ಬೈಟುಕಾಫಿ

100ರ ಸಂಭ್ರಮದಲ್ಲಿ ಸುವರ್ಣ

ಸುವರ್ಣ ವಾಹಿನಿಯು ಕನ್ನಡ ಕಿರುತೆರೆಯಲ್ಲಿ ವಿಭಿನ್ನವಾದ ಸದಭಿರುಚಿಯ ಕಾರ್ಯಕ್ರಮಗಳನ್ನು ಪರಿಚಯಿಸಿ ಸದಾ ವಿಶಿಷ್ಟತೆಯನ್ನು ಮೆರೆದಿದೆ. ವೀಕ್ಷಕರ ಸದಭಿರುಚಿಯನ್ನಾಧರಿಸಿ ಕಾರ್ಯಕ್ರಮಗಳನ್ನು ರೂಪಿಸುವ ಉದ್ದೇಶದಿಂದ ಮನರಂಜನೆಯೊಂದಿಗೆ ಕುಟುಂಬ ಸದಸ್ಯರೆಲ್ಲ ಕುಳಿತು ನೋಡುವಂತಹ ಕಾರ್ಯಕ್ರಮಗಳನ್ನು ಹೊರತರಲು ವೀಕ್ಷಕರೊಂದಿಗೆ ನೇರ ಸಂಪರ್ಕ ಸಾಧಿಸಿ ಅವರ ಅಭಿಪ್ರಾಯ, ಆಸಕ್ತಿಗಳನ್ನು ತಿಳಿಯಲು ಹೊರಟ ವಾಹಿನಿಯ ಪ್ರಯತ್ನದ ಫಲವೇ 'ಸುವರ್ಣ ಲೇಡಿಸ್ ಕ್ಲಬ್'. ರಾಜ್ಯದಾದ್ಯಂತ ಈಗಾಗಲೇ ಏಳು ಶಾಖೆಗಳನ್ನು ಹೊಂದಿರುವ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆಂದೇ ಮೀಸಲಿಟ್ಟ ಸುವರ್ಣ ಲೇಡಿಸ್ ಕ್ಲಬ್ ಕಾರ್ಯಕ್ರಮ ಈಗ 100ರ ಸಂಭ್ರಮದಲ್ಲಿದೆ. ಈ ಸಂಭ್ರಮದ ಪ್ರತೀಕವಾಗಿ ಬೆಂಗಳೂರು ದಕ್ಷಿಣದಲ್ಲಿ ಹೊಸ 8ನೇ ಶಾಖೆಯನ್ನು ತೆರೆದಿದೆ.
'ಬೆಂಗಳೂರು ದಕ್ಷಿಣದ ಸುವರ್ಣ ಲೇಡಿಸ್ ಕ್ಲಬ್' ಇತ್ತೀಚೆಗೆ ಉದ್ಘಾಟನೆಗೊಂಡಿದೆ. ಸುವರ್ಣ ಲೇಡಿಸ್ ಕ್ಲಬ್ ಮುಖಾಂತರ ವಾಹಿನಿ ವೀಕ್ಷಕರೊಂದಿಗೆ ನೇರ ಸಂಪರ್ಕದಲ್ಲಿದ್ದು, ಕಾರ್ಯಕ್ರಮ ರೂಪಿಸುವುದರ ಕುರಿತು ಅವರ ಅಭಿಪ್ರಾಯಗಳನ್ನು ಕಲೆಹಾಕುವುದಷ್ಟೇ ಅಲ್ಲದೆ, ಸಂಘದ ಸದಸ್ಯತ್ವ ಪಡೆದಿರುವವರಿಗೆ ಮತ್ತು ಅವರ ಕುಟುಂಬದವರಿಗೆ ಒಂದು ವೇದಿಕೆ ರೂಪಿಸಿ ಅವರಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಹೊರತೆಗೆದು, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರಶಂಸಿಸುತ್ತಿದೆ. ಅಲ್ಲದೆ ಸಂಘದ ಸದಸ್ಯರು ಚಟುವಟಿಕೆಯಿಂದಿರುವಂತೆ ಕಾರ್ಯನಿರ್ವಹಿಸುತ್ತಿದೆ. ಹೀಗೆ ಮನರಂಜನೆಯೊಂದಿಗೆ ಸಮಾಜ ಸೇವಾಕಾರ್ಯಗಳನ್ನು ಲೇಡಿಸ್ ಕ್ಲಬ್ ಮೂಲಕ ವಾಹಿನಿ ಮಾಡುತ್ತಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಯಶಸ್ವಿಯಾಗಿ ಮುಂದೆ ಸಾಗುತ್ತಿರುವ 'ಸುವರ್ಣ ಲೇಡಿಸ್ ಕ್ಲಬ್'ಗಳಂತೆ ಉದ್ಯಾನ ನಗರಿಯಲ್ಲಿ ಸ್ಥಾಪಿತವಾಗಿರುವ ಲೇಡಿಸ್ ಕ್ಲಬ್ ಕೂಡ ಯಶಸ್ವಿಯಾಗಲಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