ಬೈಟುಕಾಫಿ

ಮಾನವ ಸ್ನೇಹಿ ಈ ಕರಿಬೇವು

ಬಹುಶಃ ನಿಮಗೂ ಈ ಪ್ರಶ್ನೆ ಕಾಡಿರಬಹುದು. ಕರಿಬೇವು ಯಾಕೆ ಅಷ್ಟು ಪರಿಮಳಯುಕ್ತ, ಸ್ವಾದಿಷ್ಟ? ಅಂತ. ಏಕೆಂದರೆ, ಕರಿಬೇವಿನಲ್ಲಿ ವಿಮುಕ್ತ ಅಮೈನೊ ಆಮ್ಲಗಳೇ ಹೆಚ್ಚಿವೆ. ಅಸ್ಪರಿಜಿನ್, ಗ್ಲೈಸಿನ್, ಸೀರಿನ್, ಆಸ್ಪಾಟೀಕ್ ಆಮ್ಲ, ಗ್ಲುಟಾಮಿಕ್ ಆಮ್ಲ, ತ್ರೇಯೋನಿನ್, ಆ್ಯಲನಿನ್, ಪ್ರೋಲಿನ್, ಟೈರೋಸಿನ್, ಟ್ರಿಫ್ಟೋಫ್ಯಾನ್, ಅಮೈನೊ ಬ್ಯುಟರಿಕ್ ಆಮ್ಲ, ಆರ್‌ನಿತಿನ್, ಲೈಸಿನ್, ಆರ್‌ಜಿನಿನ್ ಮತ್ತು ಹಿಸ್ಪಿಡಿನ್ ಇವುಗಳ ಮೊತ್ತವೇ ಕರಿಬೇವು ಎಂಬ ಪರಿಮಳ ಮತ್ತು ಆರೋಗ್ಯದಾಯಕ ಎಲೆ.
ಅಲ್ಲದೆ, ಕರಿಬೇವಿನ ಕಡ್ಡಿಗಳು ಮತ್ತು ಎಲೆಗಳಲ್ಲಿ ಶೇ.0.8ರಷ್ಟು ಪೊಟ್ಯಾಶ್ ಇದೆ. ಆಗಷ್ಟೇ ಮರದಿಂದ ಕೊಯ್ದ ಎಲೆಗಳನ್ನು ನೀವು ಹಬೆ ಭಟ್ಟಿಗೆ ಹಾಕಿದಾಗ ಶೇ.2.6ರಷ್ಟು ತೈಲ ಸಿಗುತ್ತದೆ. ಕೆಲವೊಂದು ಸಾಬೂನುಗಳಿಗೆ ಗಾಢ ಪರಿಮಳ ಬರಲು ಈ ತೈಲವನ್ನು ಬಳಸಲಾಗುತ್ತದೆ. ಕರಿಬೇವಿನ ತೈಲಕ್ಕೆ ಚರ್ಮವನ್ನು ಕಾಂತಿದಾಯಕಗೊಳಿಸುವ ಸಾಮರ್ಥ್ಯವೂ ಇರುವುದರಿಂದ ಮಾರುಕಟ್ಟೆಯಲ್ಲಿ ಅತ್ಯಧಿಕ ಡಿಮ್ಯಾಂಡ್ ಇದೆ.
ಕರಿಬೇವಿನ ಬಳಕೆಗೆ ಶತಮಾನಗಳ ಇತಿಹಾಸ ಇದೆ. ಅದರಲ್ಲೂ ದಕ್ಷಿಣ ಭಾರತೀಯರಿಗೆ ಕರ್ರಿ ಮತ್ತು ಚಟ್ನಿಗಳಲ್ಲಿ ಬಳಸುತ್ತಾರೆ. ಇನ್ನು ಆಯುರ್ವೇದಿಕ್ ಔಷಧಗಳಲ್ಲಿ ಕರಿಬೇವಿನ ಪಾತ್ರ ಅಮೋಘ ಅಂತಲೇ ಹೇಳಬೇಕು. ಈ ಗಿಡದಲ್ಲಿ ಯಾವುದೂ ನಿಷ್ಪ್ರಯೋಜಕ ಅಲ್ಲ. ಎಲೆ, ತೊಗಟೆ, ಬೇರನ್ನು ಶಕ್ತಿದಾಯಕ, ಜಠರೋತ್ತೇಜಕ, ವಾತಹರ ಗುಣಗಳಿಗಾಗಿ ಬಳಸುತ್ತಾರೆ. ಹುರಿದ ಎಲೆಗಳ ಕಷಾಯವನ್ನು ವಮನ ನಿಲ್ಲಿಸಲು ಬಳಸುತ್ತಾರೆ.
ವಿಷಜಂತುಗಳೇನಾದರೂ ಕಡಿದರೆ, ಅದರ ಮೇಲೆ ಕರಿಬೇವನ್ನು ಪೇಸ್ಟ್ ರೀತಿ ಬಳಿಯಲಾಗುತ್ತದೆ. ವಿಷವನ್ನು ಹೀರುವ ಸಾಮರ್ಥ್ಯವೂ ಈ ಕರಿಬೇವಿಗಿದೆ.
