ಇದು ಎಷ್ಟೇ ಆಧುನಿಕವಾಗಿದ್ದರೂ ನೆಲದ ಮೇಲೆ ಚಲಿಸದು.
- ರಮೇಶ ಶೆಟ್ಟಿ, ಸೂರ್ಯದೇವಸ್ಥಾನ
ಇದು ತೂತಾದರೆ ಜೀವದ ಕಥೆಯೂ ಮುಗಿದಂತೆ.
- ಎಂ. ಕರಣ್, ಬೆಂಗಳೂರು
ಅಂಬಿಗನನ್ನು ನಂಬಲು ಇರುವ ಸಾಧನ.
- ಸ್ವಾತಿ ಪೈ, ಕಾರವಾರ
ಟೀಂ ಇಂಡಿಯಾಕ್ಕೆ ಧೋನಿ ಬಂದ ಮೇಲೆ, 'ದೋಣಿ' ಪದವನ್ನೇ ಮರೆತೆವು!
- ಕರುಣಾಕರ, ಮೈಸೂರು
ಮೀನನ್ನು ಅನುಕರಿಸಿದ, ಒಡಲಲ್ಲಿ ಮುಳ್ಳೇನೂ ಇಟ್ಟುಕೊಳ್ಳದ ವಾಹನ.
- ಮಧುರ ಕುಮಾರ್, ಬೆಳಗಾವಿ