ಬೈಟುಕಾಫಿ

ಹಾಗಿದ್ದರೆ ನೀವೇನು?

ನೀವು ನೀವಾಗಿಲ್ಲದಿದ್ದರೆ ನಿಮ್ಮನ್ನು ಈ ಸಮಾಜ ಗುರುತಿಸುತ್ತದೆಯೇ? ಆಗಲೂ ನಿಮ್ಮನ್ನು ಅಷ್ಟೇ ಗೌರವಾದರಗಳಿಂದ ನೋಡುತ್ತದೆಯೇ? ನೀವು ಏನಾಗಿದ್ದೀರೋ ಅದಾಗಿಲ್ಲದಿದ್ದರೂ ನಿಮ್ಮ ಜನಪ್ರಿಯತೆ ಕುಗ್ಗುವುದೇ ಇಲ್ಲವೇ? ಹೀಗೊಮ್ಮೆ ನಿಮ್ಮನ್ನು ಪ್ರಶ್ನಿಸಿಕೊಂಡು ನೋಡಿ. ವಿಚಿತ್ರ ಎಂದೆನಿಸಬಹುದು. 'ಇದೇನಿದು?' ನಾನು ನಾನಾಗಿಲ್ಲದಿರುವುದು ಎಂದರೇನು? ಗೊಂದಲ ಸಹಜ.
ಆದರೆ, ನೀವು ಏನೆಂಬುದನ್ನು ಕಂಡುಕೊಳ್ಳಲು ಇದೇ ಸೂಕ್ತವಾದ ಮಾರ್ಗ. ನಿಮ್ಮ ವ್ಯಕ್ತಿತ್ವ ಎಷ್ಟು ನೈಜವಾದದ್ದು ಎಂಬುದನ್ನು ತಿಳಿದುಕೊಳ್ಳಲೂ ಇದೇ ಉಪಾಯ. ಬಹುಶಃ ಇದನ್ನು ಹೀಗೆ ಹೇಳಿದರೆ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದೇನೋ. ನೀವು ಏನು ಮಾಡಿಕೊಂಡಿದ್ದೀರಿ ಎಂದು ನಿಮ್ಮನ್ನು ಯಾರಾದರೂ ಪ್ರಶ್ನಿಸಿದರೆ ಥಟ್ಟನೆ ನಿಮ್ಮ ವೃತ್ತಿ ಅಥವಾ ಜೀವನೋಪಾಯಕ್ಕೆ ನೀವು ಕಂಡುಕೊಂಡ ಮಾರ್ಗ ಏನೆಂಬುದನ್ನು ಹೇಳುತ್ತೀರಿ. ಅದೇ ರೀತಿ ನಿಮ್ಮನ್ನು ಯಾವುದೇ ಅಧಿಕಾರಿ ಎಂಬ ಕಾರಣಕ್ಕೋ, ರಾಜಕಾರಣಿ ಎಂಬುದಕ್ಕೋ, ಊರಿನ ಮುಖಂಡ, ಪ್ರಭಾವಿ, ಶಿಕ್ಷಕ, ಬರಹಗಾರ, ಪತ್ರಕರ್ತ... ಹೀಗೆ ಬೇರೆಬೇರೆ ಕಾರಣಗಳಿಗಾಗಿ ಸಮಾಜ ಗುರುತಿಸುತ್ತಿರುತ್ತದೆ. ಅದೇ ಕಾರಣಕ್ಕೆ ನಿಮ್ಮನ್ನು ಗೌರವಿಸುತ್ತದೆ. ಒಂದೊಮ್ಮೆ ನೀವು ಬದುಕಿನ ಯಾವುದೇ ಹಂತದಲ್ಲಿ ಅಂಥದ್ದೊಂದು ಐಡೆಂಟಿಟಿಯಿಂದ ಹೊರಬಂದರೆಂದು ಅಂದುಕೊಳ್ಳಿ, ನೀವು ಈವರೆಗೆ ಹೊಂದಿದ್ದ ಅಧಿಕಾರ ಹೋಗುವುದಿರಬಹುದು, ಬರಹ ಸಾಧ್ಯವಾಗದೇ ಇರಬಹುದು... ಒಟ್ಟಾರೆ ನಿಮ್ಮನ್ನು ಈವರೆಗೆ ಸಮಾಜ ಏನೆಂದು ಗುರುತಿಸುತ್ತದೆಯೋ ಅದೀಗ ನೀವಲ್ಲ ಎಂಬ ಸ್ಥಿತಿಯಲ್ಲಿಯೂ ಸುತ್ತಲಿನವರು ನಿಮ್ಮನ್ನು ಮೊದಲಿನಷ್ಟೇ ಆಪ್ತವಾಗಿ ನಡೆಸಿಕೊಳ್ಳುತ್ತದೆಯೇ? ಒಂದೊಮ್ಮೆ ಹೌದು ಎಂಬುದು ನಿಮ್ಮ ಉತ್ತರವಾಗಿದ್ದರೆ ಅದು ನಿಜವಾಗಲೂ ನಿಮ್ಮ ಸ್ವಂತಿಕೆ. ಅದೇ ನಿಮ್ಮ ವ್ಯಕ್ತಿತ್ವ. ವೃತ್ತಿ, ಹವ್ಯಾಸ, ಅಧಿಕಾರ, ಹುದ್ದೆ ಇತ್ಯಾದಿಗಳಿಂದ ಹೊರತಾಗಿಯೋ ಪ್ರತಿಯೊಬ್ಬನಿಗೂ ಅವನದೇ ಆದ ಒಂದು ವ್ಯಕ್ತಿತ್ವ ಇರುತ್ತದೆ. ಅದು ನಿಮ್ಮದೇ ಆಗಿರಬೇಕಾದುದು ಅಥವಾ ಅದನ್ನು ನಿಮ್ಮದೇ ಆಗಿಸಿಕೊಳ್ಳುವುದು ಸುಲಭದ ಮಾತಲ್ಲ. ಮನುಷ್ಯ ಏನಾಗಿದ್ದಾನೆ ಎಂಬುದಕ್ಕಿಂತ ಅವನು ಹೇಗೆ ವರ್ತಿಸುತ್ತಾನೆ ಎಂಬುದರ ಮೇಲೆ ಅವನ ವ್ಯಕ್ತಿತ್ವ ನಿರ್ಧಾರವಾಗುತ್ತದೆ. ನಿಮ್ಮ ಬಳಿ ಇರುವ ಶ್ರೀಮಂತಿಕೆ, ಅಧಿಕಾರ ಅಥವಾ ಇನ್ನೇನೋ ಒಂದರಿಂದ ಜನ  ನಿಮ್ಮನ್ನು ಗುರುತಿಸುತ್ತಾರೆ ಎಂದರೆ ಅದೇ ನಿಮ್ಮ ವ್ಯಕ್ತಿತ್ವ ಎಂದುಕೊಳ್ಳುವುದು ಮೂರ್ಖತನ. ಏಕೆಂದರೆ ಹಾಗೆ ಸಿಗುವ ಪ್ರೀತಿ, ಬೆಲೆ, ಗೌರವ, ಆದರಗಳು ನಿಮಗಲ್ಲ. ನೀವೇನಾಗಿದ್ದಿರೋ ಅದಕ್ಕೆ. ಅದರಿಂದ ಹೊರತಾಗಿಯೂ ನೀವೊಬ್ಬ ಮಾನವ ಎಂದು ಗುರುತಿಸಿಕೊಂಡು ಪ್ರೀತಿ ವಿಶ್ವಾಸವನ್ನು ಗಳಿಸಿಕೊಳ್ಳುವುದಿದೆಯಲ್ಲ, ಅದರ ಸಾರ್ಥಕ್ಯಕ್ಕೆ ಸಾಟಿ ಇನ್ನೊಂದಿಲ್ಲ.

-ಸಹನೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!