1. ನೀವು ಚಿತ್ರರಂಗ ಪ್ರವೇಶಿಸಲು ಮಾಡಿದ್ದೇನು?
- 'ಗೆಜ್ಜೆಪೂಜೆ'!
2. ನೂರಾರು ಚಿತ್ರಗಳಲ್ಲಿ ನಾಯಕಿಯಾಗಿ ಮೆರೆದ ನೀವೀಗ ಚಿತ್ರರಂಗದಿಂದ ಮರೆಯಾಗಿರುವುದೇಕೆ?
- ತೆರೆಮೇಲಿದ್ದರೂ, ತೆರೆ ಮರೆಯಲ್ಲಿದ್ದರೂ ನಾನೆಂದಿಗೂ 'ರಂಗನಾಯಕಿ'ಯೇ!
3. ಪ್ರತಿಯೊಬ್ಬರಿಗೂ ಒಂದೊಂದು ಸಂದರ್ಭದಲ್ಲಿ ಒಂದೊಂದು ಹಾಡು ನೆನಪಾಗುವುದು ಸಹಜ. ನಿಮಗೆ ಆ ಥರ ಏನಾದರೂ...?
- ವಿದೇಶದಿಂದ ವಿಮಾನದಲ್ಲಿ ಬಂದಿಳಿಯುವಾಗ, 'ಆರತಿಯೇ ಧರೆಗಿಳಿದಂತೆ' ಹಾಡು ನೆನಪಾಗುವುದುಂಟು.
(ಕಾಲ್ಪನಿಕ)