ನನ್ನ ಹಾಸ್ಟೆಲ್ ಫ್ರೆಂಡ್ಸ್ ಚೆನ್ನಾಗಿ ಮಾತಾಡ್ತಾರೆ. ಆದರೆ ನನಗೆ ಬೇಕಾಗಿರೋ ಫ್ರೆಂಡ್ಸ್ ಯಾರೂ ಚೆನ್ನಾಗಿ ಮಾತ ನಾಡೋದೇ ಇಲ್ಲ. ನಾನು ಕೆಲಸ ಮಾಡೋ ಕಡೇನೂ ಅಷ್ಟೇ ನನಗೆ ಇಷ್ಟವಾದವರು ಮಾತಾಡೋದೇ ಇಲ್ಲ. ನಾನು ಡಿಗ್ರಿ ಓದ್ತಾ ಕೆಲಸ ಮಾಡುತ್ತಿದ್ದೇನೆ. ಅವರ ಬಗ್ಗೆ ಯಾಕೆ ಯೋಚಿಸ್ಬೇಕು ಅಂತ ಅಂದುಕೊಂಡರೂ ತುಂಬಾ ನೆನಪಾಗ್ತಾರೆ. ಏನು ಮಾಡಲಿ?
- ಸುನೀತಾ, ಶಂಕರಘಟ್ಟ
ಆಫೀಸಿನ ಕೆಲಸ, ಓದುವುದರ ಮಧ್ಯೆ ನಿಮಗೆ ಮಾತನಾಡಲು ಸಮಯ ಹೇಗೆ ಸಿಗುತ್ತದೆ? ಮಾತನಾಡದಿರುವುದೇ ಒಳ್ಳೆಯದು. ಮೊದಲು ಓದಿನ ಕಡೆ ಗಮನ ಕೊಡಿ. ಮಾತನಾಡದವರ ಬಗ್ಗೆ ತಲೆಕೆಡಿಸಿಕೊಂಡು ಓದನ್ನು ಹಾಳುಮಾಡಿಕೊಳ್ಳಬೇಡಿ. ಮಾತು ಯಾವಾಗಲೂ ಹಿತಮಿತವಾಗಿದ್ದರೇ ಚೆನ್ನ. 'ಮಾತು ಬೆಳ್ಳಿ, ಮೌನ ಬಂಗಾರ' ಕೇಳಿಲ್ಲವಾ?
ಡಾ. ಸ್ಯಾಟಲೈಟ್
anekaby2@gmail.com
ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...