ಸಾಗರ ಫೋಟೊಗ್ರಾಫಿಕ್ ಸೊಸೈಟಿಯು ಈಗಾಗಲೇ ಅನೇಕ ರಾಜ್ಯಮಟ್ಟದ ಛಾಯಾಚಿತ್ರ ಪ್ರದರ್ಶನಗಳನ್ನು ಏರ್ಪಡಿಸಿದೆ ಮತ್ತು ಅನೇಕ ಕಾರ್ಯಕ್ರಮಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ನಡೆಸಿ ಉತ್ಸಾಹಿಗಳಿಗೆ ಹೊಸ ಅನುಭವಗಳನ್ನು ನೀಡುತ್ತಾ ಬಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾಗಿದ್ದ ಡಾ. ಡಿ.ವಿ. ರಾವ್ ಅವರು ಈ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಅದರ ಪ್ರಾರಂಭಿಕ ಅಧ್ಯಕ್ಷರು ಕೂಡ ಆಗಿದ್ದು ವಿಶೇಷ. ಈ ವರ್ಷ ರಾವ್ ಅವರ ಜನ್ಮಶತಮಾನೋತ್ಸವದ ಸಂದರ್ಭ. ಇದರ ಅಂಗವಾಗಿ ಸಂಸ್ಥೆಯು ವರ್ಷವಿಡೀ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
'ಸಾಗರ ಫೋಟೊಗ್ರಫಿಕ್ ಸೊಸೈಟಿ'ಯು ಹೆಗ್ಗೋಡಿನ ನೀನಾಸಮ್ ಸಹಯೋಗದೊಂದಿಗೆ ಮೂರು ದಿನಗಳ ಪ್ರಾರಂಭಿಕ ಛಾಯಾಚಿತ್ರ ಕಾರ್ಯಾಗಾರವನ್ನು ಇದೇ ಫೆಬ್ರವರಿ 22, 23 ಮತ್ತು 24ರಂದು ವಸತಿ ಮತ್ತು ಊಟ ಸಹಿತ ಏರ್ಪಡಿಸಿದೆ. ಸ್ಥಳ: ಹೆಗ್ಗೋಡು. ಸೀಮಿತ ಸಂಖ್ಯೆಯ ಅಭ್ಯರ್ಥಿಗಳಿಗೆ ಅವಕಾಶವಿರುವುದರಿಂದ ಮೊದಲು ನೋಂದಾಯಿಸಿದವರಿಗೆ ಮೊದಲ ಆದ್ಯತೆ. ಒಟ್ಟಾರೆ ಶಿಬಿರದ ಖರ್ಚು ತಲಾ ರೂ. 1300. ನೋಂದಾಯಿಸಲು ರೂ. 700ನ್ನು (ನಾನ್ ರಿಫಂಡೆಬಲ್) ಎಂ.ಒ. ಅಥವಾ ಡಿ.ಡಿ. ಮುಖಾಂತರ ತಾ. 10-2-2013ಕ್ಕೆ ಮುಂಚಿತವಾಗಿ ತಲುಪಿಸಬೇಕು. ಉಳಿಕೆ ಮೊತ್ತವನ್ನು ಕಾರ್ಯಾಗಾರದ ದಿನದಂದು ಕೊಡಬೇಕಾಗುವುದು.
ನೋಂದಣಿ ವಿಳಾಸ: ಕೆ. ಚಂದ್ರಶೇಖರ್, ಕಾರ್ಯದರ್ಶಿ, ಎಸ್.ಪಿ.ಎಸ್. ಅಣಲೇಕೊಪ್ಪ, ಸಾಗರ-577 401, ಶಿವಮೊಗ್ಗ ಜಿಲ್ಲೆ. ಮೊ: 9480280977, 9845931306. ಇ-ಮೇಲ್: rajaram.kilar@gmail.com
ವಸತಿ ವ್ಯವಸ್ಥೆ ಅವಶ್ಯಕತೆ ಇಲ್ಲದ, ಮಧ್ಯಾಹ್ನದ ಊಟ/ಉಪಾಹಾರ ವ್ಯವಸ್ಥೆ ಮಾತ್ರ ಬೇಕಾಗುವ ಸ್ಥಳೀಯ ಅಭ್ಯರ್ಥಿಗಳು ನೋಂದಣಿ ಮೊತ್ತ ರೂ. 300 ನೀಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.