ಬೈಟುಕಾಫಿ

ನಾಲಿಗೆ ನುಲಿ

ಚೋದ್ಯ ಚುಂಬಿತ ಚಾರು ಕೇಶಿಗಳು ಚೆಚನ್ಯಾದಿಂದ ಚೈನಾವರೆಗೆ, ಚಿಲಿಯಿಂದ ಚೆನ್ನೈವರೆಗೆ, ಚೀರದೆ ಚರ್ಚಿಸಿ, ಚೆನ್ನಾಗಿ ಚೇತರಿಸಿಕೊಂಡರು.
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಛಾಯಾಚಿತ್ರ, ರೇಖಾಚಿತ್ರ ಅಥವಾ ಕನ್ನಡಿಯಲ್ಲಿ ನನ್ನ ಬಿಂಬವನ್ನು 'ತೋರಿಸು'-
ಕೈಯಲ್ಲಿರುವುದು ಬಿಸಿ, ಆದ್ದರಿಂದ ಎಸೆದುಬಿಡು, 'ಬಿಸಾ'ಕು- ಒಂದೇಪದ-
ಮುಟ್ಟಿದ್ದನ್ನು ತನ್ನ ಶಾಖ ಅಥವಾ ಶಕ್ತಿಯಿಂದ ಹತ್ತಿಕೊಂಡು ಉರಿಯುವಂತೆ ಮಾಡುವ-
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಇದು 'ಕೈ'ವಶವಾಗಿರುವ, ಅಭ್ಯಾಸದಿಂದ ವಶವಾಗಿರುವ ಕೌಶಲ್ಯ-
ಮನೆಗೆ ತಂದ 'ಮಣಿ'ಯನ್ನು ಹೆಂಡತಿ ನನಗೇ ಇರಲಿ ಎಂದು ಇಟ್ಟುಕೊಂಡಳಂತೆ-
'ಗಣಿ'ಯ ಲೆಕ್ಕಾಚಾರಕ್ಕೆ 'ತ' ಸೇರಿದರೆ, ಅಲ್ಲಿ ಲಾಭ ಲಭ್ಯ ಎನ್ನಬಹುದು-
ಇದು ಪ್ರತ್ಯೇಕವಾಗಿ 'ಎತ್ತಿಡು' ಎಂದು ಹೇಳುವ ಆಡು ಭಾಷೆಯ ಪದ-
ಗತಪ್ರತ್ಯಾಗತ
ನಮ್ಮ ಆಚಾರಿ ಬಹಳ ಒಳ್ಳೆಯವನು. ಅದಕ್ಕೇ ಅವನನ್ನು 'ಸದಾಚಾರಿ ಎಂದು ಕರೆಯುತ್ತಿದ್ದೆವು. ಆದರೆ, ಅವನು ಮಾತ್ರ 'ಚಾ'ಗೆ (ಇಂಗ್ಲಿಷ್‌ನ 'ಟೀ') ಪರಮದಾಸನಾಗಿ ಬಿಟ್ಟ. ಅವನನ್ನು ಹೀಗೆ ಕರೆಯೋಣವೇ?
- ಸದಾಚಾರಿಚಾದಾಸ
ನಿನ್ನೆಯ ಉತ್ತರಗಳು:
3 ಅಕ್ಷರ:  ದಹನ, ಹನುಮ, ನಮನ
4 ಅಕ್ಷರ:  ಅನುಗ್ರಹ, ನುಗ್ಗೇಹಳ್ಳಿ, ಗ್ರಹಚಾರ, ಹಳ್ಳಿರಸ್ತೆ

-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

'ರಾಹುಲ್ ಗಾಂಧಿ ಅವರೇ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರಲ್ಲ': ವಿಪಕ್ಷದವರದ್ದು 'ನಗರ ನಕ್ಸಲ್' ಮನಸ್ಥಿತಿ; ನಿತಿನ್ ನಬಿನ್