ಬೈಟುಕಾಫಿ

ಬೆಳ್ಳುಳ್ಳಿ ಬಳಕೆಗೆ ಬೆಲೆ ಕಟ್ಟಲಾಗದು!

ನಿನ್ನೆ ಬೆಳ್ಳುಳ್ಳಿಯ ಜಾತಿಗೆ ಬಗ್ಗೆ ಹೇಳಿದೆ. ಇಂದು ಅದರ ಸಂಯೋಜನೆಯನ್ನು ನಿಮ್ಮ ಮುಂದಿಡುತ್ತೇನೆ...
ಇದರಲ್ಲಿ ತೇವಾಂಶ ಶೇ.62.8, ಸಸಾರಜನಕ ಪದಾರ್ಥ ಶೇ.6.3, ಜಿಡ್ಡು ಶೇ.0.1, ಖನಿಜಾಂಶ ಶೇ.1, ನಾರು ಶೇ.0.8, ಶರ್ಕರ ಪದಾರ್ಥಗಳು ಶೇ.29ರಷ್ಟಿರುತ್ತವೆ.
ಇನ್ನು ಬೆಳ್ಳುಳ್ಳಿ ಪುಡಿಯ ಸಂಯೋಜನೆಯೇ ಬೇರೆ. ಅದರಲ್ಲಿ ತೇವಾಂಶ ಸೇ.5.2, ಸಸಾರಜನಕ ಪದಾರ್ಥ ಶೇ.17.5, ಜಿಡ್ಡು ಶೇ.0.6, ಖನಿಜಾಂಶ ಶೇ.3.2, ನಾರು ಶೇ.1.9, ಶರ್ಕರ ಪದಾರ್ಥಗಳು ಶೇ.71.4 ರಷ್ಟಿರುತ್ತವೆ.
ಬೆಳ್ಳುಳ್ಳಿಗೆ ಉತ್ತಮ ರುಚಿಕಾರಕ ಗುಣವೂ, ಹಲವು ರೋಗಶಮನ ಗುಣವೂ ಇದೆ. ಭಾರತದ ಆಯುರ್ವೇದ ಪದ್ಧತಿಯಲ್ಲಂತೂ ಬೆಳ್ಳುಳ್ಳಿಗೆ ಮಹತ್ವದ ಸ್ಥಾನ ಕೊಡಲಾಗಿದೆ. ವಾತಹರ ಮತ್ತು ಜಠರೋತ್ತೇಜಕ ಗುಣಗಳಿರುವ ಕಾರಣಕ್ಕಾಗಿ ಯುನಾನಿ ಪದ್ಧತಿಯಲ್ಲೂ ಇದು ಪರಿಗಣಿಸಲ್ಪಟ್ಟಿದೆ. ಆಹಾರವನ್ನು ಜೀರ್ಣಗೊಳಿಸುವ ಇದರ ಗುಣವನ್ನು ನಮ್ಮ ಪೂರ್ವಿಕರು ಆಗಲೇ ಕಂಡುಹಿಡಿದಿದ್ದಾರೆ. ವಾಯು ನಿವಾರಣೆಗೂ ಬೆಳ್ಳುಳ್ಳಿ ರಾಮಬಾಣ. ಬೆಳ್ಳುಳ್ಳಿ ಸೇವಿಸುವುದರಿಂದ ಜಂತುಹುಳುಗಳನ್ನೂ ನಿಯಂತ್ರಿಸಬಹುದು. ಬೆಳ್ಳುಳ್ಳಿಯಲ್ಲಿ ಅಲ್ಲಿಸಿನ್ ಎಂಬ ಮುಖ್ಯ ಧಾತು ಇದೆ. ಇದು ಅತ್ಯುತ್ತಮ ಜೀವನಿರೋಧಕ.
17- 18ನೇ ಶತಮಾನದಲ್ಲಿ ಕಾಲರಾ ರೋಗ ಎಲ್ಲೆಡೆ ಮನೆಮಾತಾಗಿತ್ತು. ಅದರಲ್ಲೂ ಫ್ರಾನ್ಸ್, ಜರ್ಮನಿ ಇದರಿಂದ ತತ್ತರಿಸಿ ಹೋಗಿದ್ದವು. ಕಾಲರಾ ನಿಯಂತ್ರಿಸಲು ಸಾಕಷ್ಟು ಸಂಶೋಧನೆಗಳೂ ನಡೆದವು. ಆಗಲೇ ಗೊತ್ತಾಗಿದ್ದು, ಬೆಳ್ಳುಳ್ಳಿಗೂ ಕಾಲರಾ ಗುಣಪಡಿಸುವ ಸಾಮರ್ಥ್ಯವಿದೆಯೆಂದು.
