್ಲಿಸಿ. ನೀವು ತಿನ್ನೋದನ್ನೇ ಕೊಡೋಕೆ ಶುರು ಮಾಡಿ' ಎಂದೆ. 'ಏನು ತಿಂದ್ರೇನು ಅಂಕಲ್? ಮಕ್ಕಳಿಗೆ ಹೊಟ್ಟೆ ತುಂಬಿದ್ರಾಯ್ತು ಅಲ್ವಾ' ಮರುಪ್ರಶ್ನೆ. 'ಎಲ್ಲರೂ ಮಾಡೋದು ಇದೇ ಮಿಸ್ಟೇಕ್. ಬರೀ ಹೊಟ್ಟೆ ತುಂಬೋದಷ್ಟೇ ಅಲ್ಲ, ಆ ಆಹಾರ ಪೌಷ್ಟಿಕವಾಗಿರಬೇಕು. ಮಗುವಿನ ಬೆಳವಣಿಗೆಗೆ ಸಹಾಯ ಆಗುವಂತಿರಬೇಕು' ಎಂದು ಅರ್ಧ ಗಂಟೆ ಲೆಕ್ಚರ್ ಕೊಡಬೇಕಾಯ್ತ. ಆತನಿಗೆ ಮನವರಿಕೆ ಮಾಡಿಕೊಡುವಷ್ಟರಲ್ಲಿ ಸುಸ್ತಾಗಿದ್ದೆ. ಕೊನೆಗೆ 'ನೀವು ಹೇಳೋದು ನಿಜ. ಇವತ್ತಿಂದ್ಲೇ ಅಂಥ ಆಹಾರ ಕೊಡೋದನ್ನ ನಿಲ್ಲಿಸ್ತೀನಿ' ಎನ್ನುತ್ತ ನಡೆದ.
ಈಗೀಗ ಶಿಶು ತಜ್ಞರು ಕೂಡ ಆಹಾರದ ವಿಚಾರದಲ್ಲಿ ಎಚ್ಚೆತ್ತುಕೊಳ್ಳುತ್ತಿದ್ದಾರೆ. 'ರೆಡಿಮೇಡ್ ಫುಡ್ ಬೇಡವೇ ಬೇಡ. ನಿಮಗೆ ಮಾಡಿಕೊಳ್ಳುವ ಆಹಾರವನ್ನೇ ಅವರಿಗೂ ತಿನ್ನಿಸಿ. ಅವರಿಗೆ ಸ್ವಲ್ಪ ಮೆದುವಾಗಿ ಮಾಡಿಕೊಳ್ಳಿ' ಎಂದು ಸಲಹೆ ಕೊಡುತ್ತಿದ್ದಾರೆ. ಸ್ತನ್ಯಪಾನದ ಮಹತ್ವ ವಿವರಿಸುತ್ತಿದ್ದಾರೆ. ಅನೇಕ ಸರ್ಕಾರೇತರ ಸಂಸ್ಥೆಗಳೂ ಸ್ತನ್ಯಪಾನದ ಬಗ್ಗೆ ಜಾಗೃತಿ ಮೂಡಿಸುತ್ತಿವೆ.
ಆಹಾರ ಸಂಸ್ಕೃತಿ ದೃಷ್ಟಿಯಿಂದ ನೋಡಿದಾಗ ಇವೆಲ್ಲ ಒಳ್ಳೆಯ ಬೆಳವಣಿಗೆಗಳೇ. ಏಕೆಂದರೆ ಶಿಶುವಾಗಿದ್ದಾಗನಿಂದ ಹಿಡಿದು ಪ್ರೌಢಾವಸ್ಥೆ ಮತ್ತು ಯೌವ್ವನದಲ್ಲಿ ನಾವು ಎಂಥ ಆಹಾರ ಸೇವಿಸುತ್ತೇವೆ ಎನ್ನುವುದು ಬಹಳ ಮುಖ್ಯ. ಅದೇ ನಮ್ಮ ಆರೋಗ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಂತದಲ್ಲಿಯೇ ಮೆದುಳಿನಲ್ಲಿ ರಾಸಾಯನಿಕ ಪ್ರಕ್ರಿಯೆಗಳು ನಡೆಯುವುದು, ಮೆದುಳಿನ ಸಾಮರ್ಥ್ಯ ಸ್ಫುಟಗೊಳ್ಳುತ್ತ ಸಾಗುವುದು. ಪ್ರದೀಪನ ಭಾವನೆಯಂತೆ ಯಾವ ಆಹಾರ ಸೇವಿಸಿದರೂ ಏನೂ ಆಗುವುದಿಲ್ಲ ಎನ್ನುವುದು ಸುಳ್ಳು. ತಕ್ಷಣದಲ್ಲಿ ಏನೂ ಆಗದಿರಬಹುದು. ಪರಿಣಾಮ  ಗೊತ್ತಾಗುವುದು ನಮಗೆ ಮಧ್ಯವಯಸ್ಸು ದಾಟಿದಾಗ. ಈಗ ನಮ್ಮ ಆಹಾರ ಸರಿಯಾಗಿಲ್ಲದಿದ್ದರೆ 40 ದಾಟಿದ ನಂತರ ಮಾಂಸಖಂಡಗಳು ಬಿಗಿದುಕೊಳ್ಳುವುದು, ಪಾರ್ಕಿನ್ಸನ್ ಇವೆಲ್ಲ ಆಹಾರದ ನಿರ್ಲಕ್ಷ್ಯದಿಂದಲೇ ಆಗುವುದು.
ನೆನಪಿರಲಿ. ನಾವು ಏನನ್ನೇ ತಿಂದರೂ ಅದು ನಮ್ಮ ದೇಹದಲ್ಲಿರುವ ಲಕ್ಷಾಂತರ ಅಣುಗಳಿಗೆ ಸಣ್ಣ ವಿಷಯವಲ್ಲ. ನಮ್ಮನ್ನು ಜೀವಂತವಾಗಿಡುವ, ನಮ್ಮ ಆರೋಗ್ಯ ಮತ್ತು ವ್ಯಕ್ತಿತ್ವ ರೂಪಿಸಿವ ಅವುಗಳಿಗೆ ನಾವು ಸೇವಿಸುವ ಆಹಾರವೇ ಶಕ್ತಿ ಒದಗಿಸುವುದರಿಂದ ಆಹಾರದ ಬಗ್ಗೆ ಕಡೆಗಣನೆ ಸಲ್ಲ ಅಲ್ಲವೆ?

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ತಂದಿಟ್ಟ ಗಿಡ ಮನೆಗೇ ಹಾನಿ ಮಾಡಿದ್ರೆ..'; 'ನೋ ಕ್ಲಾಸ್', BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚಾ ಸುದೀಪ್

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌ವೇಯಲ್ಲಿ ಅಪಘಾತಕ್ಕೆ ಬಿಗ್ ಟ್ವಿಸ್ಟ್: ಸ್ನೇಹಿತನಿಂದಲೇ ಭೂಮಿಕಾ ಕೊಲೆ?

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!