ಬೈಟುಕಾಫಿ

ನೀವು ತುಂಬಾ ಕುಳ್ಳಗಿದ್ದೀರಾ!?

ಕೆಲವರು ತುಂಬಾ ಎತ್ತರವಾಗಿರುತ್ತಾರೆ. ಕೆಲವರು ಅತಿ ಕುಳ್ಳರಾಗಿರುತ್ತಾರೆ. ಆದರೆ ಹೆಚ್ಚಿನ ಜನರು ಸಾಮಾನ್ಯ ಎತ್ತರದವರಾಗಿದ್ದರೆ, ಮತ್ತೆ ಕೆಲವರನ್ನು ನೋಡಿದರೆ ನಮಗೆ ನಗು ಬರುವಷ್ಟು ಕುಳ್ಳರಾಗಿರುತ್ತಾರೆ. ಆದರೆ ಒಬ್ಬ ಮನುಷ್ಯನ ಬೆಳವಣಿಗೆ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ಅನುವಂಶಿಯ ಗುಣಗಳು ಒಂದು ಕಾರಣವಾದರೆ, ಗಿಡ್ಡತನಕ್ಕೆ ಮತ್ತೊಂದು ಕಾರಣವೇನೆಂದರೆ 'ಸರ್ಟಿಲೀಜ್‌' ಎಂಬ ರೋಗ.
ಸಾಮಾನ್ಯವಾಗಿ ಬಾಲ್ಯದಲ್ಲಿ ಮತ್ತು ತಾರುಣ್ಯದಲ್ಲಿ ಶರೀರದ ಎಲುಬು ಗೂಡಿನ ಎತ್ತರ ಹೆಚ್ಚುತ್ತದೆ. ಏಕೆಂದರೆ ಬೆಳೆಯುವ ಎಲುಬಿನ ತುದಿಯಲ್ಲಿ ಸರ್ಟಿಲೀಜ್, ಎಲುಬಾಗಿ ಪರಿವರ್ತನೆಗೊಳ್ಳುತ್ತದೆ. ಸರ್ಟಿಲೀಜ್‌ನ ಈ ರೋಗ  ಕೈ ಕಾಲುಗಳು ಸಾಮಾನ್ಯ ರೀತಿಯಲ್ಲಿ ಬೆಳೆಯಲು ಆಡಚಣೆ ಉಂಟುಮಾಡುತ್ತದೆ. ಅಲ್ಲದೆ ಪಿಟ್ಯೂಯಿಟರಿ ಗ್ರಂಥಿಗಳು ಸಾಕಷ್ಟು ಹಾರ್ಮೋನ್‌ಗಳನ್ನು ಉತ್ಪತ್ತಿ ಮಾಡದಿದ್ದಾಗಲೂ ಗಿಡ್ಡತನ ಬರುತ್ತದೆ. ಚಿಕ್ಕ ವಯಸ್ಸಿನಲ್ಲಿ ಪಿಟ್ಯೂಯಿಟರಿ ಗ್ರಂಥಿಗಳು ಕ್ರಿಯಾತ್ಮಕವಾಗಿರದಿದ್ದರೆ ದೇಹದ ಸಾಮಾನ್ಯ ಬೆಳವಣಿಗೆಗೆ ಕುಂದುಂಟಾಗುತ್ತದೆ. ಜೊತೆಗೆ ಎಡ್ರಿನಲ್, ಪಿಟ್ಯೂಯಿಟರಿ, ಥೈರಾಯಿಡ್ ಹಾಗೂ ಪುರುಷ ಮತ್ತು ಸ್ತ್ರೀ ಲೈಂಗಿಕ ಗ್ರಂಥಿಗಳ ದೋಷದಿಂದಲೂ ಕೂಡ ಕುಂಠಿತ ಬೆಳವಣಿಗೆ ಕಂಡುಬರುತ್ತದೆ.
 = ಹರಳಹಳ್ಳಿ ಪುಟ್ಟರಾಜು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!