ಅಡುಗೆಯಲ್ಲಿ ಬೆಳ್ಳುಳ್ಳಿ ಇಲ್ಲದಿದ್ದರೆ ಅದಕ್ಕೆ ಅರ್ಥವೇ ಇರುವುದಿಲ್ಲ. ಅಮೆರಿಕದಲ್ಲಿ ಬೆಳ್ಳುಳ್ಳಿಯ ಶೇ.50 ಭಾಗವನ್ನು ಆರ್ದ್ರೀಕರಿಸಿ ಆಹಾರ ಕೈಗಾರಿಕೆಯವರಿಗೆ ಮಾರುತ್ತಾರೆ. ಅವರು ಅದನ್ನು ಮೇಯೊನ್ನೀಸ್ ಉತ್ಪನ್ನಗಳು, ಕೋಸಂಬರಿಗಳು, ಟೊಮೇಟೊ ಉತ್ಪನ್ನಗಳು ಮತ್ತು ಹಲವು ಮಾಂಸಾಹಾರಗಳಲ್ಲಿ ಬಳಸುತ್ತಾರೆ. ಹಸಿ ಬೆಳ್ಳುಳ್ಳಿಯನ್ನು ಬೆಳ್ಳುಳ್ಳಿ ಪುಡಿ, ಬೆಳ್ಳುಳ್ಳಿ ಉಪ್ಪು, ಬೆಳ್ಳುಳ್ಳಿ ವಿನಿಗಲ್, ಬೆಳ್ಳುಳ್ಳಿ ಗಿಣ್ಣುಕ್ರೋಟಿನ್, ಬೆಳ್ಳುಳ್ಳಿ ಆಲೂಗಡ್ಡೆ ಉಪ್ಪೇರಿ, ಬೆಳ್ಳುಳ್ಳಿ ಬ್ರೆಡ್ಡು, ಮಾಂಸತಿಂಡಿಗಳು, ಬೇಕನ್ ಮುಂತಾದವುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಅಮೆರಿಕದಲ್ಲಿ ಇದು ಜನಪ್ರಿಯ. ಇಟಲಿ, ಯುರೋಪ್, ಲ್ಯಾಟಿನ್ ಅಮೆರಿಕಗಳಲ್ಲಿ ಬೆಳ್ಳುಳ್ಳಿ ತುಂಬಾ ಜನಪ್ರಿಯ.
ಭಾರತದಲ್ಲೇನು ಕಮ್ಮಿಯೇ? ಚಟ್ನಿ, ಉಪ್ಪಿನಕಾಯಿ, ಮಸಾಲೆಪುಡಿಗಳು, ತರಕಾರಿ ಪಲ್ಯಗಳು, ಮಾಂಸಾಹಾರಗಳು, ಟೊಮೇಟೊ ಕೆಚಪ್ ಮುಂತಾದವುಗಳಲ್ಲಿ ಬೆಳ್ಳುಳ್ಳಿ ಇಲ್ಲದಿದ್ದರೆ ಅವುಗಳ ರುಚಿಯೇ ವಿರೂಪಗೊಳ್ಳುತ್ತದೆ. ಇತ್ತೀಚೆಗೆ ನಾವು ಬೆಳ್ಳುಳ್ಳಿ ಪುಡಿಯನ್ನೂ ಬಳಸಲು ಶುರುಮಾಡಿದ್ದೇವೆ. ಬೆಳ್ಳುಳ್ಳಿಯೆಂದರೇನೇ ಆರೋಗ್ಯದಾಯಕ ರುಚಿ! <

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಸುಪ್ರೀಂಕೋರ್ಟ್​ಗೆ ನನ್ನ ಬಗ್ಗೆ ತಪ್ಪು ಮಾಹಿತಿ: ಸರ್ಕಾರದ ವಿರುದ್ಧ ಡಿಜಿಪಿ ಅಲೋಕ್ ಕುಮಾರ್ ಅಸಮಾಧಾನ!

ಯುವ ಜನತೆಯ ಆಕ್ರೋಶ ತಡೆಯಲು ಸಾಧ್ಯವಿಲ್ಲ, ಇಡೀ ದೇಶ ಜಂತರ್ ಮಂತರ್ ಆಗಲಿದೆ: ಪ್ರಕಾಶ್ ರಾಜ್

ಸೆಪ್ಟೆಂಬರ್‌ನಲ್ಲಿ ನಿರೀಕ್ಷೆ ಮೀರಿ ಹೆಚ್ಚಿದ ಭಾರತದ ಸಗಟು ಹಣದುಬ್ಬರ: ಶೇ.11.4ಕ್ಕೆ ಏರಿಕೆ

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!