ಅವಕಾಶ ವಂಚಿತ, ಅನಾಥ, ಪೋಷಣೆ ವಂಚಿತ ಮಕ್ಕಳಿಗೆ ಊಟ, ವಸತಿ, ವಿದ್ಯಾಭ್ಯಾಸ, ಆರೋಗ್ಯ ಹಾಗೂ ಸಂಸ್ಕಾರಗಳನ್ನು ನೀಡುವ ಉದ್ದೇಶದಿಂದ ಹಿಂದೂ ಸೇವಾ ಪ್ರತಿಷ್ಠಾನ ಮೈಸೂರಿನಲ್ಲೂ 'ಅಜಿತ ನೆಲೆ' ಕೇಂದ್ರವನ್ನು 2007ರಲ್ಲಿ ಆರಂಭಿಸಿತ್ತು.
ಪ್ರತಿಷ್ಠಾನ ದಾನಿಗಳೊಬ್ಬರು ನೀಡಿರುವ ನಿವೇಶನದಲ್ಲಿ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡಿದೆ. ಅದರ ಉದ್ಘಾಟನಾ ಸಮಾರಂಭವನ್ನು 17, ಫೆಬ್ರವರಿ 2013ರಂದು ಹಮ್ಮಿಕೊಳ್ಳಲಾಗಿದೆ. ಕಟ್ಟಡದ ನಿಧಿಗಾಗಿ 'ಎಚ್.ಎಸ್.ಪಿ. ಅಜಿತ ನೆಲೆ' ಹೆಸರಿನಲ್ಲಿ ಚೆಕ್ ಅಥವಾ ಡಿ.ಡಿ.ಯನ್ನು ಸ್ವೀಕರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ -9845331559, 9880718568 ಸಂಪರ್ಕಿಸಬಹುದು. ದಿನಾಂಕ: 17.02.2013. ಸ್ಥಳ: 'ಅಜಿತ ನೆಲೆ', 116, 2ನೇ ಕ್ರಾಸ್, ಬೋಗಾದಿ 2ನೇ ಹಂತ, ಮೈಸೂರು (ಮಾತಾ ಅಮೃತಾನಂದಮಯಿ ಶಾಲೆಯ ಹತ್ತಿರ) ಸಮಯ: 17 ಭಾನುವಾರ ಬೆಳಗ್ಗೆ 9.00ಕ್ಕೆ ಗೃಹಪ್ರವೇಶ.
ಚರಕ ಉತ್ಸವ
ಪ್ರಸನ್ನ ಅವರ ಚಿಂತನೆಯ ಮೂಸೆಯಲ್ಲಿ ಆರಂಭಗೊಂಡ ಚರಕ ಸಂಸ್ಥೆ ಇಂದು ನೂರಾರು ಮಹಿಳೆಯರ ಸ್ವಾವಲಂಬಿ ಬದುಕಿಗೆ ಆಸರೆಯಾಗಿದೆ. ಪರಿಸರಸ್ನೇಹಿ, ಅಪ್ಪಟ ದೇಸಿ ಉಡುಪುಗಳು ಜನರ ಗಮನ ಸೆಳೆಯುವಲ್ಲಿ ಸಫಲವಾಗಿವೆ. ಪ್ರತಿವರ್ಷದಂತೆ ಈ ವರ್ಷದ ಚರಕ ಉತ್ಸವ ಫೆಬ್ರವರಿ 15ರಿಂದ 17ರವರೆಗೆ ನಡೆಯಲಿದೆ. ವರ್ಷವಿಡೀ ದುಡಿದ ಮಹಿಳೆಯರು ಉತ್ಸವದ ನೆಪದಲ್ಲಿ ಹಾಡು, ನೃತ್ಯ, ಕೋಲಾಟ, ನಾಟಕಗಳಂಥಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ವಿಶೇಷ. ಜತೆಗೆ ವಿಚಾರಗೋಷ್ಠಿ, ಸಂವಾದ, ಚರ್ಚೆಗಳೂ ನಡೆಯುತ್ತವೆ.
ದಿನಾಂಕ: ಫೆಬ್ರವರಿ 15-17, ಸ್ಥಳ: ಚರಕ ಆವರಣ, ಸಾಗರ ತಾಲೂಕು, ಹೆಗ್ಗೋಡು.