ಸಹ್ಯಾದ್ರಿ ಸಂಘ ಬೆಂಗಳೂರು ಇದರ ಆಶ್ರಯದಲ್ಲಿ ಕಳೆದ 13 ವರ್ಷಗಳಿಂದ ಮಲೆನಾಡಿಗರಿಗಾಗಿ ಕ್ರೀಡಾಕೂಟವನ್ನು ನಡೆಸುತ್ತಾ ಬಂದಿದೆ. ಈ ಕ್ರೀಡಾಕೂಟದಲ್ಲಿ ಬೆಂಗಳೂರಿನಲ್ಲಿರುವ ಮಲೆನಾಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂಬುದು ಸಂಘದ ಆಶಯ. ಸಂಘ ಈ ವರ್ಷ ತನ್ನ 14ನೇ ವರ್ಷದ ವಾರ್ಷಿಕ ಕ್ರೀಡಾಕೂಟವನ್ನು ನಗರದ ನೃಪತುಂಗ ರಸ್ತೆಯಲ್ಲಿರುವ ವೈ.ಎಂ.ಸಿ.ಎ. ಕ್ರೀಡಾಂಗಣದಲ್ಲಿ ದಿನಾಂಕ 03.02.2013ರ ಭಾನುವಾರ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ನಡೆಸಲಿದೆ.
ಇಲಿ ಮತ್ತು ಹುಲಿ (ಸಣ್‌ಸ್ಟೋರಿ)
ಧಾನ್ಯಗಳ ಮೂಟೆ ತುಂಬಿದ್ದ ಲಾರಿಯೊಂದು ಕಾಡಿನ ದಾರಿಯಲ್ಲಿ ಹೋಗುತ್ತಿತ್ತು. ಮೂಟೆಯೊಳಗೆ ಒಂದು ಇಲಿ ಅಡಗಿ ಕುಳಿತಿತ್ತು. ಲಾರಿ ಹೋಗುವಾಗ ಇಲಿ ಹೊರಗೆ ಇಣುಕಿ ನೋಡಿತು. ಅದು ಹಿಂದೆಂದೂ ಕಾಡನ್ನು ನೋಡಿರಲಿಲ್ಲ. ಅದು ಹೇಗಿರಬಹುದು ಎಂಬ ಕುತೂಹಲ ಮೂಡಿತು. ಲಾರಿಯಿಂದ ಕೆಳಗೆ ಹಾರಿ ಮರಗಳ ನಡುವೆಓಡಿತು. ಕಾಡಿನಲ್ಲಿ ಸ್ವಲ್ಪ ದೂರ ಹೋದಾಗ ಒಂದು ಪ್ರಾಣಿ ಅದಕ್ಕೆ ಎದುರಾಯಿತು. ದೊಡ್ಡ ದೇಹ, ಮೈಮೇಲೆ ದೊಡ್ಡ ದೊಡ್ಡ ಪಟ್ಟೆಗಳು. ಅಂತಹ ಪ್ರಾಣಿಯನ್ನು ಇಲಿ ನೋಡಿಯೇ ಇರಲಿಲ್ಲ.
'ಯಾ...ಯಾರು ನೀನು?' ಎಂದು ಭಯದಿಂದ ಕೇಳಿತು ಇಲಿ.
'ನಾನು ಹುಲಿ' ಆ ಪ್ರಾಣಿ ಘರ್ಜಿಸಿತು.
'ಅಬ್ಬಾ, ಬದುಕಿದೆ! ನೀನು ಬೆಕ್ಕು ಇರಬಹುದೇನೋ ಎಂದು ಹೆದರಿಹೋಗಿದ್ದೆ' ಎನ್ನುತ್ತಾ ಇಲಿ ಸಮಾಧಾನದ ಉಸಿರು ಬಿಟ್ಟಿತು. ಕಾಡಿನಲ್ಲಿ ಓಡಿ ಮರೆಯಾಯಿತು.
-ವಿ. ಹೇಮಂತಕುಮಾರ