ಕುಮಾರಿ ಸುರಭಿ ಬಾಲಕೃಷ್ಣ ಅವರ ಭರತನಾಟ್ಯ ರಂಗಪ್ರವೇಶ ಎಡಿಎ ರಂಗಮಂದಿರದಲ್ಲಿ ಏಪ್ರಿಲ್ 21ರಂದು ನಡೆಯಲಿದೆ. ವಿಜಯಾ ಹಾಗೂ ಬಾಲಕೃಷ್ಣ ಅವರ ಮಗಳಾದ ಕು. ಸುರಭಿ, ವಿದುಷಿ ಸಮನ್ವಿತಾ ಶರ್ಮಾ ಅವರಲ್ಲಿ ಭರತನಾಟ್ಯ ತರಬೇತಿ ಪಡೆದಿದ್ದಾರೆ.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಅಂತಾರಾಷ್ಟ್ರೀಯ ಖ್ಯಾತಿಯ ಕೂಚಿಪುಡಿ ನೃತ್ಯಕಲಾವಿದೆ ವೈಜಯಂತಿ ಕಾಶಿ, ನೃತ್ಯಾರ್ಪಣಾ ನೃತ್ಯ ಶಾಲೆಯ ಸ್ಥಾಪಕಿ ಭವಾನಿ ರಾಮನಾಥ್, ನಿವೃತ್ತ ಐಪಿಎಸ್ ಅಧಿಕಾರಿ ಕೆ.ಸಿ. ರಾಮಮೂರ್ತಿ, ಹಿರಿಯ ಕಲಾ ವಿಮರ್ಶಕ ಡಾ. ಎಂ. ಸೂರ್ಯ ಪ್ರಸಾದ್ ಆಗಮಿಸಲಿದ್ದಾರೆ.
ದಿನಾಂಕ: 21.04.2013
ಸ್ಥಳ: ಎಡಿಎ ರಂಗಮಂದಿರ, ರವೀಂದ್ರ ಕಲಾಕ್ಷೇತ್ರದ ಎದುರು, ಜೆ.ಸಿ. ರಸ್ತೆ, ಬೆಂಗಳೂರು.
ಸಮಯ: ಸಂಜೆ 6 ಗಂಟೆ.