ಬೈಟುಕಾಫಿ

ಮೆಂತ್ಯ ಉತ್ಪಾದನೆ; ನಾವೇ ನಂಬರ್ 1

ಇವತ್ತು ಮೆಂತ್ಯದ ಬಗ್ಗೆ ಚರ್ಚಿಸೋಣ. ತುಂಬಾ ಖುಷಿಯ ವಿಚಾರವೆಂದರೆ, ಜಗತ್ತಿನಲ್ಲಿ ಮೆಂತ್ಯವನ್ನು ಅತಿಹೆಚ್ಚು ಉತ್ಪಾದಿಸುತ್ತಿರುವುದು ನಾವೇ.
ಇದರ ಶಾಸ್ತ್ರೀಯ ಹೆಸರು ಟ್ರಿಗೊನೆಲ್ಲಾ ಫೀನಂ- ಗ್ರೀಕಂ ಲಿನ್. ಲೆಗ್ಯುಮಿನೇಸಿ ವಂಶಕ್ಕೆ ಸೇರಿದೆ. ಇನ್ನೊಂದು ಅಚ್ಚರಿಯೆಂದರೆ, ಭಾರತದ ಬಹುತೇಕ ಭಾಷೆಗಳಲ್ಲಿ ಇದನ್ನು ಒಂದೇ ಹೆಸರಿನಿಂದ ಕರೆಯುವುದು. ಹಿಂದಿ, ಬಂಗಾಳಿ, ಗುಜರಾತಿ, ಮರಾಠಿ, ಒರಿಯಾ, ಪಂಜಾಬಿ, ಸಂಸ್ಕೃತ ಮತ್ತು ಉರ್ದುವಿನಲ್ಲಿ ಇದನ್ನು 'ಮೇತಿ' ಎಂದು ಕರೆಯುತ್ತಾರೆ. ಮಲಯಾಳಂನಲ್ಲಿ 'ವೆಂಟಯನ್‌', ತಮಿಳಿನಲ್ಲಿ 'ವೆಂದಾಯಂ', ತೆಲುಗಿನಲ್ಲಿ 'ಮೆಂತಲು' ಎಂಬ ಹೆಸರುಗಳಿವೆ.
ಇದು ಪರ್ಣಸ್ವರೂಪಿ ವರ್ಷಾವಧಿ ಗಿಡ. ಒಣಗಿಸಿದ ಬಲಿತ ಹಣ್ಣು. ಇದನ್ನು ಮುಖ್ಯವಾಗಿ ಭಾರತ, ಇರಾನ್, ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ, ಅರ್ಜೆಂಟಿನಾ, ಈಜಿಪ್ಟ್, ಫ್ರಾನ್ಸ್, ಸ್ಪೇನ್, ಟರ್ಕಿ, ಮೊರೊಕ್ಕೊ ಮತ್ತು ಚೀನಾಗಳಲ್ಲಿ ಬೆಳೆಯಲಾಗುತ್ತದೆ. ಭಾರತದಲ್ಲಿ ಮೆಂತ್ಯವನ್ನು ಅತಿಹೆಚ್ಚು ಬೆಳೆಯುವುದು ರಾಜಸ್ಥಾನ. ನಂತರದ ಸ್ಥಾನದಲ್ಲಿ ಗುಜರಾತ್, ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಹರ್ಯಾಣ, ಪಂಜಾಬ್ ರಾಜ್ಯಗಳಿವೆ. ದೇಶದ ಶೇ.80ರಷ್ಟು ಮೆಂತ್ಯವನ್ನು ರಾಜಸ್ಥಾನವೊಂದೇ ಉತ್ಪಾದಿಸುತ್ತದೆ.
