ಬೈಟುಕಾಫಿ

ಜೆರೆಮಿಯ ಮತ್ತು ಅಡಿಗಲ್ಲು

ಜೆರೆಮಿಯ ತುಂಬ ಉದ್ದದ ಹುಡುಗಿಯೋರ್ವಳನ್ನು ಪ್ರೀತಿಸುತ್ತಿದ್ದ. ಪ್ರತಿದಿನ ರಾತ್ರಿ  ಅವಳು ಕೆಲಸ ಮಾಡುವ ಸ್ಥಳದಿಂದ ಅವಳನ್ನು ಅವಳ ಮನೆಯ ತನಕ ಅವನು ಬಿಟ್ಟು ಬರುತ್ತಿದ್ದ. ಈ ಸಂದರ್ಭದಲ್ಲಿ ಅವಳನ್ನೊಮ್ಮೆ ಚುಂಬಿಸಲು ಅವನು ಆಸೆಪಡುತ್ತಿದ್ದ.  ಒಂದು ದಿನ ರಾತ್ರಿ ಹೇಗೋ ಧೈರ್ಯ ಮಾಡಿ ಕೇಳಿಯೇಬಿಟ್ಟ- 'ನಿನ್ನನ್ನೊಮ್ಮೆ ಚುಂಬಿಸಲು ಬಿಡುವೆಯಾ?' ಆಕೆ ಒಪ್ಪಿದಳು. ಆದರೆ ಜೆರೆಮಿಯನಾದರೋ ತುಂಬ ಕುಳ್ಳನಾಗಿದ್ದ. ಆದುದರಿಂದ ಅವನು ಏರಿ ನಿಂತುಕೊಳ್ಳಲು ಏನಾದರೂ ಸಿಗುವುದೋ ಎಂದು ಅವರು ಸುತ್ತಮುತ್ತ ನೋಡಿದರು. ಅಲ್ಲಿ ಅವರಿಗೆ ಯಾರೋ ಕಮ್ಮಾರರು ಬಿಟ್ಟುಹೋಗಿದ್ದ ಕುಲುಮೆ ಮತ್ತು ಅಡಿಗಲ್ಲು ಕಾಣಿಸಿತು. ಆ ಅಡಿಗಲ್ಲಿನ ದಪ್ಪ, ಜೆರೆಮಿಯ ತನ್ನ ಪ್ರೇಯಸಿಯನ್ನು ಚುಂಬಿಸಲು ಅಗತ್ಯವಿದ್ದಷ್ಟೇ ಎತ್ತರವಾಗಿತ್ತು. ಜೆರೆಮಿಯ ಆ ಅಡಿಗಲ್ಲಿನ ಮೇಲೆ ನಿಂತು ತನ್ನ ಪ್ರೇಯಸಿಯನ್ನು ಚುಂಬಿಸಿದ. ಇದಾಗಿ ಸುಮಾರು ಅರ್ಧ ಮೈಲು ನಡೆದ ಮೇಲೆ ಜೆರೆಮಿಯ ಕೇಳಿದ- 'ನಾನು ನಿನ್ನನ್ನು ಇನ್ನೊಂದು ಸಲ ಚುಂಬಿಸಲೆ, ಪ್ರಿಯೆ?' 'ಬೇಡ'. ಆ ಹುಡುಗಿ ಹೇಳಿದಳು - 'ಇವತ್ತಿಗೆ ಒಂದು ಸಾಕು.' ಜೆರೆಮಿಯ ಹೇಳಿದ- 'ಹಾಗಾದರೆ ಈ ಹಾಳಾದ ಅಡಿಗಲ್ಲನ್ನು ನಾನು ಹೊತ್ತು ಬರುವುದನ್ನು ನೀನೇಕೆ ತಡೆಯಲಿಲ್ಲ?'
ನೀತಿ: ಪ್ರೀತಿ ಹೊರೆಯನ್ನು ಹೊರುತ್ತದೆ; ಆದರೆ ಅದಕ್ಕೆ ಭಾರವೆನಿಸುವುದಿಲ್ಲ! <

- ನಂದಿನಿ ಡಿ. ಕಾಮತ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