ಬೈಟುಕಾಫಿ

ಜೀವನಕ್ಕೆ ಆದರ್ಶವಿರಲಿ... (ವಿವೇಕ ವಿಚಾರ)

ನಾವು ಹೇಗೆಂದರೆ ಹಾಗೆ ಬದುಕುವುದೆಂದರೆ ಅದು ಮರಳುಗಾಡಿನಲ್ಲಿ ಪಯಣ ಕೈಗೊಂಡಂತೆ ನಿರರ್ಥಕ. ಸಾರ್ಥಕ ಜೀವನ ನಮ್ಮದಾಗಬೇಕಾದರೆ ಆದರ್ಶವನ್ನು ಹೊಂದಬೇಕು. ನಮ್ಮ ಇತಿಮಿತಿ, ಶಕ್ತಿಯನ್ನು ಒಗ್ಗೂಡಿಸಿ ಗುರಿಯತ್ತ ಮುನ್ನುಗ್ಗುವಂತೆ ಪ್ರೇರೇಪಿಸುವ ಪ್ರಚ್ಛನ್ನ ಶಕ್ತಿ. ಅದು ಬದುಕಿಗೆ ಜಾಗರೂಕತೆಯನ್ನು ತಂದುಕೊಡುತ್ತದೆ.
'ಜೀವನದಲ್ಲಿ ಒಂದು ಮಹಾ ಆದರ್ಶವನ್ನು ಸ್ವೀಕರಿಸಿ ಅದಕ್ಕಾಗಿ ಬಾಳನ್ನು ಅರ್ಪಿಸುವುದೇ ಸೌಭಾಗ್ಯ. ನಿಮ್ಮ ಪಾಲಿಗೆ ಏನು ಬರುವುದೋ ಅದನ್ನು ಕುರಿತು ಚಿಂತಿಸಬೇಡಿ. ಆದರ್ಶವನ್ನು ಬಿಡಬೇಡಿ, ಮುನ್ನಡೆಯಿರಿ.'
'ನಮ್ಮ ಕ್ರಿಯೆಗಳೆಲ್ಲ ಆತ್ಮತ್ಯಾಗಕ್ಕೆ ಸಹಾಯಕವಾಗಲಿ. ಇಡೀ ಜಗತ್ತೇ ಒಂದು, ನೀವು ಅದರ ಒಂದು ಸಣ್ಣ ಅಂಶವಷ್ಟೇ. ಆದ್ದರಿಂದ ನಿಮ್ಮ ಕ್ಷುದ್ರ ಅಹಂಕಾರವನ್ನು ವೃದ್ಧಿಪಡಿಸುವುದಕ್ಕಿಂತ ನಿಮ್ಮ ಲಕ್ಷಾಂತರ ಸಹೋದರರ ಸೇವೆ ಮಾಡುವುದು ಮೇಲು'
'ಆದರ್ಶವನ್ನು ಅನುಷ್ಠಾನಕ್ಕೆ ತರುವ ವಿಧಾನವನ್ನು ತಿಳಿದುಕೊಳ್ಳಬೇಕು. ಅನುಷ್ಠಾನಕ್ಕೆ ಅಸಾಧ್ಯವಾದ ಆದರ್ಶಗಳನ್ನು ಇಟ್ಟುಕೊಳ್ಳಬಾರದು. ನಿಮಗೆ ದಾರಿ ತೋರುವುದಕ್ಕೆ ಆದರ್ಶವಿಲ್ಲದಿದ್ದರೆ ಪ್ರಾಣಿಗಳಂತಾಗುತ್ತೀರಿ. ಆದ್ದರಿಂದ ಅದ್ಭುತ ಆದರ್ಶ ಮತ್ತು ಅದ್ಭುತ ಅನುಷ್ಠಾನ ಇವೆರಡನ್ನೂ ನಮ್ಮ ಜೀವನದಲ್ಲಿ ಒಂದುಗೂಡಿಸಲು ಯತ್ನಿಸಬೇಕು. ಅತಿ ಸಣ್ಣ ಕೆಲಸವನ್ನು ಕೂಡ ಮಾಡಲು ಸಿದ್ಧರಾಗಬೇಕು'
'ತ್ಯಾಗ ಮತ್ತು ಸೇವೆಗಳೇ ಭಾರತದ ಅವಳಿ ಆದರ್ಶಗಳಾಗಿವೆ. ತ್ಯಾಗ ಮಾತ್ರವೇ ಭಾರತದಲ್ಲಿ ಎಲ್ಲ ಕಾಲಕ್ಕೂ ಚಾಲಕ ಶಕ್ತಿಯನ್ನು ಪಡೆದುಕೊಂಡು ಬಂದಿದೆ.' <
= ಆನಂದ ಎಸ್.ಎನ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

'ಸುಪ್ರೀಂ ಕೋರ್ಟ್‌ಗೆ ಅಲೆದು, ಅಲೆದು ಸಾಕಾಗಿ ಹೋಗಿದೆ'; ಹಿರಿಯ ವಕೀಲ ಕಪಿಲ್ ಸಿಬಲ್ ಅಚ್ಚರಿ ಹೇಳಿಕೆ, ನ್ಯಾಯಾಲಯ ಹೇಳಿದ್ದೇನು?

ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ: 3ನೇ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ 'INS ಮಂಗ್ರೋಲ್' ಸೇರ್ಪಡೆ-Video

ಪ್ರತಿಭಟನಾಕಾರರಿಗೆ ಬಿಗ್ ಶಾಕ್; ಇನ್ಮುಂದೆ ದೆಹಲಿ Jantar Mantarನಲ್ಲಿ ಧರಣಿ ನಡೆಸುವಂತಿಲ್ಲ..!

'ಹೃದಯದ ಪ್ರಮುಖ ರಕ್ತನಾಳದಲ್ಲಿ ರಕ್ತದ ಹೆಪ್ಪುಗಟ್ಟುವಿಕೆ'; ಮರಣೋತ್ತರ ಪರೀಕ್ಷೆಯಲ್ಲಿ ನಟ ನಾನಾ ಪಟೇಕರ್ ಸಾವಿನ ಕಾರಣ ಬಹಿರಂಗ!