ಮೆಂತ್ಯವನ್ನು ನೀವೆಲ್ಲ ನೋಡೇ ಇರುತ್ತೀರಿ. ಅದರ ಬೀಜವು ಚಿಕ್ಕದಾಗಿ ಹಳದಿ- ಕಂದುಬಣ್ಣ ಹೊಂದಿರುತ್ತದೆ. ಕೆಲವರು ಇದನ್ನು 'ಕಹಿ' ಎಂದು ದೂರ ತಳ್ಳುವುದುಂಟು. ಆದರೆ, ನಾನಿದನ್ನು 'ಕಹಿ' ಎನ್ನಲಾರೆ. ಇದು 'ಹಿತವಾದ ಕಹಿ'. ಇದು ದೇಹಕ್ಕೆ 'ಅತ್ಯಗತ್ಯವಿರುವ ಕಹಿ'. ವಿಲಕ್ಷಣ ವಾಸನೆ ಇದರ ಇನ್ನೊಂದು ಗುಣ.
ಇದರ ಬೀಜ ಅತಿ ಪ್ರಮುಖವಾದ ಸಂಬಾರದ ಪದಾರ್ಥ. ಸೊಪ್ಪು ಕೂಡ ಅತಿ ಪ್ರಮುಖ ತರಕಾರಿ. ಈ ಸೊಪ್ಪು ನಮಗಷ್ಟೇ ಅಲ್ಲ, ಜಾನುವಾರುಗಳಿಗೂ ಅತ್ಯುತ್ತಮ ಆಹಾರ. ಈ ಗಿಡವು 30-60 ಸೆಂ.ಮೀ. ಎತ್ತರಕ್ಕೆ ಬೆಳೆದು, ತಿಳಿ ಹಸಿರು ಎಲೆಗಳನ್ನು, ತೆಳುವಾದ ಮತ್ತು ತುದಿಯಲ್ಲಿ 10-15 ಸೆಂ.ಮೀ. ಉದ್ದದ ಕಾಯಿಗಳನ್ನು ಕೊಡುತ್ತದೆ. ಒಂದೊಂದು ಕಾಯಿಯಲ್ಲೂ 10- 20 ಚಿಕ್ಕ ಗಟ್ಟಿಯಾದ ಹಳದಿ- ಕಂದುಬಣ್ಣದ ಬೀಜಗಳು. ಭಾರತದಲ್ಲಿ ಬೆಳೆಯುವ ಕಿರಿಯ ಸಂಬಾರ ದಿನಸಿಗಳಲ್ಲಿ ಇದಕ್ಕೆ ವಿಸ್ತೀರ್ಣದಲ್ಲಿ ಮೂರನೇ ಸ್ಥಾನ. ನಿಮಗೆ ಗೊತ್ತಿರಲಿ, ಭಾರತ ಪ್ರಪಂಚದ ಹಿರಿಯ ಸಂಬಾರ ದಿನಸಿಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುವ ದೇಶ.
ಆದರೆ, ಇಲ್ಲೂ ಒಂದು ಬೇಜಾರಿನ ಸಂಗತಿಯಿದೆ. ಅದು ನಮ್ಮ ಸಾಮಾನ್ಯ ಕೊರತೆಯೂ ಹೌದು. ಭಾರತ ಅತಿದೊಡ್ಡ ಮೆಂತ್ಯ ಉತ್ಪಾದಕ ರಾಷ್ಟ್ರವಾದರೂ, ಉತ್ತಮ ಗುಣಮಟ್ಟದ ಮೆಂತ್ಯ ಕೊಡಲು ನಮ್ಮಿಂದ ಸಾಧ್ಯವಾಗಿಲ್ಲ. ನಮ್ಮ ಮೆಂತ್ಯಗೆ ರೋಗನಿರೋಧಕ ಶಕ್ತಿ ಇಲ್ಲ. ವಿವಿಧ ಹವಾಮಾನಗಳಿಗೆ ಒಗ್ಗುವಂಥ ಮೆಂತ್ಯವನ್ನು ನಾವು ಉತ್ಪಾದಿಸಿಲ್ಲ. ಈ ಬಗ್ಗೆ ತಜ್ಞರು ಸಂಶೋಧನೆ ನಡೆಸಬೇಕು. ಇಲ್ಲದಿದ್ದರೆ ಈ ಸಾಧನೆಯನ್ನು ಬೇರೊಂದು ದೇಶ ಮಾಡಬಹುದು. ಮೆಂತ್ಯ ಉತ್ಪಾದನೆಯಲ್ಲಿ ಪ್ರಭುತ್ವವನ್ನೂ ಸಾಧಿಸಬಹುದು.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್