ಎಂಬ್ರಿಯೋಸ್ಕೋಪ್‌ನಿಂದ ಸಂತಾನಫಲ!
ಆರು ವರ್ಷಗಳ ಹಿಂದೆ ಮದುವೆಯಾದ ಲಾವಣ್ಯಳಿಗೆ ಫೆ.1 ಮರೆಯಲಾಗದ ದಿನ. ಕಾರಣ, ಅವರ ಮಡಿಲಿಗೆ ಮುದ್ದಾದ ಅವಳಿ ಮಕ್ಕಳು ಸೇರ್ಪಡೆ. ಒಂದು ಗಂಡು ಮತ್ತು ಹೆಣ್ಣು. ಸಂತಾನಭಾಗ್ಯದಿಂದ ವಂಚಿತಳಾಗಿದ್ದ ಲಾವಣ್ಯ ಪಾಲಿಗೆ ವರವಾಗಿ ಬಂದಿದ್ದು 'ಎಂಬ್ರಿಯೋಸ್ಕೋಪ್' ಎಂಬ ಆಧುನಿಕ ವೈದ್ಯ ತಂತ್ರಜ್ಞಾನ. ಮದುವೆ ನಂತರ ಮಗುವಿಗಾಗಿ ಪ್ರಯತ್ನಿಸಿದರೂ ಫಲ ಕಾಣದೆ, ಹಲವು ಚಿಕಿತ್ಸೆಗಳಿಗೆ ಒಳಪಟ್ಟರೂ ಯಾವುದೂ ಫಲಕಾರಿಯಾಗದೇ ಇದ್ದಾಗ ಎಂಬ್ರಿಯೋಸ್ಕೋಪ್ ತಂತ್ರಜ್ಞಾನ ಇವರ ದುಃಖವನ್ನು ಅರ್ಥಮಾಡಿಕೊಂಡಿತು.
ಎಲ್ಲಿ ಚಿಕಿತ್ಸೆ?
ದೇಶದ ಆರೋಗ್ಯ ಪ್ರವಾಸೋದ್ಯಮ ಗಮ್ಯತಾಣವಾಗಿ ಹೊರಹೊಮ್ಮುತ್ತಿರುವ ಬೆಂಗಳೂರಿಗೆ ಹಲವು ವಿಷಯಗಳಲ್ಲಿ ಪ್ರಥಮ ಸ್ಥಾನ ಅಲಂಕರಿಸಿದ ಹೆಮ್ಮೆಯಿದೆ. ಎಂಬ್ರಿಯೋಸ್ಕೋಪ್ ವಿಚಾರದಲ್ಲೂ ಬೆಂಗಳೂರು ಫಸ್ಟ್. ಈ ತಂತ್ರಜ್ಞಾನ ಅಳವಡಿಸಿಕೊಂಡ ದಕ್ಷಿಣ ಭಾರತದ ಮೊದಲ ನಗರಿ ಇದು. ಬಂಜೆತನ ನಿವಾರಣೆಗೆ ಹಲವು ಚಿಕಿತ್ಸಾ ವಿಧಾನ ಪರಿಚಯಿಸಿದ್ದ ಗುಣಶೀಲ ಸರ್ಜಿಕಲ್ ಮತ್ತು ಮ್ಯಾಟರ್ನಿಟಿ ಆಸ್ಪತ್ರೆಯ ಘಟಕವಾದ ಗುಣಶೀಲ ಐವಿಎಫ್ ಕೇಂದ್ರ ಈ ತಂತ್ರಜ್ಞಾನವನ್ನು ಪರಿಚಯಿಸಿದೆ. ಈ ಮೂಲಕ ಮಕ್ಕಳಿಲ್ಲದ ದಂಪತಿ ಮತ್ತು ಪದೇ ಪದೇ ಐವಿಎಫ್ ಚಿಕಿತ್ಸೆ ವಿಫಲಗೊಂಡು ಮಕ್ಕಳ ಆಸೆಯನ್ನೇ ಕೈಬಿಟ್ಟ ಲಕ್ಷಾಂತರ ದಂಪತಿಗೆ ಹೊಸ ಭರವಸೆ ಮೂಡಿಸಿದೆ.
ಅನುಕೂಲಗಳೇನು?
ಭ್ರೂಣದ ವಿವರಗಳ ದಾಖಲೆ, ಅದರ ನೈಜ ಸ್ಥಿತಿ ಹಾಗೂ ಬೆಳವಣಿಗೆಯ ಪ್ರಕ್ರಿಯೆಗಳು ನಿಖರವಾಗಿ ಗೊತ್ತಾದರೆ ತಜ್ಞರು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ. ಭ್ರೂಣಗಳನ್ನು ಶಾಖಸಂಪುಟದಲ್ಲಿರುವ (ಇನ್‌ಕ್ಯೂಬ್ಯೂಟರ್) ಗರಿಷ್ಠ ಅನಿಲ ಹಾಗೂ ತಾಪಮಾನ ಸ್ಥಿತಿಗಳಿಂದ ಹೊರತೆಗೆಯಬೇಕಾದ ಅಗತ್ಯವಿಲ್ಲದಿರುವುದರಿಂದ ಭ್ರೂಣದ ಮೇಲೆ ಹೊರಗಿನ ಒತ್ತಡ ಬೀಳುವುದಿಲ್ಲ. ಭ್ರೂಣದ ಆರೋಗ್ಯಕರವಾಗಿರುವುದಲ್ಲದೆ, ಗರ್ಭದಾರಣೆ ಪ್ರಮಾಣ ಹೆಚ್ಚುತ್ತದೆ. ಐ.ವಿ.ಎಫ್. ವಿಧಾನದ ಯಶಸ್ಸಿನ ಪ್ರಮಾಣ ಈ ತಂತ್ರಜ್ಞಾನದ ಸಹಾಯದಿಂದ ಶೇ.8ರಿಂದ 12ರಷ್ಟು ಏರಿಕೆ ಇರುವುದಾಗಿ ಕಂಡುಬಂದಿದೆ.
