1945.
ಕವಿ, ಚಿತ್ರಕಥೆಗಾರ.
ಮೂಲ ಗ್ವಾಲಿಯರ್.
-'ದಿಲ್‌ಜಾಲೆ', 'ಮಿಸ್ಟರ್ ಇಂಡಿಯಾ', 'ಸ್ವದೇಶ್, 'ಜೋಧಾ ಅಕ್ಬರ್' ಮುಂತಾದ ಚಿತ್ರಗಳಿಗೆ ಗೀತೆ ರಚನೆ ಮಾಡಿದ್ದಾರೆ.
-ಪದ್ಮಶ್ರೀ ಪುರಸ್ಕೃತ.
---
ಪುಣ್ಯತಿಥಿ
ಜ್ಯೋತಿ ಬಸು
1914-2010.
ಹೆಸರಾಂತ ಕಮ್ಯುನಿಸ್ಟ್ ನಾಯಕ.
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ.
23 ವರ್ಷ ಸುದೀರ್ಘ ಮುಖ್ಯಮಂತ್ರಿಯಾಗಿ ದಾಖಲೆ ಬರೆದವರು.
---
ದಿನಚರಿತೆ
1904- ಆ್ಯಂಟನ್ ಚೆಕಾವ್‌ನ ಕೊನೆಯ ನಾಟಕ 'ದಿ ಚೆರ್ರಿ ಆರ್ಕರ್ಡ್' ಪ್ರದರ್ಶನ.
1964- ಅಮೆರಿಕದ ಪ್ರಥಮ ಮಹಿಳೆ ಮಿಶೆಲ್ ಒಬಾಮಾ ಹುಟ್ಟಿದ್ದು.
1982- ಕೋಲ್ಡ್ ಸಂಡೆ; 100 ವರ್ಷದ ಬಳಿಕ ತೀವ್ರ ಚಳಿಗೆ ನಲುಗಿದ ಅಮೆರಿಕ.
---
ಟ್ವೀಟ್‌ಸ್ಟಾಲ್
ನೀವು ಅಲೆಗಳನ್ನು ತಡೆಯುವ ಅಗತ್ಯವಿಲ್ಲ. ದೋಣಿ ಓಡಿಸಲು ಕಲಿತರೆ ಸಾಕಷ್ಟೇ.
- ಚಿತ್ರಾಂಗದಾ ಸಿಂಗ್
---
ಮಳೆಹನಿ
ಪ್ರೀತಿ- ಭೀತಿ
ಅವಳು ಆಗಾಗ್ಗೆ
ಪ್ರೀತಿಯಿಂದ
ಹೊಡೆಯುತ್ತಾಳೆ
ಪ್ರೀತಿಯಿಂದ;
ಪ್ರೀತಿ ಜಾಸ್ತಿಯಾದರೆ
ಅಂವ ಓಡುತ್ತಾನೆ
ಭೀತಿಯಿಂದ!
-ಪರೇಶ ಸರಾಫ
---
ನುಲಿ ನಲಿ
ನಾಲಿಗೆ ನುಲಿ
ನಮ್ಮ-ನಿಮ್ಮ ನಾಲಿಗೆಗಳು ನುಲಿದು, ನುಡಿದು, ನಮ್ಮ ನಾಡಿನ ನಾಳೆಗಳಿಗೆ ನಲಿವು ನೀಡಲು ನಿತ್ಯ ನೂತನ ನಾಲಿಗೆ ನುಲಿಗಳು!
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಒಂದು, ಮೂರನೇ ಅಕ್ಷರ ಸೇರಿದರೆ ಕೂಡಲು
ಕಷ್ಟ ಕೂಡುವ ಊತ, ಎರಡೂ, ಮೂರು
ಸೇರಿದರೆ ರಮಾ ತಿರುವು-ಮುರುವು, ಮೂರೂ
ಒಟ್ಟಿಗೆ- ಪುಟ್ಟ ಹುಡುಗ -
ಇದು ಅಪಾಯಕಾರಿ, ಪ್ರಾಣಾಂತಿಕ ಎನ್ನುವ ಪದ -
ಮೊತ್ತ, ಬೆಲೆ ಎನ್ನುವುದಕ್ಕೆ ಹಿಂದೆ ಬಳಕೆಯಲ್ಲಿದ್ದ
ಪದ, ಇದರ ಮೊದಲೆರಡು ಪದಗಳು ತಿರುವು-
ಮುರುವು ಆದರೆ ಕೈ -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಪರಮೇಶ್ವರ, ನಟರಾಜ, ಮಹೇಶ್ವರನ ಈ ಕಪ್ಪು
ಪ್ರತಿಮೆಗೆ ಎಲ್ಲೂ ಒಂದೇ ಹೆಸರು -
'ಕಾಡಿ'ನಲ್ಲಿ ಸಿಗುವ 'ಗೋಣಿ'ತಾಟಿನ ಬಟ್ಟೆ -
ಒಂದನೇ ಸೂಚನೆಯಲ್ಲಿ ಹೇಳಿದ ಪ್ರತಿಮೆಯ
ಪವಿತ್ರ ತೀರ್ಥ -
ಕಲ್ಲನ್ನು ಗಲ್ಲಿಗೆ ಹಾಕಿದರೆ ಸಿಗುವುದು ಖನಿಜ
ನಿಕ್ಷೇಪದ ಕಲ್ಲು -
ಗತಪ್ರತ್ಯಾಗತ
ಸವಾರಿವಾಸ ರಾಜಕಾರಣಿ, ತನ್ನ ಮಗನಿಗೆ ನಿಗಮದ ಅಧ್ಯಕ್ಷಗಿರಿಗೆ ಮತ ನೀಡಿರಿ, ಎಂದು ಕೈಮುಗಿದು ಕೇಳಿದಾಗ, ಮತದಾರರು ಅವರಿಗೆ ನೀಡುವ ಮರು ಆಶ್ವಾಸನೆ!
