ಓದು ಮುಗಿದು ಆಗಲೇ ಎರಡು
ವರ್ಷ ಕಳೆದಿದೆ. ಬಿ.ಕಾಂ.
ಮಾಡಿದ್ದೇನೆ. ಕೆಲಸಕ್ಕಾಗಿ ಅರ್ಜಿ
ಹಾಕದ ಸರ್ಕಾರಿ ಕಚೇರಿಗಳಿಲ್ಲ. ಆದರೆ
ಇದುವರೆಗೂ ಕೆಲಸ ಸಿಕ್ಕಿಲ್ಲ. ಅದೇ
ಯೋಚನೆಯಾಗಿದೆ. ಮುಂದೇನು
ಮಾಡುವುದು?
- ಧೀರೇಂದ್ರ ನಾಯಕ್, ಹಾಸನ
ಸರ್ಕಾರಿ ಕೆಲಸವನ್ನೇ ಏಕೆ
ಹುಡುಕುತ್ತೀರಿ? ಸರ್ಕಾರೇತರ ಸಂಸ್ಥೆಗಳಲ್ಲಿ ಬಿ.ಕಾಂ.
ಓದಿರುವವರಿಗೆ ಸದ್ಯ ಪರಿಸ್ಥಿತಿಯಲ್ಲಿ ಅಪಾರ ಅವಕಾಶಗಳಿವೆ.
ಕೇವಲ ಸರ್ಕಾರಿ ನೌಕರಿ ನ್ಚೆಕೊಂಡರೆ ನೀವು ಇನ್ನೂ ಹಲವಾರು
ವರ್ಷಗಳ ಕಾಲ ನಿರುದ್ಯೋಗಿಯಾಗಿಯೇ ಇರಬೇಕಾಗುತ್ತದೆ.
ತಡಮಾಡದೆ ಖಾಸಗಿ ಸಂಸ್ಥೆಗಳಲ್ಲಿ ಸಿಗುವ ಅವಕಾಶಗಳನ್ನು
ಉಪಯೋಗಿಸಿಕೊಳ್ಳಿ. ನೆಮ್ಮದಿಯಿಂದ ಜೀವನ ನಡೆಸಿ.
ಡಾ. ಸ್ಯಾಟಲೈಟ್
anekaby2@gmail.com
ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...