ಬೈಟುಕಾಫಿ

ಎಫ್‌ಐಆರ್ ಕೇಳಿ ಪಡೆಯಿರಿ

ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದಾಗ ಪ್ರಥಮ ಮಾಹಿತಿ ವರದಿಯನ್ನು ನೀವು ಪೊಲೀಸರಿಂದ ಕೇಳಿ ಪಡೆಯಿರಿ. ಹಾಗೂ ದೂರು ದಾಖಲಿಸುವ ವೇಳೆ ಎಫ್‌ಐಆರ್‌ನ ಕೊನೆಯಲ್ಲಿ ನಿಮ್ಮ ದೂರವಾಣಿ ಸಂಖ್ಯೆಯನ್ನು ಮರೆಯದೆ ದಾಖಲಿಸಿ.
ದೂರವಾಣಿ ಸಂಖ್ಯೆ ದಾಖಲಿಸುವುದರಿಂದ ಪೊಲೀಸರಿಗೆ ಯಾವುದೇ ಅನುಮಾನ ಬಂದರೂ ನಿಮಗೆ ಕರೆ ಮಾಡಿ ಅದನ್ನು ಬಗೆಹರಿಸಿಕೊಳ್ಳುತ್ತಾರೆ. ಇಲ್ಲವಾದಲ್ಲಿ ಅವರು ನಿಮ್ಮ ಮನೆಗೆ ಬಂದು ಆ ಅನುಮಾನ ಬಗೆಹರಿಸಿಕೊಳ್ಳಬೇಕು.
ದೂರು ನೀಡಿದ ಪ್ರತಿಯ ಒಂದು ನಕಲನ್ನು ಜೆರಾಕ್ಸ್ ತೆಗೆದಿಟ್ಟುಕೊಳ್ಳಿ. ಇದರಿಂದ ಮುಂದಿನ ದಿನಗಳಲ್ಲಿ ದೂರುದಾರರಿಗೆ ಉಪಯೋಗವಾಗುತ್ತದೆ. ದೂರು ನೀಡಿದ್ದಕ್ಕೆ ಅದು ದಾಖಲೆಯಾಗಿರುತ್ತದೆ.
ಎಫ್‌ಐಆರ್ ಪ್ರತಿಯನ್ನು ಕೊಡಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳುವಂತಿಲ್ಲ. ಅದು ಉಚಿತ. ಎಫ್‌ಐಆರ್‌ನ ಪ್ರತಿ ಪಡೆಯಲು ಪೊಲೀಸರಿಗೆ ಯಾವುದೇ ಕಾರಣಕ್ಕೂ ಹಣ ಕೊಡಬೇಡಿ. ಪ್ರಥಮ ಮಾಹಿತಿ ವರದಿ ದಾಖಲಾದ ದಿನಾಂಕ, ಕ್ರೈಂ ನಂಬರ್ ಹಾಗೂ ಯಾವ ಠಾಣೆಯಲ್ಲಿ ದೂರು ದಾಖಲಾಗಿದೆ ಎಂಬುದು ಮುಖ್ಯ. ಅದನ್ನು ಜೋಪಾನವಾಗಿಟ್ಟುಕೊಳ್ಳಬೇಕು.
ದೂರು ದಾಖಲಿಸುವಾಗ ಪೊಲೀಸರು ನಿಮ್ಮಿಂದ ಬೇರೆ ಹೇಳಿಕೆ ಬರೆಸಿದ್ದಾರೆಯೇ ಅಥವಾ ನಿಜಾಂಶ ಅದರಲ್ಲಿದೆಯೇ ಎಂಬುದು ತಿಳಿಯುತ್ತದೆ. ಇದರಿಂದ ಪೊಲೀಸರು ಜನರಿಗೆ ಮೋಸ ಮಾಡಿದರೂ ಪತ್ತೆ ಮಾಡಬಹುದು.
ವಾಹನಕ್ಕೆ ಸಂಬಂಧಿಸಿದ ದೂರಾದರೆ ಇನ್ಸುರೆನ್ಸ್‌ಗೆ ಅರ್ಜಿ ಸಲ್ಲಿಸಲು ಬೇಕಾಗುತ್ತದೆ, ಬೇರೆ ಪ್ರಕರಣಗಳಿಗೆ ಸಂಬಂಧಿಸಿದ್ದಾದರೆ ನೀವು ನಿಮ್ಮ ಪರ ವಕಾಲತ್ತು ವಹಿಸುವ ವಕೀಲರ ಬಳಿ ಹೋದಾಗ ಘಟನೆ ವಿವರ ನೀಡುವುದರ ಜತೆಗೆ ದೂರಿನ ಪ್ರತಿಯನ್ನು ಅವರಿಗೆ ತೋರಿಸಿದರೆ, ಪ್ರಕರಣ ಸುಲಭವಾಗಿ ಅರ್ಥವಾಗುತ್ತದೆ ಹಾಗೂ ನ್ಯಾಯಾಲಯದಲ್ಲಿ ವಾದ ಹಾಗೂ ಪ್ರತಿವಾದಕ್ಕೆ ಸಿದ್ಧರಾಗಲು ಸಹ ಅನುಕೂಲವಾಗುತ್ತದೆ.

-ಶಾಂತ ತಮ್ಮಯ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!