ಏನಿದು ಚಿಕಿತ್ಸೆ?
ಎಂಬ್ರಿಯೋಸ್ಕೋಪ್, ಟೈಮ್ ಲ್ಯಾಪ್ಸ್ ವ್ಯವಸ್ಥೆ ಇರುವಂಥ ಅತ್ಯಾಧುನಿಕ ಇನ್‌ಕ್ಯೂಬೇಟರ್ (ಶಾಖಸಂಪುಟ) ಸಾಧನ. ಈ ಸಾಧನದಿಂದಾಗಿ ಇನ್- ಮಿಟ್ರೋ ಫರ್ಟಿಲೈಸೇಷನ್ ಆದ ಸಮಯದಿಂದ ಅದನ್ನು ಗರ್ಭಕೋಶಕ್ಕೆ ವರ್ಗಾಯಿಸುವವರೆಗೂ ಭ್ರೂಣವನ್ನು ಕ್ಷಣ ಕ್ಷಣಕ್ಕೂ ಗಮನಿಸಬಹುದು. ಇದು ಸದ್ಯಕ್ಕೆ ಭ್ರೂಣಶಾಸ್ತ್ರದ ಪ್ರಯೋಗಾಲಯಗಳಲ್ಲಿ ಬಳಸುವಂಥ ಸಾಂಪ್ರದಾಯಿಕ ಶಾಖಸಂಪುಟವನ್ನಾಧರಿಸಿದೆ. ಆದರೆ, ಇದರಲ್ಲಿ ಒಂದು ಚಿತ್ರ ಸೆರೆಹಿಡಿಯುವ ವ್ಯವಸ್ಥೆಯಿದ್ದು, ಪ್ರತಿ ಭ್ರೂಣದ ಬಗ್ಗೆಯೂ ಅಗಾಧ ಮಾಹಿತಿ ಪಡೆಯಲು ಸಾಧ್ಯವಿದೆ. ಭ್ರೂಣಗಳ ಸಾಮರ್ಥ್ಯ ತಿಳಿಸುವ ಪ್ರಬುದ್ಧ ತಂತ್ರ ಇದಾಗಿದ್ದು, ಉತ್ತಮ ಭ್ರೂಣಗಳ ಆಯ್ಕೆ ಮಾಡಲು ವೈದ್ಯರಿಗೆ ನೆರವಾಗುತ್ತದೆ.
ಮಾಹಿತಿಗೆ: ಗುಣಶೀಲ ಆಸ್ಪತ್ರೆ, ಮಹದೇವ್ ರಾವ್ ರಸ್ತೆ, ಬಸವನಗುಡಿ, 080-41312600, 26673585.
ಆಶಾಕಿರಣ
ಐವಿಎಫ್ ಚಿಕಿತ್ಸೆ ಹೊಚ್ಚ ಹೊಸ ವಿಧಾನ. ಪ್ರಪಂಚದಾದ್ಯಂತ ಕೇವಲ 18 ದೇಶಗಳಲ್ಲಿ ಈ ಸೌಲಭ್ಯವಿದೆ. ಯೂರೋಪ್ ಮತ್ತು ಅಮೆರಿಕ ದೇಶಗಳಲ್ಲಿ ಇದನ್ನು ಸಾರ್ವಜನಿಕ ಬಳಕೆಗೆ ಅನುಮತಿ ನೀಡಲಾಗಿದೆ. ಸಾವಿರಾರು ಆರೋಗ್ಯವಂತ ಶಿಶುಗಳ ಜನ್ಮಕ್ಕೆ ಈ ವಿಧಾನ ಕಾರಣವಾಗಿದೆ. ಬಂಜೆತನ ನಿವಾರಣೆಗೆ ಅತ್ಯಾಧುನಿಕ ತಂತ್ರಗಳನ್ನು ಬಳಸುವ ಆಯ್ದ ಜಾಗತಿಕ ಐವಿಎಫ್ ಚಿಕಿತ್ಸಾಲಯಗಳ ಪಟ್ಟಿಯನ್ನು ಸೇರಲು ನಮಗೆ ಹೆಮ್ಮೆಯಾಗುತ್ತಿದೆ. ಪದೇ ಪದೇ ಐವಿಎಫ್ ಚಿಕಿತ್ಸೆ ವಿಫಲಗೊಂಡವರು, ಮಕ್ಕಳಾಗದೇ ಕೊರಗುತ್ತಿರುವ ದಂಪತಿಗೆ ಇದು ಆಶಾಕಿರಣ.
- ಡಾ. ದೇವಿಕಾ ಗುಣಶೀಲ
- ಭಾಗ್ಯಗೌಡ