ಯಾವ ನಟಿಯೊಳಗೆ ಯಾವ ಪ್ರತಿಭೆ ಇರುತ್ತೋ ಯಾವಾನಿಗ್ ಗೊತ್ತು? ಇಲ್ಲೇ ಕೇಳಿ, ಹಾರ್ಲಿಕ್ಸ್ ಹುಡುಗಿ ಅನುಷ್ಕಾ ಶರ್ಮಾ ಚಿಕ್ಕಂದಿನಲ್ಲಿ ಕವಯತ್ರಿ ಆಗಿದ್ದಳಂತೆ!
ಸ್ವತಃ ಅನುಷ್ಕಾಳೇ ಇದನ್ನು ಮೊನ್ನೆ ಹೇಳಿಕೊಂಡಳು. 'ಬರ್ತಾ ಬರ್ತಾ ಯಾಕೆ ರಾಯರ ಕುದುರೆ ಈ ಥರ ಆಯ್ತು!?' ಅಂತ ಯಾರೋ ತುಂಟ ಪತ್ರಕರ್ತ ಪ್ರಶ್ನೆ ಎಸೆದನಂತೆ. 'ಕ್ರಮೇಣ ನಟನೆ ಕಡೆಗೆ ಹೆಚ್ಚು ಒಲವು ತೋರಿದ್ರಿಂದ ಕವಿತೆ ಬರೆಯೋದಿಕ್ಕೆ ಸಾಧ್ಯವಾಗ್ಲಿಲ್ಲ' ಅಂತ ಸ್ಪಷ್ಟನೆಯನ್ನೂ ಕೊಟ್ಟಿದ್ದಾಳೆ. 'ಆದರೆ, ಈಗ ನನಗೆ ಕವಯತ್ರಿ ಆಗೋ ಆಸೆ ಕಾಡುತ್ತಿದೆ. ಪದ್ಯಗಳನ್ನು ಬರೆಯಲು ಶುರುಮಾಡಿದ್ದೇನೆ' ಅಂತಲೂ ಹೇಳಿಕೊಂಡಳು.