ಅಲ್ಲದೆ, ಕರಿಬೇವನ್ನು ನೀವು ಸಾಂಬಾರಿಗೆ ಹಾಕಿಯೇ ತಿನ್ನಬೇಕಂತಿಲ್ಲ. ಹಸಿಯಾಗಿಯೇ ತಿಂದರೂ ದೇಹಕ್ಕೆ ಅಗತ್ಯ ಪೌಷ್ಟಿಕಾಂಶಗಳನ್ನು ಪಡೆದುಕೊಳ್ಳಬಹುದು. ಹೀಗೆ ಹಸಿರೆಲೆಗಳನ್ನು ತಿನ್ನುವುದರಿಂದ ರಕ್ತಬೇಧಿ ನಿಲ್ಲುತ್ತದೆ. ಎಲೆಯ ಕಷಾಯದ ಜತೆಗೆ ಕಹಿ ಔಷಧ ಬೆರೆಸಿದರೆ ಬಂದ ಜ್ವರವೂ ಹೊರಟು ಹೋಗುತ್ತದೆ.
ಪುದಿನ ಜತೆಗೆ ಎಲೆಗಳನ್ನು ಅರೆದು ಚಟ್ನಿ ಮಾಡಿ ತಿಂದರೆ ಅದು ವಮನ ತಡೆಯುತ್ತದೆ.
ಆಯುರ್ವೇದ ಪದ್ಧತಿಯಲ್ಲಂತೂ ಕರಿಬೇವನ್ನು ಒಣಗಿಸಿ ಮಾಡಿದ ಪುಡಿಯನ್ನಿ ಹಲವು ಚಿಕಿತ್ಸೆಗೆ ಬಳಸುವುದುಂಟು. ಅದಕ್ಕೆ ಜೇನುತುಪ್ಪ, ಅಡಕೆ ರಸ ಬೆರೆಸಿ ಸೇವಿಸಲು ಸೂಚಿಸಲಾಗುತ್ತದೆ. ಕರಿಬೇವಿನ ಎಲೆ, ಹಣ್ಣು, ತೊಗಟೆ ಮತ್ತು ಬೇರುಗಳಲ್ಲಿ 'ಕೊನಿಗಿನ್‌' ಎಂಬ ಗ್ಲೂಕೊಸೈಡ್ ಪದಾರ್ಥ ಇದೆ. ಎಲೆಗಳಿಂದ ನೀರಿನಲ್ಲಿ ತೆಗೆದ ಸಾರವನ್ನು ಹೆಣ್ಣು ಗಿನಿಪಿಗ್‌ಗಳಿಗೆ ಸೇವಿಸಲು ಕೊಟ್ಟಾಗ ಅವುಗಳಲ್ಲಿ ರಕ್ತಕಣ ಸೂಚ್ಯಂಕ ಹೆಚ್ಚುತ್ತದೆ. ಬೇರಿನ ರಸವನ್ನು ಮೂತ್ರಪಿಂಡಗಳಿಗೆ ಸಂಬಂಧಿಸಿದ ನೋವು ಹೋಗಲಾಡಿಸಲು ಕೊಡುತ್ತಾರೆ.
ಒಟ್ಟಿನಲ್ಲಿ ಕರಿಬೇವು ಮಾನವನ ಬಹುತೇಕ ರೋಗಕ್ಕೆ ರಾಮಬಾಣ ಆಗುವಂಥ ಎಲೆ.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!

'ತಂದಿಟ್ಟ ಗಿಡ ಮನೆಗೇ ಹಾನಿ ಮಾಡಿದ್ರೆ..'; 'ನೋ ಕ್ಲಾಸ್', BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚಾ ಸುದೀಪ್

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌ವೇಯಲ್ಲಿ ಅಪಘಾತಕ್ಕೆ ಬಿಗ್ ಟ್ವಿಸ್ಟ್: ಸ್ನೇಹಿತನಿಂದಲೇ ಭೂಮಿಕಾ ಕೊಲೆ?