ನಾನು ಎರಡನೇ ಬಿಬಿಎ ವಿದ್ಯಾರ್ಥಿನಿ. ಮೊದಲನೇ ಸೆಮ್‌ನಲ್ಲಿ ಫಸ್ಟ್ ಬಂದಿದ್ದೀನಿ. ಸಮಸ್ಯೆ ಏನೆಂದರೆ, ನನ್ನ ತಂದೆ ನನಗೆ ಕಾಲೇಜು ಫೀಸಿನ ಹೊರತಾಗಿ ಒಂದು ಪೈಸೆಯನ್ನೂ ಕೊಡುವುದಿಲ್ಲ. ಬೇರೆ ಹುಡ್ಗೀರು ರೀತಿ ನಾನೂ ಹಣ ಖರ್ಚು ಮಾಡಬೇಕು ಅಂತನ್ನಿಸುತ್ತಿದೆ. ಅಪ್ಪ ನನಗೆ ಪಾಕೆಟ್ ಮನಿ ಕೊಡುವ ಹಾಗೆ ಏನಾದರೂ ಪರಿಹಾರ ತಿಳಿಸಿ.
- ಅಶ್ವಿನಿ ಒಡೆಯರ್
ಬಹುಶಃ ನಿನ್ನ ತಂದೆಯ ಮೈಂಡ್‌ಸೆಟ್ ಅನ್ನು ಚೇಂಜ್ ಮಾಡೋದಿಕ್ಕಾಗಲ್ಲ. ಬೇಡ ಬಿಡು, ಪಾಕೆಟ್ ಮನಿ ಅಂತ ಕೇಳೋದಿಕ್ಕೆ ಹೋಗ್ಬೇಡ. 'ಅಪ್ಪ ನಾನು ಕ್ಲಾಸ್‌ಗೆ ಫಸ್ಟ್ ಬಂದ್ರೆ ಸಾವಿರ ರುಪಾಯಿ ಕೊಡು' ಅಂತ ಪ್ರೀತಿಯಿಂದಲೇ ಬೆಟ್ಸ್ ಕಟ್ಟು. ಅದಕ್ಕೆ ಖಂಡಿತಾ ಒಪ್ಪಬಹುದು. ಹೇಗಿದ್ದರೂ ನೀನು ಫಸ್ಟ್ ಬಂದೇ ಬರುತ್ತೀಯಾ, ದುಡ್ಡು ಬಂದಹಾಗೂ ಆಗುತ್ತದೆ. ಅಲ್ಲವೇ?
-ಡಾ. ಸ್ಯಾಟಲೈಟ್