ಬೈಟುಕಾಫಿ

ಆತ್ಮವಿಶ್ವಾಸಿಗಳಾಗಿ... (ವಿವೇಕ ವಿಚಾರ)

ಎಲ್ಲವನ್ನೂ ಹೊಂದಿ ಸೋತವರುಂಟು; ಏನೂ ಇಲ್ಲದೆ ಗೆದ್ದವರುಂಟು. ಇದಕ್ಕೆ ಕಾರಣ ಆತ್ಮವಿಶ್ವಾಸ. ಆತ್ಮವಿಶ್ವಾಸ ಮೂಡದೆ ಯಾವ ಸಾಧನೆಯೂ ಸಫಲವಾಗದು. ಆತ್ಮವಿಶ್ವಾಸ ಮೈತಾಳದೆ ಆಂತರ್ಯದ ಸದ್ಗುಣಗಳು, ಸಚ್ಛಕ್ತಿಗಳು ಕ್ರಿಯಾಶಕ್ತಿಯಾಗಿ ರೂಪುತಾಳವು.
'ಇಚ್ಛಾಶಕ್ತಿ ಎಲ್ಲಕ್ಕಿಂತ ಪ್ರಬಲ ಹಾಗೂ ಸರ್ವಶಕ್ತವಾದುದು. ಈ ಆತ್ಮವನ್ನು ಖಡ್ಗ ಕತ್ತರಿಸಲಾರದು, ಬೆಂಕಿ ಸುಡಲಾರದು, ಗಾಳಿ ಒಣಗಿಸಲಾರದು; ಅದು ಆದ್ಯಂತರಹಿತ, ಅಮರ, ನಿತ್ಯ, ಶುದ್ಧ, ಸರ್ವಶಕ್ತ, ಸರ್ವಾಂತರ್ಯಾಮಿ. ನಮಗೆ ನಮ್ಮಲ್ಲಿ ಶ್ರದ್ಧೆಯುಂಟಾಗಲಿ, ಆತ್ಮವಿಶ್ವಾಸವುಂಟಾಗಲಿ.'
'ಇಂಗ್ಲಿಷರಿಗೂ ನಿಮಗೂ ವ್ಯತ್ಯಾಸ ಇರುವುದೆಲ್ಲ? ಅವರಲ್ಲಿ ಆತ್ಮವಿಶ್ವಾಸವಿದೆ. ಅದು ಅವರೊಳಗಿನ ದೈವೀಶಕ್ತಿಯನ್ನು ವ್ಯಕ್ತಗೊಳಿಸುತ್ತದೆ. ಅವರು ತಮ್ಮಿಚ್ಛೆಯಂತೆ ಏನನ್ನಾದರೂ ಸಾಧಿಸಬಲ್ಲರು. ಆದರೆ ನೀವು ಏನನ್ನೂ ಮಾಡಲಾರಿರಿ. ವ್ಯಕ್ತಿತ್ವವೇ ಇಲ್ಲದವರಾಗುತ್ತಿದ್ದೀರಿ. ನಮಗಿಂದು ಬೇಕಾಗಿರುವುದು ಶಕ್ತಿ. ಆದ್ದರಿಂದ ಆತ್ಮವಿಶ್ವಾಸಿಗಳಾಗಿ.'
'ಮೊದಲು ನಿಮ್ಮ ನರಮಂಡಲವನ್ನು ದೃಢಪಡಿಸಿಕೊಳ್ಳಿ. ನಮಗಿಂದು ಬೇಕಾಗಿರುವುದು ಕಬ್ಬಿಣದ ಮಾಂಸಖಂಡಗಳು, ಉಕ್ಕಿನ ನರಮಂಡಲ. ನಾವಿನ್ನು ಅಳುವುದು ಸಾಕು; ನಿಮ್ಮ ಕಾಲ ಮೇಲೆ ನಿಂತು ಪುರುಷಸಿಂಹರಾಗಿ. ಅಂಥವರನ್ನು ನಿರ್ಮಿಸಬಲ್ಲ ವಿದ್ಯಾಭ್ಯಾಸ ನಮಗಿಂದು ಬೇಕಾಗಿದೆ. ನೀವು ಇನ್ನಷ್ಟು, ಮತ್ತಷ್ಟು ದುರ್ಬಲರಾಗುವುದನ್ನು, ಅಧೋಗತಿಗಿಳಿಯುವುದನ್ನು ನಾನು ಸಹಿಸಲಾರೆ. ನಿಮ್ಮನ್ನು ಸತ್ವಹೀನರನ್ನಾಗಿಸುವ ಕ್ಷುದ್ರವಾದ ರಹಸ್ಯ ವಿದ್ಯೆಗಳನ್ನು ತ್ಯಜಿಸಿರಿ.'
ಶಕ್ತಿವಂತರಾಗಿ... ಪುರುಷಸಿಂಹರಾಗಿ... ಆತ್ಮವಿಶ್ವಾಸಿಗಳಾಗಿ...
- ಆನಂದ ಎಸ್.ಎನ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್