1. ಹೆಸರು ಬದಲಿಸಿಕೊಂಡ ಮೇಲೆ ನೀವು 'ಹೆಸರುವಾಸಿ' ಆದಿರಾ ಹೇಗೆ?
- ಹ್ಞೂಂ, ಹೆಸರು ಬದಲಿಸಿಕೊಂಡ ಮೇಲೆ ನನ್ನ 'ಹೆಸರು' ಸ್ವಲ್ವ 'ವಾಸಿ' ಆಯಿತು.
2. ಪೋಷಕ ಪಾತ್ರಗಳಿಂದಲೇ ಪ್ರಸಿದ್ಧಿಯಾದ ನಿಮಗೆ ನಿಮ್ಮ ಚಿತ್ರಜೀವನದ ನಿಜವಾದ ಪೋಷಕ ಯಾರು?
- ನಿರ್ಮಾಪಕ.
3. ನಿಜಜೀವನದಲ್ಲೂ ನಿಮಗೆ 'ನಾಗವಲ್ಲಿ' ಎದುರಾದರೆ ಏನು ಮಾಡುತ್ತೀರಿ?
- 'ರಾಮಚಂದ್ರ ಆಚಾರ್ಯರ ಜ್ಯೋತಿಷ್ಯ' ಎಂದು ಟಿ.ವಿ.ನಲ್ಲಿ ಹೊಸ ಕಾರ್ಯಕ್ರಮ ಶುರು ಹಚ್ಕೊಂಡ್ಬಿಡ್ತೀನಿ.