'ತಮಗೇಮತ'
ನಿನ್ನೆಯ ಉತ್ತರಗಳು:
3 ಅಕ್ಷರ: ಗಗನ, ಗರುಡ, ನಡತೆ
4 ಅಕ್ಷರ: ಸಾಹುಕಾರ, ಹುರಿಕಟ್ಟು, ಕಾಕರಾಗ, ರಟ್ಟುಗಳು
-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141
---
ಲೆಕ್ಕ ರಾಜ ರಾಣಿ
1 ವಿಶ್ವದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ (1893)ಮೊದಲ ದೇಶ ನ್ಯೂಜಿಲೆಂಡ್.
50 ದೇಶಗಳು (ಪ್ರಪಂಚದಲ್ಲಿ) ಸೇಬುಹಣ್ಣನ್ನು ಬೆಳೆಯುತ್ತವೆ.
115 ಮ್ಯಾಗಜಿನ್‌ಗಳು ಅಮೆರಿಕದಲ್ಲಿ ಮಕ್ಕಳಿಗಾಗಿ ಹಾಗೂ ಹದಿ ಹರೆಯದವರಿಗಾಗಿಯೇ ಇವೆ.
1632 ವಿವಿಧ ಪಕ್ಷಿ ಪ್ರಭೇದಗಳು ಇಂಡೋನೇಶಿಯಾದಲ್ಲಿವೆ.
---
ಮಾಹಿತಿ.ಕಾಂ
ಆಟ
ಪಶ್ಚಿಮ ಆಫ್ರಿಕಾದ ಮಾತ್ಯಾನಿ ಗುಡ್ಡಗಾಡು ಜನಾಂಗದವರು ಆಡುತ್ತಿದ್ದ ಫುಟ್ಬಾಲ್ ವಿಶಿಷ್ಟವಾದುದು. ಅವರು ಆಟಕ್ಕೆ ಬಳಸುತ್ತಿದ್ದುದು ರಬ್ಬರ್ ಚೆಂಡಲ್ಲ, ಮನುಷ್ಯರ ತಲೆಬುರುಡೆ!
ಮುಷ್ಠಿಕಾಳಗದ ಸ್ಪರ್ಧೆಯೊಂದರಲ್ಲಿ ಮೈಕ್ ಟೈಸನ್ ವಿಶ್ವಚಾಂಪಿಯನ್ ಹೋಲ್‌ಫೀಲ್ಡರ್‌ನ ಕಿವಿಯನ್ನೇ ಕತ್ತ ರಿಸಿಹಾಕಿದ್ದ. ಅದಕ್ಕಾಗಿ ಟೈಸನ್ ನಿಷೇಧಕ್ಕೊಳಗಾಗಿದ್ದ.
ಅಡಿಲೇಡ್‌ನಲ್ಲೊಮ್ಮೆ ಕ್ರಿಕೆಟ್ ಆಟವನ್ನು 2 ಮಿಲಿಯನ್ ಗ್ಯಾಲನ್ ಸಾಮರ್ಥ್ಯದ ತೈಲ ಟ್ಯಾಂಕ್ ವೊಂದರ ಮೇಲೆ 1940ರಲ್ಲಿ ಆಡಲಾಯಿತಂತೆ!
ಓಲಂಪಿಕ್ ಪಂದ್ಯಾಟಗಳ ವಿವಿಧ ಸ್ಪರ್ಧೆಗಳಲ್ಲಿ ಗೆದ್ದ ಆಟಗಾರರಿಗೆ ಮೆಡಲ್‌ಗಳನ್ನು ಕೊಡಲಾಗುತ್ತದೆ. ಆದರೆ ಪ್ರಾಚೀನ ಗ್ರೀಸ್‌ನಲ್ಲಿ ಆಲಿವ್ ಮರದ ಟೊಂಗೆ ಮತ್ತು ಹೂ ಗುಚ್ಛ ಕೊಡುತ್ತಿದ್ದರು.