ಮುನಿದು, ಮುದುಡಿದ ಮನ ಮಿಡಿದು ಮಣಿದಾಗ, ಮನೆಯ ಮುಖಗಳಲ್ಲಿ ಮಂದಹಾಸದ ಮಿರಿಮಿರಿ ಮಿಂಚು!
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಈ ಚಕ್ರವರ್ತಿ, ಮುಪ್ಪಿನಲ್ಲಿ ಮಕ್ಕಳಿಂದ
ಯೌವನ ಯಾಚಿಸಿದ -
ಬೇಡು, ನಿವೇದನೆ ಸಲ್ಲಿಸು, ಕೋರಿಕೋ ಮೊದಲ ಸೂಚನೆಯ ಕಡೆಯ ಪದದ ಮೊದಲ ಮೂರು ಅಕ್ಷರಗಳಲ್ಲಿ ಕಡೆಯದನ್ನು ತಿರುಚಿ, ಸಿಗುತ್ತದೆ -
ಮುಖ ತೊಳೆಯುವುದಕ್ಕೆ ಮೊದಲು
ಕಣ್ಣಿನಿಂದ ತೆಗೆಯಬೇಕಾದ ಕೊಳೆ -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
..... ಪಾಯಸಕೆ, ಕೃಷ್ಣನಾಮ ಸಕ್ಕರೆ,
ಪುರಂದರದಾಸರ ಕೃತಿಯ ಮೊದಲ ಸಾಲು -
ಸಹ್ಯಾದ್ರಿ ಮುಂತಾದ 'ಬೆಟ್ಟ'ಗಳಿರುವ,
ಕರ್ನಾಟಕದ ಹಸಿರಿನ 'ಮಳೆ'ಯ 'ನಾಡು' -
ಬೇರೆ ಬೇರೆ ಪ್ರಪಂಚ ... ಒಂದೇ ಪದ! -
ನಿಂತಿರುವ ನೀರು ಹೀಗೇ ಇದ್ದರೆ, ರೋಗ
ಹರಡುವುದು 'ಗಟ್ಟಿ' -
ಗತಪ್ರತ್ಯಾಗತ
ಗಯಾ ಮತ್ತು ಪ್ರಯಾಗ ಭಾರತದ ಎರಡು
ಅತ್ಯಂತ ಪವಿತ್ರ ಕ್ಷೇತ್ರಗಳು. ಈ ಎರಡೂ ಕಡೆ ಮಾಡಿದ ಯಾಗ ಬಹಳ ಶ್ರೇಷ್ಠ, ಪುಣ್ಯಫಲದಾಯಕ
'ಗಯಾಪ್ರಯಾಗ'
ನಿನ್ನೆಯ ಉತ್ತರಗಳು:
3 ಅಕ್ಷರ: ವಾತಾಪಿ, ತಾಯಿತ, ಪಿತನ.
4 ಅಕ್ಷರ: ಜಲಪಾತ, ಲಕ್ಷಜನ, ಪಾಜಕದ, ತನದಲ್ಲ.
-ಎಲ್.ಜಿ. ಜ್ಯೋತೀಶ್ವರ