ನಾನು ಬೆಳೆದ ಹುಡುಗಿ. ನೋಡಲು ಸುಂದರ ಇದ್ದೇನೆ. ನನಗೀಗ ಸೌಂದರ್ಯವೇ ದೊಡ್ಡ ಸಮಸ್ಯೆಯಾಗಿದೆ. ನನ್ನ ತಮ್ಮ ನನ್ನನ್ನು ವಿಚಿತ್ರ ದೃಷ್ಟಿಯಲ್ಲಿ ನೋಡುತ್ತಾನೆ. ಬಗ್ಗಿದರೆ ಸಾಕು ಏನೋ ಕಾಣಲು ಇಣುಕುತ್ತಾನೆ. ಮೊದಲೇ ದೇಶದೆಲ್ಲೆಡೆ ಹೆಣ್ಮಕ್ಕಳು ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ನನಗೆ ಅದೇ ಆತಂಕ ಕಾಡುತ್ತಿದೆ. ಏನು ಮಾಡಲಿ?
- ಊರು ಬೇಡ, ಹೆಸರು ಬೇಡ
ಮನೇಲಿ ಅಪ್ಪ- ಅಮ್ಮ ಇದ್ದಾಗ ಅವನೆದುರು ಬೇಕಂತಲೇ ಬಗ್ಗು. ಎಂದಿನಂತೆ ಇಣುಕಿದಾಗ ಸರಿಯಾಗಿ ಕೆನ್ನೆಗೆ ಬಾರಿಸು. ಅಪ್ಪ-ಅಮ್ಮನೆದುರೇ ಅವನ ಮರ್ಯಾದೆ ಹೋಗಲಿ. ವಯಸ್ಸು ಆತನಿಗೆ ಇಂಥ ದೃಷ್ಟಿ ಕೊಟ್ಟಿದೆ. ತಿದ್ದಿದರೆ ಸರಿಹೋಗುತ್ತಾನೆ. ಆಗ ಅಪ್ಪ-ಅಮ್ಮನೇ ಬುದ್ಧಿ ಹೇಳುತ್ತಾರೆ. ದೇಶದಲ್ಲಿ ಈ ಸ್ಥಿತಿ ಇದೆ ಅಂತ ಹೋಲಿಕೆ ಮಾಡುವ ಅಗತ್ಯವಿಲ್ಲ.
ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...
-ಡಾ. ಸ್ಯಾಟಲೈಟ್
anekaby2@gmail.com