ಡಿಸೆಂಬರ್‌ನಲ್ಲಿ ಮದ್ವೆಯಾಗಿ ಜನವರಿಯಲ್ಲಿ ಪ್ರೆಗ್ನೆಂಟ್ ಆದೋರು ಯಾರಂತ ಗೊತ್ತಾ? ವಿದ್ಯಾಬಾಲನ್!
ಮುಂಬೈನಲ್ಲಿ ಮೊನ್ನೆಯೊಂದು ಅವಾರ್ಡ್ ಫಂಕ್ಷನ್ ನಡೀತು. ಬೆಸ್ಟ್ ಆ್ಯಕ್ಟ್ರೆಸ್ ಅವಾರ್ಡ್ ಸ್ವೀಕರಿಸಲು ವಿದ್ಯಾ ವೇದಿಕೆ ಏರುವಾಗ, ಅಭಿಷೇಕ್ ಬಚ್ಚನ್ ಜತೆಗಿದ್ದ ರಿತೇಶ್ ದೇಶ್‌ಮುಖ್‌ಗೆ ಯಾಕೋ ಅನುಮಾನ ಶುರುವಾಯ್ತು. 'ಯಾಕೋ ವಿದ್ಯಾ ದಪ್ಪ ಕಾಣ್ತಿದ್ದಾಳಲ್ಲ!' ಅಂತ ಪಕ್ಕದಲ್ಲಿದ್ದ ಅಭಿಷೇಕ್‌ಗೆ ಕೇಳಿದರು. ಅಭಿಷೇಕ್ ಮುಸುಮುಸು ನಗುತ್ತಾ, 'ಹೌದು, ವಿದ್ಯಾ ಈಗ ಪ್ರೆಗ್ನೆಂಟ್' ಎಂದು ಹೇಳಿದರಂತೆ.
ನಿಜಕ್ಕೂ ವಿದ್ಯಾ ಪ್ರೆಗ್ನೆಂಟ್ ಆಗಿಲ್ಲ. ಮದುವೆ ಆದ್ಮೇಲೆ ತುಸು ದಪ್ಪಗಾಗಿದ್ದಾಳಷ್ಟೇ. ಆದರೆ, ಗಂಡ ಸಿದ್ಧಾರ್ಥ್ ತೆಳ್ಳಗಾಗಿದ್ದಾನಂತೆ!