ಕರ್ನಾಟಕ ಲಲಿತಕಲಾ ಅಕಾಡೆಮಿ ಮುಧೋಳದಲ್ಲಿ ನಡೆದ 41ನೇ ವಾರ್ಷಿಕ ಚಿತ್ರಕಲಾ ಪ್ರದರ್ಶನದ ಮರು ಪ್ರದರ್ಶನವನ್ನು ಜವನರಿ 28ರಿಂದ ಫೆಬ್ರವರಿ 2ರವರೆಗೆ ಏರ್ಪಡಿಸಿದೆ. 28.01.2013ರಂದು ಕೆ.ಎನ್. ರಾಮಚಂದ್ರನ್ ಅವರಿಂದ ಉದ್ಘಾಟನೆಗೊಳ್ಳುವ ಈ ಸಮಾರಂಭದ ಅಧ್ಯಕ್ಷತೆಯನ್ನು ಚಿ.ಸು. ಕೃಷ್ಣ ಸೆಟ್ಟಿ ವಹಿಸಲಿದ್ದಾರೆ.
ಸ್ಥಳ: ವೆಂಕಟಪ್ಪ ಆರ್ಟ್ ಗ್ಯಾಲರಿ, ಕಸ್ತೂರ ಬಾ ರಸ್ತೆ, ಬೆಂಗಳೂರು.
ದಿನಾಂಕ: 28.01.2013, ಸಮಯ: ಬೆಳಗ್ಗೆ 11 ಗಂಟೆ.
ದಾನ (ಸಣ್‌ಸ್ಟೋರಿ)
ಒಂದು ದಿನ ಒಬ್ಬ ಸೈಕಲ್ ಸವಾರನು ಒಬ್ಬ ಪಾದಚಾರಿಗೆ ಡಿಕ್ಕಿ ಹೊಡೆದನು. ಆಗ ಪಾದಚಾರಿ ಹಾಗೂ ಸೈಕಲ್ ಸವಾರ ಇಬ್ಬರೂ ಕೆಳಗೆ ಬಿದ್ದರು. ನಂತರ ಪಾದಚಾರಿಯು ಸಾವಕಾಶವಾಗಿ ಎದ್ದು ನಿಂತು ತನ್ನ ಬಟ್ಟೆಗೆ ಅಂಟಿದ ಧೂಳನ್ನು ಝಾಡಿಸಿಕೊಂಡನು.
ಅಷ್ಟೊತ್ತಿಗೆ ಸೈಕಲ್ ಸವಾರನೂ ಎದ್ದು ನಿಂತನು. ಆಗ ಪಾದಚಾರಿಯು ತನ್ನ ಜೇಬಿನಲ್ಲಿ ಕೈಹಾಕಿ ಜೇಬಿನಿಂದ ಐದು ರೂಪಾಯಿಯ ನಾಣ್ಯವನ್ನು ಹೊರಗೆ ತೆಗೆದು ಸೈಕಲ್ ಸವಾರನಿಗೆ ಕೊಟ್ಟನು. ಆಗ ಸೈಕಲ್ ಸವಾರನು ಆಶ್ಚರ್ಯಚಕಿತನಾಗಿ, 'ನಾನು ನಿಮಗೆ ಡಿಕ್ಕಿ ಹೊಡೆಸಿ ಬೀಳಿಸಿದವ. ಆದರೂ ತಾವು ಸಿಟ್ಟು ಮಾಡಿಕೊಳ್ಳದೆ, ನನಗೇ ಐದು ರೂಪಾಯಿಗಳನ್ನು ಕೊಡುತ್ತಿದ್ದೀರಲ್ಲ' ಎಂದ.
ಆಗ ಆ ಪಾದಚಾರಿ 'ಅಂಧರಿಗೆ ದಾನ ಮಾಡುವುದು ನನ್ನ ಕರ್ತವ್ಯ ವೆಂದು ತಿಳಿಯುತ್ತೇನೆ' ಎಂದು ಮುಂದೆ ನಡೆದು ಹೋದ. ಇದನ್ನು ಕೇಳಿಸಿಕೊಂಡ ಸೈಕಲ್ ಸವಾರನು ಕಕ್ಕಾಬಿಕ್ಕಿಯಾಗಿ ನಿಂತುಬಿಟ್ಟ.
= ಮಲ್ಲಿಕಾರ್ಜುನ ಹ. ಬಗಲಿ