ಬೈಟುಕಾಫಿ

ಭೀಮ ಭಕ್ತಿ

ಹಿಂದೂಸ್ತಾನಿ ಸಂಗೀತದ ದಂತಕಥೆ ಪಂಡಿತ ಭೀಮಸೇನ ಜೋಶಿ ನಮ್ಮನ್ನು ಅಗಲಿ ಇಂದಿಗೆ ಎರಡು ವರ್ಷ. ಅವರು ಹಾಡಿದ ಭಜನೆಗಳು ಮಾತ್ರ ಮನೆಮನೆಯಲ್ಲೂ ಅನುರಣಿಸುತ್ತಿವೆ...

'ಹಾಡುಗಾರ ಎಂದರೆ ಅಬ್ದುಲ್ ಕರೀಂ ಖಾನ್. ಅವರಂತೆ ಹಾಡಿದರೆ ಮಾತ್ರ ಗಾಯಕನ ಬದುಕು ಸಾರ್ಥಕ' ಪಂಡಿತ ಭೀಮಸೇನ ಜೋಶಿ ಯಾವತ್ತೂ ಹೇಳುತ್ತಿದ್ದ ಮಾತು ಇದು. ಜೋಶಿಯವರು ತನ್ನನ್ನು ಹಿಂದೂಸ್ತಾನಿ ಶಾಸ್ತ್ರೀಯ ಗಾಯನಕ್ಕೆ ಸಮರ್ಪಿಸಿಕೊಳ್ಳುವ ಸಂಕಲ್ಪ ಮಾಡಿದ್ದೇ ಖಾನ್ ಸಾಹೇಬರ ಹಾಡು ಕೇಳಿ. ಅದಿನ್ನೂ ಜೋಶಿಯವರ ಯೌವ್ವನದ ದಿನಗಳು. ಸಂಗೀತಗಾರನಾಗುವ ಹಠದಿಂದ ಧಾರವಾಡ ಬಿಟ್ಟಾಗಿತ್ತು. ಅವಕಾಶಕ್ಕಾಗಿ ಪರಿತಪಿಸುತ್ತಿದ್ದ ಸಂದರ್ಭ. ಅಂಥ ಸನ್ನಿವೇಶದಲ್ಲೇ ಖಾನ್‌ರ 'ಪಿಯಾ ಮಿಲನ್ ಕಿ ಆಸ್‌',  'ಪಿಯಾ ಬಿನ್ ನಹೀ' ಠುಮ್ರಿಗಳ ರೆಕಾರ್ಡಿಂಗ್ ಕೇಳುವ ಭಾಗ್ಯ. ಖಾನರ ಗಾಯನದಲ್ಲಿ ಎಂತಹ ಮೋಡಿ ಇತ್ತು ಎಂದರೆ, 'ಹಿಂದೂಸ್ತಾನಿ ಹೊರತಾಗಿ ನನ್ನ ಬದುಕಿಲ್ಲ' ಎಂದು ಜೋಶಿ ಅಂದೇ ತೀರ್ಮಾನಿಸಿದರು.
.......
ಸ್ನೇಹಕ್ಕೆ ಜೋಶಿಯವರು ನೀಡುತ್ತಿದ್ದ ಗೌರವ ಅಸಾಮಾನ್ಯವಾದದ್ದು. ಒಮ್ಮೆ ಸರೋದ್ ವಾದಕ ಅಮ್ಜದ್ ಅಲಿ ಖಾನ್ ಮನೆಗೆ ಹೋಗಿದ್ದರು (ಅದೀಗ 'ಸರೋದ್ ಘರ್‌'- ಉಸ್ತಾದ್ ಹಫೀಜ್ ಅಲಿ ಖಾನ್ ಸ್ಮಾರಕ ಮ್ಯೂಸಿಯಂ. ಹಫೀಜರೂ ಇವರ ಗುರುಗಳೇ.) ಆವತ್ತೇ ಅಮ್ಜದ್ ಅವರ ಹುಟ್ಟುಹಬ್ಬವಾಗಿತ್ತು. ಅವರ ಪತ್ನಿಗೆ ಜೋಶಿಯವರ ಹಾಡು ಕೇಳುವ ಆಸೆಯಾಯಿತು. ಭೀಮಣ್ಣ ಇಲ್ಲ ಎನ್ನಲೇ ಇಲ್ಲ. ಹಾಡಲು ಶುರುವಿಟ್ಟುಕೊಂಡರು. ಹಾಡಿದರು, ಹಾಡಿದರು, ಹಾಡಿದರು... ಬರೋಬ್ಬರಿ ಮೂರು ತಾಸು. 'ಅಂಥ ಬೆಲೆ ಬಾಳುವ ಉಡುಗೊರೆಯನ್ನು ನಿರೀಕ್ಷಿಸಿರಲಿಲ್ಲ. ಆ ಕ್ಷಣಗಳನ್ನು ಜೀವಮಾನದಲ್ಲಿ ಮರೆಯಲಾರೆ' ಎಂದು ಹೇಳಿಕೊಂಡಿದ್ದಾರೆ ಅಮ್ಜದ್ ಖಾನ್.
.......
ಭೀಮಸೇನ್ ಜೋಶಿ ಗಾಯನದ ತಾಕತ್ತೇ ಅದು. ಕಿರಾಣಾ ಘರಾಣಾ ಗಾಯಕಿ ಶೈಲಿ ಅವರದ್ದು. ಆದರೆ ಎಲ್ಲ ಘರಾಣಾಗಳ ಸವಿಯನ್ನೂ ಪ್ರೇಕ್ಷಕರಿಗೆ ಉಣಬಡಿಸುತ್ತಿದ್ದರು. ಗ್ವಾಲಿಯರ್‌ನಲ್ಲಿ ಶುರುಮಾಡಿ, ಅತ್ರೋಲಿ-ಜೈಪುರದಲ್ಲಿ ಸಂಚರಿಸಿ, ಮತ್ತೆ ಪಾಟಿಯಾಲಾದಲ್ಲಿ ಮುಳುಗೆದ್ದು, ಮರುಕ್ಷಣ ಮತ್ತೆ ಅತ್ರೋಲಿ-ಜೈಪುರಕ್ಕೆ ಮರಳುತ್ತಿದ್ದರು. ರಾಗಗಳ ವಿಚಾರದಲ್ಲೂ ಅದೇ ಪಾಂಡಿತ್ಯ. ರಾಗ ಮಾರ್ವಾ ಮತ್ತು ರಾಗ ಪೂರಿಯಾಗಳು ಹೆಚ್ಚೂಕಡಿಮೆ ಒಂದೇ ರೀತಿ. ಸಂಗೀತದ 'ನೋಟ್‌'ಗಳೂ ಒಂದೇ. ಎರಡೂ ರಾಗಗಳನ್ನು ಬೇರ್ಪಡಿಸುವುದು ಅನುಭವಿ ಗಾಯಕರಿಗೂ ತುಸು ಕಷ್ಟವೇ. ಜೋಶಿಯವರು ಅದರಲ್ಲಿ ಯಶ ಕಂಡಿದ್ದರು.
ಅದಕ್ಕೇ ಅಲ್ಲವೆ ಅವರನ್ನು 'ಹಿಂದೂಸ್ತಾನಿಯ ದಂತಕಥೆ' ಎನ್ನುವುದು! <

- ರಾಜೇಶ ಮುಂಡಿಗೇಸರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ.. ನಿಮ್ಮನ್ನು ಈ ರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ': Kichcha Sudeepಗೆ ಪತ್ರ