ಮೊಸರು-ಮಜ್ಜಿಗೆಗಳಿಗೆ ಮೊದಲು, ಮಜ್ಜಿಗೆಪಳಿದ್ಯ ಮೆದ್ದು, ಮೇಲೋಗರಕ್ಕೆ ಮಾಕಳಿಬೇರು, ಮತ್ತೆ ಮೆಂತ್ಯ-ಮೆಣಸಿಕಾಯಿ ಮಂಡಿಗೆ ಮೆದ್ದ ಮೇಲೆ, ಮೋದಕಗಳ ಮಹಾಮೋಜು!
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಇದು ಒಂದು ಸಂಪೂರ್ಣ ಅಂಶ,
'ಘ'ನವಾದದ್ದು, ಒಂದು 'ಯೂನಿಟ್' -
ನಮ್ಮ ಹಳೆಯ ಸ್ನೇಹಿತ, ಕೊಂಬು
ಉಳ್ಳ ಗಂಡು ಮೇಕೆ -
ಇದು ಬೇರೆಯವರಿಗೆ ನಾವು ತೋರುವ
ಸಹನೆ, ಪ್ರೀತಿ ಇರುವ ದಯೆ -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ದುಡ್ಡು ಬಂದು ಜೇಬಿಗೆ ಬೀಳುವುದಕ್ಕೆ
ಅಥವಾ ಆಗಮಿಸುವುದಕ್ಕೆ ಏನನ್ನೋಣ? -
ಇದು ಚೌಕವಾಗಿ ಇರುವ ಆಕಾರ,
ಒಂದಲ್ಲ ಎರಡಲ್ಲ, ಅದರ ಎರಡುಪಟ್ಟು ಮನೆ -
ಸರಿಯಾಗಿ ನೋಡು, ವೀಕ್ಷಿಸು, ಲಕ್ಷ್ಯ ಕೊಡು
ಎನ್ನುವ ಒಂದೇ ಪದ -
ಸಿಗದ ವಸ್ತುವಿಗಾಗಿ ಇಡೀ ಮನೆಯಲ್ಲಿ
ಹುಡುಕುವುದೇ ಸುಸ್ತು ಸುತ್ತು! -
ಗತಪ್ರತ್ಯಾಗತ
ಗ್ರಾಮ ಪಂಚಾಯಿತಿಯಲ್ಲಿ ಸುದ್ದಿ ಮುಟ್ಟಿಸುವ ಮಾಮೂಲಿ ತಮಟೆವಾದಕ, ರಜೆಗೆ ಹೋಗಿದ್ದ. ಡಂಗೂರ ಹಾಕಿಸಲು ತಮಟೆ ಬಾರಿಸಲು ಯಾರಾದರೂ ಗಟ್ಟಿಮುಟ್ಟಾಗಿರುವ ಆಳು ಬೇಕು ಎಂದಾಗ, ಕಚೇರಿಯ ಗುಮಾಸ್ತ ಗರಡಿ ಆಳನ್ನೇ ಹಿಡಿದುಕೊಂಡು ಬಂದು ಡಂಗುರ ಸಾರಿದ- 'ಡಂಗುರಗುಂಡ'
ನಿನ್ನೆಯ ಉತ್ತರಗಳು:
3 ಅಕ್ಷರ: ಕೌಪೀನ, ಪೀಪಿಯ, ನಯನ.
4 ಅಕ್ಷರ: ಹಸುಬಾಲ, ಸುಖಲಕ್ಷ, ಬಾಲಕರು, ಲಕ್ಷರುಚಿ.
-ಎಲ್.ಜಿ. ಜ್ಯೋತೀಶ್ವರ