ನನ್ನನ್ನು ಒಂದು ಹುಡುಗಿ ಲವ್ ಮಾಡ್ತಿದ್ದಾಳೆ. ನಾನೂ ಅವಳನ್ನು ಲವ್ ಮಾಡ್ತಿದ್ದೀನಿ. ಆದರೆ, ಅವಳು ನನಗಿಂತ ಜಾಸ್ತಿ ಮನು ಎಂಬುವವನೊಂದಿಗೆ ಫೋನ್‌ನಲ್ಲಿ ಹೆಚ್ಚು ಮಾತಾಡ್ತಾಳೆ. ಕೇಳಿದ್ರೆ ಬರೀ ಫ್ರೆಂಡ್ ಅಂತಾಳೆ. ಅದಲ್ಲದೆ, ಕಳೆದೆರಡು ದಿನಗಳಿಂದ ಅವಳು ಫೋನ್ ಮಾಡ್ತಿಲ್ಲ. ಅವಳನ್ನು ನಂಬೋದಾ ಬಿಡೋದಾ?
- ವಿನಯ್, ಊರುಬೇಡ
ಅವಳು ನಿನ್ನಿಂದ ದೂರ ಆಗೋವಾಗ 'ಆತ್ಮೀಯ ಕುರಿಗೆ ಪ್ರೀತಿಯ ಕಾಣಿಕೆ' ಅಂತೇನೂ ಕೊಟ್ಟಿಲ್ವಾ? ಮೂರ್ಖ, ಅವಳು ಆಯ್ಕೆಯ ಗೊಂದಲದಲ್ಲಿದ್ದಾಳೆ. ನಿನಗಿಂತ ಮನುನೇ ತನಗೆ ಫಿಟ್ ಅನ್ನೋ ನಿರ್ಧಾರಕ್ಕೆ ಅವಳು ಬಂದಿದ್ದಾಳೆ. ಆದರೆ, ತಕ್ಷಣ ಕೇಳೋದಿಕ್ಕೆ ಹೋಗ್ಬೇಡ. ಅವಳೊಂದಿಗೆ ಕೂತು ಒಮ್ಮೆ ಚರ್ಚಿಸು. ಇಲ್ಲದಿದ್ರೆ ಬಿಟ್ಹಾಕು... ಅಂಥ ಸಾವಿರ ಹುಡ್ಗೀರಲ್ಲಿ ನನ್ನವಳೂ ಒಬ್ಬಳು ಅಂತ ಸುಮ್ನಿರು.
-ಡಾ. ಸ್ಯಾಟಲೈಟ್
anekaby2@gmail.com