ಬೈಟುಕಾಫಿ

ವಿಟಮಿನ್‌ಗಳ ಕಣಜ ಮೆಂತ್ಯ

ಮೆಂತ್ಯ ಸಂಯೋಜನೆಯನ್ನು ಬೇರೆ ಬೇರೆ ಪ್ರದೇಶಗಳ ತಳಿಗಳ ಆಧಾರದ ಮೇಲೆ ವಿಂಗಡಿಸಬಹುದು. ಜಗತ್ತಿನಲ್ಲಿ ಮೆಂತ್ಯ ಒಂದೇ ರೀತಿಯ ಸಂಯೋಜನೆ ಹೊಂದಿರುವುದಿಲ್ಲ.
ಆದರೂ ಸಾಮಾನ್ಯವಾಗಿ ಹೀಗೆ ಸಂಯೋಜನಾ ವರದಿ ಸಿದ್ಧಪಡಿಸಬಹುದು. ಶೇ.6.3 ತೇವಾಂಶ, ಸಸಾರಜನಕ ಪದಾರ್ಥ ಶೇ.9.5, ಜಿಡ್ಡು ಶೇ.10, ನಾರು ಶೇ.18.5, ಶರ್ಕರ ಪದಾರ್ಥಗಳು ಶೇ.42.3, ಬೂದಿ ಶೇ.13.4, ಕ್ಯಾಲ್ಷಿಯಂ ಶೇ.1.3, ರಂಜಕ ಶೇ.9.48, ಕಬ್ಬಿಣ ಶೇ.0.0115, ಸೋಡಿಯಂ ಶೇ.0.09, ಪೊಟ್ಯಾಷಿಯಂ ಶೇ.1.7 ಹಾಗೂ ವಿಟಮಿನ್ 'ಎ' ಒಳಗೊಂಡಿದೆ. ಶೇ.23ರಷ್ಟು ಅಂಟು ಪದಾರ್ಥವೂ ಇದೆ. ಅವಶ್ಯಕ ಅಮೈನೊ ಆಮ್ಲಗಳು ಇದರಲ್ಲಿ ಹೆಚ್ಚು. ಎಲೆ ಮತ್ತು ದಂಟುಗಳಲ್ಲಿ ಸುಣ್ಣದಾಂಶ, ಕಬ್ಬಿಣ, ಕ್ಯಾರೋಟಿನ್, ಆಸ್ಕಾರ್ಬಿಕ್ ಆಮ್ಲ ಹೆಚ್ಚಿದೆ.
ಮೆಂತ್ಯದಲ್ಲಿ ಎಣ್ಣೆ ಶೇ.6ರಷ್ಟು ಇರುತ್ತದೆ. ಜಿಡ್ಡಿನ ಆಮ್ಲಗಳು ಮುಖ್ಯವಾಗಿ ಲಿನೊಲಿಯಿಕ್, ಒಲಿಯಿಕ್ ಇದರಲ್ಲಿದೆ. ಈ ಆಮ್ಲಗಳಿಗೆ ಒಣಗುವ ಗುಣ ಇದ್ದು, ಒಣಗಿದ ಎಣ್ಣೆ ಬಂಗಾರದ ಹಳದಿ ಬಣ್ಣ ಪಡೆಯುತ್ತದೆ. ಮೆಂತ್ಯದಲ್ಲಿ ಚಂಚಲ ತೈಲದ ಪ್ರಮಾಣ ತೀರಾ ಕಡಿಮೆ. ಅಂದರೆ, ಶೇ.0.002ರಷ್ಟು ಇರುತ್ತದೆ. ಇದಕ್ಕೆ ಕಂದುಬಣ್ಣವೂ ಸ್ವಲ್ಪ ವಾಸನೆಯೂ ಇರುತ್ತದೆ.
