ನಾನು ಬಾಳೆಕಾಯಿ ವ್ಯಾಪಾರಿ. ನನ್ನ ಲೈಫ್‌ನಲ್ಲಿ ತುಂಬಾ ಸಮಸ್ಯೆಗಳಿವೆ. ಆರ್ಥಿಕವಾಗಿ ಬಳಲುತ್ತಿದ್ದೇನೆ. ನನಗಿನ್ನೂ 28 ವರ್ಷ. ಎಲ್ಲರ ಸಾಲವನ್ನೂ ತೀರಿಸ್ತೀನಿ ಅಂತ ನಂಬಿಕೆ ಇದೆ. ಆದರೆ, ನನ್ನ ಸುತ್ತ ಇರೋ ಜನ ಕೆಲವೊಮ್ಮೆ ಅವಮಾನಕರವಾಗಿ ಮಾತನಾಡುತ್ತಾರೆ. ಅವರ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ದೇನೆ ಅಂತನ್ನಿಸುತ್ತಿದೆ.
- ಚೇತನಕುಮಾರ್, ಊರು ಬೇಡ
ಸಾಲವನ್ನು ವಂಚಿಸುವ ಜನರೇ ಹೆಚ್ಚಿರುವಾಗ, ನಿಮ್ಮಂಥವರು ನಿಜಕ್ಕೂ ಮಾದರಿ. ನಿಮ್ಮ ವ್ಯಾಪಾರದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಸಾಧ್ಯವಾದರೆ ನಡೆಸಿ. ನಿಮಗಿನ್ನೂ ವಯಸ್ಸಿದೆ. ಬಾಳೆಹಣ್ಣು ಕೊಟ್ಟು ಎಲ್ಲರನ್ನೂ ಸಿಹಿಯಾಗಿಸುವ ನೀವೂ ಖಂಡಿತಾ ಸಿಹಿಯಾಗುತ್ತೀರಿ. ಇನ್ನೊಬ್ಬರ ಮಾತಿಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು, ಬದುಕಿನ ಮಾರ್ಗದಲ್ಲಿ ಕಿವುಡರಾಗಿ ಚಲಿಸಿ. ಆಲ್ ದಿ ಬೆಸ್ಟ್.
-ಡಾ. ಸ್ಯಾಟಲೈಟ್
anekaby2@gmail.com
ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...