ವೋಟಿಗಾಗಿ ನೋಟು
ಇದು ಚುನಾವಣೆಯ ಘಾಟು...
- ಬಿ. ಸೋಮಶೇಖರ್, ಸುರಪುರ
ಪೊಳ್ಳು ಭರವಸೆಗಳನ್ನು ನೀಡಿ ಮುಗ್ಧ ಮತದಾರರನ್ನು ವಂಚಿಸುವ ಸಮಯ..
ಭ್ರಷ್ಟಾಚಾರದ ಮೊದಲ ಮೆಟ್ಟಿಲು..
ಹಿಂದಿತ್ತು ಐದು ವರ್ಷಕ್ಕೊಮ್ಮೆ..
ಈಗ ಪಕ್ಷಾಂತರಿಗಳಿಗೆ ನಿರಂತರ..
ಇಲ್ಲಿ ಗೆದ್ದವ ಭೂಪ, ಗೆಲ್ಲಿಸಿದವ ಯಾವಾಗಲೂ ಬೆಪ್ಪ..
- ಮಧು ಮಾಲ್ವೆ, ಸಾಗರ
ಜನತೆ ಎಷ್ಟೇ ಕಷ್ಟದಲ್ಲಿದ್ದರೂ, ಚುನಾವಣಾ ಸಮಯದಲ್ಲಿ ಹಣ ಹಾಗೂ ಹೆಂಡದ ಹೊಳೆಗೇನೂ ಕೊರತೆಯಿರುವುದಿಲ್ಲ!
- ಹರಳಹಳ್ಳಿ ಪುಟ್ಟರಾಜು, ಪಾಂಡವಪುರ