ಮೆಂತ್ಯವನ್ನು ಒತ್ತಡದಲ್ಲಿ ಬೇಯಿಸುವುದರಿಂದ ಆಸ್ಕಾರ್ಬಿಕ್ ಆಮ್ಲದ ನಷ್ಟವು ಹಾಗೆಯೇ ಹುರಿಯುವುದಕ್ಕಿಂತ ಕಡಿಮೆ ಆಗುತ್ತದೆ. ಆಸ್ಕಾರ್ಬಿಕ್ ಆಮ್ಲದ ನಷ್ಟವು ಸಾಮಾನ್ಯ ಉಷ್ಣಾಂಶದಲ್ಲಿ, ಶೀತಕ ಯಂತ್ರದಲ್ಲಿ ಆಗುವುದಕ್ಕಿಂತ ಹೆಚ್ಚಾಗಿರುತ್ತದೆ. ಹೊಸ ಒಣಗಿದ ಮೆಂತ್ಯದ ಬೀಜಗಳಲ್ಲಿ 150 ಮಿ.ಗ್ರಾಂ. ಟ್ರೆಗೋನೆಲಿನ್ ಪದಾರ್ಥ ಇರುತ್ತದೆ. ನಿಕೊಟಿನಿಕ್ ಆಮ್ಲ ಇರುವುದಿಲ್ಲ.
ಹಸಿ ಮೆಂತ್ಯದ ಎಲೆಗಳಲ್ ವಿಟಮಿನ್ 'ಸಿ' ಅಂಶ 100 ಗ್ರಾಂ.ಗೆ 43.10 ಮಿ.ಗ್ರಾಂ.ನಷ್ಟು ಇರುತ್ತದೆ. ನೀರಿನಲ್ಲಿ ಬೇಯಿಸಿದಾಗ ಮತ್ತು ಹುರಿದಾಗ ಎಲೆಯ ಶೇ.10.8 ಮತ್ತು ಶೇ.7.4 ವಿಟಮಿನ್ ಕಳೆದುಕೊಳ್ಳುತ್ತದೆ.
ಮೆಂತ್ಯದ ಉಪಯೋಗ ಇಂದು ನಿನ್ನೆಯದೇನಲ್ಲ. ದೇಹಕ್ಕೆ ತುಂಬಾ ಉಷ್ಣವಾಗಿದ್ದಾಗ, ಮೆಂತ್ಯ ಕಾಫಿ ಮಾಡಿ ಕುಡಿಯುವುದು ರೂಢಿ. ಎಳೆಯ ಹಸಿರು ಕಾಯಿಗಳನ್ನು ಎಲೆ ಮತ್ತು ದಂಟುಗಳನ್ನು ಪೂರ್ವಕಾಲದಿಂದ ಭಾರತ ಮತ್ತು ಈಜಿಪ್ಟ್‌ಗಳಲ್ಲಿ ಪಲ್ಯದ ರೂಪದಲ್ಲಿ ತಿನ್ನುತ್ತಾರೆ. ಇದರಲ್ಲಿ ಪೋಷಕಾಂಶಗಳು ಅತ್ಯಧಿಕ. ಕಬ್ಬಿಣ, ಸಸಾರಜನಕ ಪದಾರ್ಥ, ವಿಟಮಿನ್ 'ಎ', ವಿಟಮಿನ್ 'ಸಿ' ಹೆಚ್ಚಾಗಿರುತ್ತದೆ. ಸಂಬಾರ ದಿನಸಿಯಾಗಿ ಮಂತ್ಯ ಉಪಯೋಗ ಹಲವು. ಮದ್ಯ ತಯಾರಿಕೆಯಲ್ಲೂ ಮೆಂತ್ಯ ಬಳಸುತ್ತಾರೆ. ಅಲ್ಲದೆ, ದೂರಪ್ರಾಚ್ಯದ ದೇಶಗಳಲ್ಲಿ ಮಾಂಸರಹಿತ ಆಹಾರಗಳಿಗೆ ಇದನ್ನು ಉಪಯೋಗಿಸುವುದುಂಟು. ಬಹುಶಃ ಮೆಂತ್ಯ ಉಪಯೋಗ ಹೇಳಿದಷ್ಟು ಮುಗಿಯದು. ನಾಳೆ ಅದರ ಮಹತ್ವಗಳ ಬಗ್ಗೆ ಇನ್ನಷ್ಟು ಚರ್ಚಿಸೋಣ.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!